Asianet Suvarna News Asianet Suvarna News

ಬಂಡೀಪುರದಲ್ಲಿ ವಿಭಿನ್ನ ಕಣ್ಣುಗಳ ಚಿರತೆ ಪತ್ತೆ!

ಜನಪ್ರಿಯ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಭಿನ್ನ, ವಿಶೇಷ ಚಿರತೆ ಕ್ಯಾಮೆರಾಗೆ ಸೆರೆಯಾಗಿದ್ದು ಚಿರತೆಯ ಎರಡು ಕಣ್ಣುಗಳು ವಿಭಿನ್ನ ಬಣ್ಣದ್ದಾಗಿದೆ.

Leopard with different eyes found in Bandipur snr
Author
First Published Aug 5, 2024, 11:43 AM IST | Last Updated Aug 5, 2024, 11:43 AM IST

 ಚಾಮರಾಜನಗರ :  ಜನಪ್ರಿಯ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಭಿನ್ನ, ವಿಶೇಷ ಚಿರತೆ ಕ್ಯಾಮೆರಾಗೆ ಸೆರೆಯಾಗಿದ್ದು ಚಿರತೆಯ ಎರಡು ಕಣ್ಣುಗಳು ವಿಭಿನ್ನ ಬಣ್ಣದ್ದಾಗಿದೆ.

ವನ್ಯಜೀವಿ ಛಾಯಾಗ್ರಹಕ ಧ್ರುವ್ ಪಾಟೀಲ್ ಈ ಚಿತ್ರವನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಭಾರತದಲ್ಲಿ ಈ‌ ರೀತಿ ಚಿರತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ವನ್ಯ ಜೀವಿ ಮಂಡಳಿಗೆ ನನ್ನ ನೇಮಕಾತಿಗೂ, ತಂದೆಯ ರಾಜಕೀಯಕ್ಕೂ ಸಂಬಂಧ ಇಲ್ಲ: ಧ್ರುವ ಪಾಟೀಲ ಸ್ಪಷ್ಟನೆ

ಹೆಣ್ಣು ಚಿರತೆಯೊಂದು ಮರದ ಮೇಲೆ ವಿರಮಿಸುವ ಚಿತ್ರ ಸೆರೆ ಹಿಡಿಯಲಾಗಿದ್ದು ಇದರ ಎರಡು ಕಣ್ಣುಗಳು ಕೂಡ ಬೇರೆ ಬಣ್ಣದ್ದಾಗಿವೆ.‌ ಚಿರತೆಯ ಎಡಗಣ್ಣು ಕಂದು ಬಣ್ಣದ್ದಾಗಿದ್ದು ಬಲಗಣ್ಣು ನೀಲಿ ಹಸಿರಿನಿಂದ ಕೂಡಿದೆ. ಕಣ್ಣುಗಳ ಬಣ್ಣಕ್ಕೆ ಹೆಟ್ರೋಕ್ರೊಮಿಯಾ ಎಂಬುದು ಕಾರಣವಾಗಿದ್ದು ಭಾರತದಲ್ಲಿ ಈ ರೀತಿಯ ವಿಭಿನ್ನ ಕಣ್ಣುಗಳು ಹೊಂದಿರುವ ಚಿರತೆ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಬಂಡೀಪುರದಲ್ಲಿ ಅಪರೂಪದ, ವಿಶೇಷವಾದ, ವಿಭಿನ್ನವಾದ ಚಿರತೆಯನ್ನು ವನ್ಯಜೀವಿ ಛಾಯಾಗ್ರಾಹಕ ಧ್ರುವ್ ಪಾಟೀಲ್ ಪತ್ತೆಹಚ್ಚಿದ್ದಾರೆ. 

Latest Videos
Follow Us:
Download App:
  • android
  • ios