ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದುರ್ಗಾಬೆಟ್ಟದ ಬಳಿ ಚಿರತೆ ಸೆರೆ| ಈ ಹಿಂದೆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಗಜ ಪಡೆಯಿಂದ ನಡೆಸಿದ್ದ ಕಾರ್ಯಾಚರಣೆ ವಿಫಲವಾಗಿತ್ತು| 

ಗಂಗಾವತಿ(ಜ.18): ಕಳೆದ ಕೆಲವು ತಿಂಗಳುಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜನರ ನಿದ್ದೆಗಡೆಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು(ಸೋಮವಾರ) ಬೆಳಗಿನಜಾವ ತಾಲೂಕಿನ ಆನೆಗೊಂದಿ ದುರ್ಗಾಬೆಟ್ಟದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 6 ವರ್ಷದ ಗಂಡು ಚಿರತೆ ಬಿದ್ದಿದೆ ಎಂದು ತಿಳಿದು ಬಂದಿದೆ. 

'ಸಿಎಂ ಯಡಿಯೂರಪ್ಪ ವಚನಭ್ರಷ್ಟ ಆಗ್ತಾರೆ ಅನ್ನೋ ಅನುಮಾನ ಇದೆ'

ಕಳೆದ ಎರಡು ತಿಂಗಳ ಹಿಂದೆ ದುರ್ಗಾಬೆಟ್ಟದಲ್ಲಿ ದೇವಸ್ಥಾನದ ಅಡುಗೆದಾರನನ್ನು ಈ ಚಿರತೆ ತಿಂದು ಹಾಕಿತ್ತು. ಇಂದು ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ. ಈ ಹಿಂದೆ ಚಿರತೆಯನ್ನ ಹಿಡಿಯಲು ಅರಣ್ಯ ಇಲಾಖೆಯವರು ಗಜ ಪಡೆಯಿಂದ ನಡೆಸಿದ್ದ ಕಾರ್ಯಾಚರಣೆ ವಿಫಲವಾಗಿತ್ತು. ಚಿರತೆಯಿಂದ ಗ್ರಾಮಸ್ಥರಲ್ಲಿ ಭಯ ಮೂಡಿಸಿತ್ತು.