Raichur: ನೀರಮಾನ್ವಿ ಗ್ರಾಮದ ಬಳಿ ಕಾಣಿಸಿಕೊಂಡ ಚಿರತೆ: ಗ್ರಾಮಸ್ಥರು ಆತಂಕ
ಜಿಲ್ಲೆಯಲ್ಲಿ ಮುಂಗಾರು ಮಳೆ ತಡವಾಗಿ ರೈತರ ಮೇಲೆ ಕೃಪೆ ತೋರಿದೆ. ಹೀಗಾಗಿ ರಾಯಚೂರು ಜಿಲ್ಲೆಯಾದ್ಯಂತ ರೈತರು ಈಗ ಬೀಜ ಬಿತ್ತನೆಗೆ ಮುಂದಾಗಿದ್ದು, ಕೃಷಿ ಚಟುವಟಿಕೆ ಜೋರಾಗಿದೆ. ಇಂತಹ ಸಮಯದಲ್ಲಿ ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ನೀರಮಾನ್ವಿ ಗ್ರಾಮದ ಬಳಿ ಚಿರತೆವೊಂದು ಕಾಣಿಸಿಕೊಂಡಿದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಜು.03): ಜಿಲ್ಲೆಯಲ್ಲಿ ಮುಂಗಾರು ಮಳೆ ತಡವಾಗಿ ರೈತರ ಮೇಲೆ ಕೃಪೆ ತೋರಿದೆ. ಹೀಗಾಗಿ ರಾಯಚೂರು ಜಿಲ್ಲೆಯಾದ್ಯಂತ ರೈತರು ಈಗ ಬೀಜ ಬಿತ್ತನೆಗೆ ಮುಂದಾಗಿದ್ದು, ಕೃಷಿ ಚಟುವಟಿಕೆ ಜೋರಾಗಿದೆ. ಇಂತಹ ಸಮಯದಲ್ಲಿ ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ನೀರಮಾನ್ವಿ ಗ್ರಾಮದ ಬಳಿ ಚಿರತೆವೊಂದು ಕಾಣಿಸಿಕೊಂಡಿದೆ. ಚಿರತೆ ಭಯಕ್ಕೆ ರೈತರು ಜಮೀನು ಜಮೀನುಗಳ ಕಡೆ ತಲೆ ಹಾಕುತ್ತಿಲ್ಲ. ಜೀವ ಭಯಕ್ಕೆ ವ್ಯವಸಾಯವನ್ನೇ ನಿಲ್ಲಿಸಿದ್ದಾರೆ.
ಕಳೆದ 6 ತಿಂಗಳಿಂದ ಬೆಟ್ಟದಲ್ಲಿ ಚಿರತೆ ಓಡಾಟ: ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನ್ವಿಯ ಗುಡ್ಡದಲ್ಲಿ ಕಳೆದ 6 ತಿಂಗಳಿಂದ ವಾಸವಾಗಿರುವ ಚಿರತೆ ಅಕ್ಷರಶಃ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಿದ್ದೆಕೆಡಿಸಿದೆ. ಕುರಿಗಾಯಿಗಳು, ರೈತರು ತಮ್ಮ ಜಮೀನುಗಳಿಗೆ ಹೋಗದಂತೆ ಮಾಡಿದೆ. ಇತ್ತೀಚಿಗೆ ಬೆಟ್ಟದಲ್ಲಿ ಇರುವ ಚಿರತೆ ಊರಿನ ಒಳಗೂ ಬರಲು ಶುರು ಮಾಡಿದೆ. ಊರಿನಲ್ಲಿ ಇರುವ ಮೇಕೆ, ನಾಯಿ, ನವಿಲುಗಳನ್ನ ತಿಂದಿರುವುದರಿಂದ ಜನರಲ್ಲಿ ಚಿರತೆ ಭಯ ಇನ್ನೂ ಹೆಚ್ಚಾಗಿದೆ. ಬೆಟ್ಟದಲ್ಲಿಯೇ ಓಡಾಟ ಮಾಡುತ್ತಿದ್ದ ಚಿರತೆ ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗುತ್ತಿರುವುದು ಬೆಟ್ಟದ ಸುತ್ತಿನ ಗ್ರಾಮಸ್ಥರ ಆತಂಕ ದುಪ್ಪಟ್ಟು ಮಾಡಿದೆ.
ಮಹಿಳೆ ಜತೆ ರಾಸಲೀಲೆ, ಮಕ್ಕಳ ಗುಪ್ತಾಂಗ ಮುಟ್ಟಿ ಆನಂದ: ಶಿಕ್ಷಕನ ಕಾಮದಾಟ ಬಯಲು ಮಾಡಿದ ಚಿಪ್
ನೀರಮಾನ್ವಿಯ ಅಂಗನವಾಡಿ ಕೇಂದ್ರ ಹತ್ತಿರ ಚಿರತೆ ಬಂದು ಹೋಗಿರುವುದರಿಂದ ಜನ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಹಿಂದೆ ಎರಡು ಚಿರತೆಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದವು. ಈಗ ಒಂದು ಚಿರತೆ ಇರುವುದು ಅರಣ್ಯ ಇಲಾಖೆ ಅಧಿಕಾರಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿ ಗುಡ್ಡಗಳ ಸಾಲು ಇರುವುದರಿಂದ ನೀರಮಾನ್ವಿ ,ಬೆಟ್ಟದೂರು, ಬೆಟ್ಟದೂರು ತಾಂಡಾ, ಮಲ್ಲದೇವರಗುಡ್ಡ, ಮುರಾನಪುರ ತಾಂಡಾದ ಬೆಟ್ಟಗುಡ್ಡಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇರಿಸಿದ್ದು, ಬೆಟ್ಟದ ಬಳಿ ಯಾರೂ ಸುಳಿಯದಂತೆ ಗ್ರಾಮಗಳಲ್ಲಿ ಡಂಗೂರ ಕೂಡ ಸಾರುತ್ತಿದ್ದಾರೆ. ಆದ್ರೆ ದಿನೇ ದಿನೇ ಭಯ ಹೆಚ್ಚಾಗುತ್ತಿರುವುದರಿಂದ ಕೂಡಲೇ ಚಿರತೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕ್ಯಾಮಾರಾದಲ್ಲಿ ಸೆರೆಯಾಗುತ್ತೆ ಚಿರತೆ ಬೋನ್‌ಗೆ ಮಾತ್ರ ಬೀಳುತ್ತಿಲ್ಲ: ನೀರಮಾನ್ವಿ ಬಳಿಯ ಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆಯಿಂದ ಸುತ್ತಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮಸ್ಥರ ಭಯವನ್ನು ದೂರು ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟದಲ್ಲಿ ನಿತ್ಯವೂ ಚಿರತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ ಕ್ಯಾಮಾರಾಗಳು ಕೂಡ ಅಳವಡಿಕೆ ಮಾಡಿದ್ದಾರೆ. ಆದ್ರೆ ಚಿರತೆ ಓಡಾಟ ಅರಣ್ಯ ಇಲಾಖೆಯ ಕ್ಯಾಮಾರಾದಲ್ಲಿ ಸೆರೆಯಾಗುತ್ತಿದೆ. ಆದ್ರೆ ಬೆಟ್ಟದಲ್ಲಿ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ವಾಸ್ತವ್ಯ ಹೂಡಿ ಕಾರ್ಯಾಚರಣೆ ನಡೆಸಿದರು. ಚಿರತೆ ಮಾತ್ರ ಯಾರ ಕಣ್ಣಿಗೂ ಕಾಣಿಸಿಕೊಳ್ಳುತ್ತಿಲ್ಲ.
ಚಿರತೆ ಬಗ್ಗೆ ಅರಣ್ಯ ಅಧಿಕಾರಿಗಳು ಹೇಳುವುದೇನು?: ನೀರಮಾನ್ವಿಯ ಬೆಟ್ಟದಲ್ಲಿ 6 ತಿಂಗಳಿಂದ ಚಿರತೆ ಓಡಾಟ ನಡೆಸಿದೆ. ಈ ವಿಚಾರ ತಿಳಿದ ರಾಯಚೂರು ಡಿಎಫ್ಒ ಚಂದ್ರಣ್ಣ ಖುದ್ದು ನೀರಮಾನ್ವಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಷ್ಟೇ ಅಲ್ಲದೇ ತಾವೂ ಕೂಡ ಕ್ಯಾಮಾರಾ ಹಿಡಿದು ಚಿರತೆಗಾಗಿ ಸಿಬ್ಬಂದಿ ಜೊತೆಗೆ ಕೆಲ ಕಾಲ ಕಾರ್ಯಾಚರಣೆ ನಡೆಸಿದರು. ಬೆಟ್ಟ ಸುತ್ತಾಟ ಮಾಡಿದ ಬಳಿಕ ಮಾತನಾಡಿದ ರಾಯಚೂರು ಡಿಎಫ್‌ಓ ನೀರಮಾನ್ವಿ ಬೆಟ್ಟವೂ ಗೈರಾಣು ಪ್ರದೇಶವಾಗಿದ್ದು, ಅರಣ್ಯ ಪ್ರದೇಶವಲ್ಲವಾದರೂ ವನ್ಯಜೀವಿಗಳು ಸಂತಾನೋತ್ಪತ್ತಿ ಹಾಗೂ ಮರಿಗಳನ್ನ ಬೆಳೆಸಲು ಉತ್ತಮ ವಾತಾವರಣ ಇದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಏಕಾಂಗಿಯಾಗಿ ಎದುರಿಸುವ ಶಕ್ತಿ ಯಾವುದೇ ನಾಯಕರಿಗಿಲ್ಲ: ಯತ್ನಾಳ
ಹೀಗಾಗಿ ಚಿರತೆ ಈ ಬೆಟ್ಟಕ್ಕೆ ಬರುತ್ತವೆ. ಅದೇ ಮಾದರಿಯಲ್ಲಿ ಚಿರತೆಗಳು ಬಂದಿರಬಹುದು. ಚಿರತೆ ಸಂತಾನೋತ್ಪತ್ತಿ ಮುಗಿಸಿಕೊಂಡು ಮರಿಗಳು ಸ್ವಲ್ಪ ದೊಡ್ಡವಾದ ಮೇಲೆ ಇಲ್ಲಿಂದ ಹೊರಟು ಹೋಗಬಹುದು. ಆಹಾರಕ್ಕಾಗಿ ಚಿರತೆ ಮೇಕೆ ಮತ್ತು ನಾಯಿ ಮೇಲೆ ದಾಳಿ ಮಾಡಿದೆ. ಸಾಕು ಪ್ರಾಣಿ ಜೀವಹಾನಿಗೆ ನಾವು ಪರಿಹಾರ ಕೊಡಿಸುತ್ತೇವೆ. ಆದಷ್ಟು ಶೀಘ್ರದಲ್ಲಿ ಚಿರತೆ ಹಿಡಿಯುವ ಪ್ರಯತ್ನಗಳನ್ನ ಮಾಡುತ್ತಿದ್ದೇವೆ. ಯಾರು ಆತಂಕಪಡಬೇಡಿ. ನಾವು ಚಿರತೆ ಹಿಡಿಯಲು ಬೋನ್ ಇಟ್ಟಿದ್ದೇವೆ. ಕೆಲವೇ ದಿನಗಳಲ್ಲಿ ಚಿರತೆ ಹಿಡಿಯುತ್ತೇವೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಒಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಒಂದು ಬೋನ್ ಇಟ್ಟಿದ್ದಾರೆ. ಚಿರತೆ ಚಲನವಲನ ಗಮನಿಸಿ ಮೂರ್ನಾಲ್ಕು ಕಡೆ ಬೋನ್ ಇಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದೊಡ್ಡ ಅನಾಹುತಗಳು ಆಗುವ ಮೊದಲೇ ಅರಣ್ಯಾಧಿಕಾರಿಗಳು ಚಿರತೆ ಸೆರೆಹಿಡಿದು ಗ್ರಾಮಸ್ಥರ ಭಯ ದೂರ ಮಾಡಬೇಕಿದೆ ಎಂಬುವುದೇ ನಮ್ಮ ಆಶಯ.