ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ಸೆರೆ!
ಕಳೆದ ಐದು ದಿನಗಳಿಂದ ನಗರದ ಜನತೆ ಹಾಗೂ ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸಿರುವ ಚಿರತೆ, ನಗರದ ಗಾಲ್ಫ್ ಮೈದಾನದಲ್ಲಿರುವ ಬಗ್ಗೆ ಚಲನವಲನ ಕೊನೆಗೂ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಮತ್ತಷ್ಟುಸಲೀಸಲಾಗಿದೆ.
ಬೆಳಗಾವಿ (ಆ.10): ಕಳೆದ ಐದು ದಿನಗಳಿಂದ ನಗರದ ಜನತೆ ಹಾಗೂ ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸಿರುವ ಚಿರತೆ, ನಗರದ ಗಾಲ್ಫ್ ಮೈದಾನದಲ್ಲಿರುವ ಬಗ್ಗೆ ಚಲನವಲನ ಕೊನೆಗೂ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಮತ್ತಷ್ಟುಸಲೀಸಲಾಗಿದೆ. ಆ.5ರಂದು ಇಲ್ಲಿನ ಜಾಧವ ನಗರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಕಾರ್ಮಿಕನೋರ್ವನ ಮೇಲೆ ದಾಳಿ ನಡೆಸಿ ಕಣ್ಮರೆಯಾಗಿತ್ತು. ಇದರಿಂದಾಗಿ ನಗರದ ಜನರಲ್ಲಿ ಹಾಗೂ ಅರಣ್ಯ ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು.
ಕಳೆದ ಮೂರು ದಿನಗಳಿಂದ ಚಿರತೆ ಯಾವ ಸ್ಥಳದಲ್ಲಿದೆ ಎಂಬ ನಿಖರ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಕಂಗೆಟ್ಟಿದ್ದರು. ಕೊನೆಗೆ ಸೋಮವಾರ ರಾತ್ರಿ ನಗರದ ಗಾಲ್ಫ್ ಮೈದಾನದಲ್ಲಿ ಓಡಾಡುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಖಚಿತವಾಗಿದೆ. ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ. ಇದರಿಂದಾಗಿ ಅರಣ್ಯ ಅಧಿಕಾರಿಗಳು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಗಾಲ್ಫ್ ಮೈದಾನ ಸುತ್ತಮುತ್ತಲಿನ ಪ್ರದೇಶನ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಹೇಗಾದರೂ ಮಾಡಿ ಚಿರತೆಯನ್ನು ಹಿಡಿಯುವುದರ ಜತೆಗೆ ಕ್ರೂರ ಪ್ರಾಣಿಗಳು ವಸತಿ ಪ್ರದೇಶಗಳತ್ತ ಬಾರದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
3 ದಿನ ಕಳೆದರೂ ಪತ್ತೆಯಾಗದ ಚಿರತೆ: ಅರಣ್ಯ ಸಿಬ್ಬಂದಿಯಿಂದ ತೀವ್ರ ಶೋಧ
ಮಂಗಳವಾರ ಬೆಳಿಗ್ಗೆಯಿಂದ ಚಿರತೆ ಹಿಡಿಯುವ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ. ಗಾಲ್ಫ್ ಮೈದಾನದ ಮರಗಳ ಪೊದೆಯಲ್ಲಿ ಕಳೆದ ಶುಕ್ರವಾರದಿಂದ ಅವಿತುಕೊಂಡು ಕುಳಿತಿರುವ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯು ಹಗಲಿರುಳು ಪ್ರಯತ್ನ ನಡೆಸಿದೆ. ಆರು ಬೋನುಗಳನ್ನು, 16 ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. 50 ಜನ ಅರಣ್ಯ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದೆ. ಡಿಎಫ್‌ಒ ಎಚ್.ಎಸ್.ಅಂಥೋನಿ, ಎಸಿಎಫ್ ಮಲ್ಲಿಕನಾಥ ಕುಸನಾಳ ಹಾಗೂ ಇತರೆ ಸಿಬ್ಬಂದಿ ಬೆಳಿಗ್ಗೆಯಿಂದಲೇ ಚಿರತೆಗಾಗಿ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾನುವಾರವೇ ಚಿರತೆ ಚಲನ ವಲನ ಪತ್ತೆಯಾಗಿವೆ. ಇದು ಸಿಸಿಟಿವಿನಲ್ಲಿ ಸೆರೆಯಾಗಿವೆ ಎಂದು ಚಿರತೆಯ ಚಿತ್ರವುಳ್ಳ ಪೋಟೋವೊಂದು ಎಲ್ಲೆಡೆ ಹರಿದಾಡಿತ್ತು. ಆದರೆ, ಅರಣ್ಯ ಇಲಾಖೆ ಇದು ಸುಳ್ಳು ಎಂದು ಹೇಳಿಕೆ ನೀಡಿತ್ತು.
ನಾಲ್ಕು ದಿನವಾದರೂ ಪತ್ತೆಯಾಗದ ಚಿರತೆ: ಇಲ್ಲಿನ ಜಾಧವ ನಗರದ ಕಟ್ಟಡ ಕಾರ್ಮಿಕರೊಬ್ಬರ ಮೇಲೆ ದಾಳಿ ನಡೆಸಿ ನಾಪತ್ತೆಯಾಗಿರುವ ಚಿರತೆ ಸುಳಿವು ನಾಲ್ಕು ದಿನ ಕಳೆದರೂ ಸಿಕ್ಕಿಲ್ಲ. ಚಿರತೆಯ ಸುಳಿವು ಸಿಗದೇ ಇರುವುದು ನಾಗರಿಕರಲ್ಲಿ ಭಯಭೀತಿ ಮೂಡಿಸಿದೆ. ನಗರದ ಕ್ಲಬ್ ರಸ್ತೆಯ ಗಾಲ್ಫ್ ಮೈದಾನದ ಬಳಿ ದಟ್ಟಾರಣ್ಯದಲ್ಲಿ ಚಿರತೆ ಓಡಾಡುತ್ತಿದೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡುತ್ತಿರುವುದು ಸೆರೆಯಾಗಿದೆ ಎನ್ನಲಾಗಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.
Belagavi: ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ: ಸಿಸಿ ಕ್ಯಾಮರಾದಲ್ಲಿ ಚಲನವಲನ ಸೆರೆ
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯೂ ಚಿರತೆ ಪತ್ತೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಗಾಲ್‌್ಫ ಮೈದಾನದ ಅರಣ್ಯದಲ್ಲಿ ಚಿರತೆ ನುಸುಳಿದ್ದರಿಂದ ಸುಮಾರು 1 ಕಿಮೀ ಅಂತರದಲ್ಲಿರುವ ಎಲ್ಲ ಶಾಲೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಚಿರತೆ ಮಾತ್ರ ಪತ್ತೆಯಾಗಲಿಲ್ಲ. ಇದು ಜಾಧವ ನಗರ, ಹನುಮಾನ ನಗರ, ಬಾಕ್ಸೈಟ್ ರಸ್ತೆ, ಕುವೆಂಪು ನಗರ ನಾಗರಿಕರು ಭೀತಿಯಲ್ಲೇ ಓಡಾಡುತ್ತಿದ್ದಾರೆ. ಅಲ್ಲದೇ, ಬೆಳಗಿನ ಜಾವ ವಾಯು ವಿವಾಹಕ್ಕೆ ಆಗಮಿಸುವರು ಸಂಖ್ಯೆಯೂ ಕಡಿಮೆಯಾಗಿದೆ.