Asianet Suvarna News Asianet Suvarna News

ಕೆಆರ್‌ಎಸ್‌ನಲ್ಲಿ ಚಿರತೆ ಪ್ರತ್ಯಕ್ಷ : ಸೆರೆಗಾಗಿ ಕಾರ್ಯಾಚರಣೆ ಮುಂದುವರಿಕೆ

ತಾಲೂಕಿನ ಕೆಆರ್‌ಎಸ್‌ ಅಣೆಕಟ್ಟೆಬೃಂದಾವನ ಉದ್ಯಾನದಲ್ಲಿ ಪ್ರತ್ಯಕ್ಷಗೊಂಡಿದ್ದ ಚಿರತೆ ಸೆರೆಗಾಗಿ ಅಧಿಕಾರಿಗಳ ತಂಡ ಭಾನುವಾರವೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Leopard in KRS  continues Operation   for capture snr
Author
First Published Oct 24, 2022, 5:16 AM IST

ಶ್ರೀರಂಗಪಟ್ಟಣ (ಅ.24): ತಾಲೂಕಿನ ಕೆಆರ್‌ಎಸ್‌ ಅಣೆಕಟ್ಟೆಬೃಂದಾವನ ಉದ್ಯಾನದಲ್ಲಿ ಪ್ರತ್ಯಕ್ಷಗೊಂಡಿದ್ದ ಚಿರತೆ ಸೆರೆಗಾಗಿ ಅಧಿಕಾರಿಗಳ ತಂಡ ಭಾನುವಾರವೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಮಂಡ್ಯ (Mandya)  ಜಿಲ್ಲಾ ಅರಣ್ಯ ಇಲಾಖೆ ಎಸ್ಪಿ ಮಹದೇವಸ್ವಾಮಿ ಸೇರಿದಂತೆ ಆರ್‌ಎಫ್‌ಓ (RFO)  ಅನಿತಾ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಆರ್‌ಎಸ್‌ ಬೃಂದಾವನದ ಉತ್ತರ ದ್ವಾರ ಹಾಗೂ ದಕ್ಷಿಣ ದ್ವಾರಗಳ ಮಾರ್ಗಗಳಲ್ಲಿ ಚಿರತೆ ಅಡ್ಡಾಡಿದ ಹೆಜ್ಜೆ ಗುರುತುಗಳ ಪ್ರದೇಶವನ್ನು ಪರಿಶೀಲಿಸುತ್ತಿದ್ದಾರೆ. ಚಿರತೆ ಸೆರೆಗಾಗಿ ಈಗಾಗಲೇ ಬೋನ್‌ ಇರಿಸಲಾಗಿದೆ. ಬೋನ್‌ನಲ್ಲಿ ನಾಯಿ ಕಟ್ಟಿಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ.

ಪ್ರವಾಸಿಗರಿಗೆ ಎಂದಿನಂತೆ ಪ್ರವೇಶ:

ಚಿರತೆ ಪ್ರತ್ಯಕ್ಷ ಹಿನ್ನೆಲೆ ಸ್ಥಗಿತಗೊಂಡಿದ್ದ ಪ್ರವಾಸಿಗರ ಪ್ರವೇಶವನ್ನು ಎಂದಿನಂತೆ ಮುಂದುವರೆಸಲಾಗಿದೆ. ಪ್ರವಾಸಿಗರ ಹಿತ ದೃಷ್ಟಿಯಿಂದ ಶನಿವಾರ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಚಿರತೆ ಸೆರೆಯಾಗದ ಕಾರಣ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಭಾನುವಾರ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು.

ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ಬೋನ್‌ ಇಟ್ಟು ಚಿರತೆ ಭೇಟೆಗಾಗಿ ಅಧಿಕಾರಿಗಳ ತಂಡ ಕಾದು ಕುಳಿತಿದ್ದಾರೆ.

ಶನಿವಾರ ಪ್ರತ್ಯಕ್ಷ

ವಿಶ್ವ ವಿಖ್ಯಾತ ಕೆಆರ್‌ಎಸ್‌ ಬೃಂದಾವನ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿತ್ತು.

ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಚಿರತೆ ಅಣೆಕಟ್ಟೆದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ ಅಣೆಕಟ್ಟೆಮೆಲ್ಭಾಗದಲ್ಲಿ ನಡೆದು ಬಂದು ನಂತರ ಬೃಂದಾವನದ ಕಡೆಗೆ ಹಾರಿ ಹೋದುದ್ದನ್ನ ಅಣೆಕಟ್ಟೆಬಳಿ ಗಿಡ-ಗಂಟೆ ತೆರವು ಮಾಡುತ್ತಿದ್ದ ನಿಗಮದ ಕೆಲಸಗಾರರು ಗಮನಿಸಿದ್ದರು.

ಇದರಿಂದ ಕಾವೇರಿ ನೀರಾವರಿ ನಿಗಮ ಸಿಬ್ಬಂದಿ, ಅಣೆಕಟ್ಟೆಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಹಾಗೂ ಪ್ರವಾಸಿಗರು ಆತಂಕಗೊಡಿದ್ದರು.

ಬೃಂದಾವನ ಬಳಿ ಚಿರತೆ ಕಾಣಿಸಿಕೊಂಡ ಬಗ್ಗೆ ಕೆಲಸಗಾರರ ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಸಂತೋಷ ಸ್ಥಳ ಪರಿಶೀಲನೆ ನಡೆಸಿ ಚಿರತೆ ನಡೆದು ಹೋಗಿರುವ ಹೆಜ್ಜೆ ಗುರುತು ಕಂಡು ಬಂದಿರುವುದಾಗಿ ತಿಳಿದು ಬಂದಿರುವುದಾಗಿ ಹೇಳಿದ್ದಾರೆ.

ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಶನಿವಾರ  ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶಕ್ಕೆ ನಿರ್ಬಂಧಿಸಿ ಚಿರತೆ ಪ್ರತ್ಯಕ್ಷ ಕುರಿತು ಶ್ರೀರಂಗಪಟ್ಟಣ ವಲಯ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಿರುವುದಾಗಿ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಘಾರೂಕ್‌ ಅಬು ಮಾಹಿತಿ ನೀಡಿದ್ದಾರೆ. ಇವರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಿರತೆ ಸೆರೆ ಹಿಡಿಯಲು ರಾಯಲ್ ಆರ್ಕಿಡ್‌ ಬಳಿ ಬೋನ್‌ ಇರಿಸಿದ್ದಾರೆ.

ಪ್ರವಾಸಿಗರ ನಿರ್ಬಂಧ

ವಿಶ್ವವಿಖ್ಯಾತ ಕೆಆರ್‌ಎಸ್‌ ಬೃಂದಾವನದ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಅಣೆಕಟ್ಟೆಬಳಿ ಗಿಡ-ಗಂಟೆ ತೆರವು ಮಾಡುತ್ತಿದ್ದ ನಿಗಮದ ಕೆಲಸಗಾರರಿಗೆ ಚಿರತೆ ಕಾಣಿಸಿಕೊಂಡಿದ್ದು, ಅದು ಅಣೆಕಟ್ಟೆಮೇಲ್ಭಾಗದಿಂದ ಬೃಂದಾವನದ ಕಡೆಗೆ ಹಾರಿ ಹೋದುದ್ದನ್ನು ಗಮನಿಸಿದ್ದಾರೆ. ಚಿರತೆ ಕಾಣಿಸಿಕೊಂಡ ಬಗ್ಗೆ ಕೆಲಸಗಾರರಿಂದ ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಸಂತೋಷ ಸ್ಥಳ ಪರಿಶೀಲನೆ ನಡೆಸಿದ್ದು, ಚಿರತೆಯ ಹೆಜ್ಜೆ ಗುರುತು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಶನಿವಾರ ಬೆಳಗ್ಗೆಯಿಂದಲೇ ಪ್ರವಾಸಿಗರಿಗೆ ಬೃಂದಾವನ ಪ್ರವೇಶ ನಿರ್ಬಂಧಿಸಿದ್ದು, ಭಾನುವಾರವೂ ಮುಂದುವರಿಯಲಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ರಾಯಲ… ಆರ್ಕಿಡ್‌ ಬಳಿ ಬೋನು ಇರಿಸಿದ್ದಾರೆ. 

Follow Us:
Download App:
  • android
  • ios