ಬನ್ನೇರುಘಟ್ಟ ಸಫಾರಿ ಬಸ್‌ನ ಕಿಟಕಿ ಹಿಡಿದು ನೇತಾಡಿದ ಚಿರತೆ: ಕಕ್ಕಾಬಿಕ್ಕಿಯಾದ ಪ್ರವಾಸಿಗರು!

ಒಂದು ಚಿರತೆ ಬಸ್ ಮೇಲೆ ಏರಿ ಕಿಟಕಿಗಳಲ್ಲಿ ಪ್ರವಾಸಿಗರನ್ನು ನೋಡಿ ಗುರ್ ಎಂದಿದೆ. ನಂತರ ಚಾಲಕ ಬಸ್ಸನ್ನು ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಬಸ್‌ನಿಂದ ಕೆಳಕ್ಕೆ ಹಾರಿ ಹೋಗಿದೆ. ಚಿರತೆಗಳು ಬಸ್, ಜೀಪ್ ಬಳಿ ಬರುವುದು, ಕೆಲವು ಬಾರಿ ಬಸ್, ಜೀಪ್‌ಗಳ ಮೇಲೆ ಹತ್ತುವುದು ಸಾಮಾನ್ಯವಾಗಿದ್ದು, ಇನ್ನೊಂದು ವ್ಯಾನ್‌ನಲ್ಲಿದ್ದ ಪ್ರವಾಸಿಗರು ಚಿತರೆ ಬಸ್‌ ಮೇಲೆ ಎಗರುವ ಫೋಟೋ ಕ್ಲಿಕ್ಕಿಸಿದ್ದಾರೆ.

leopard hanging from the window of a safari bus at Bannerghatta Biological Park in Bengaluru grg

ಬೆಂಗಳೂರು ದಕ್ಷಿಣ(ಅ.08):  ಸಫಾರಿಗೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮಿನಿ ಬಸ್‌ನ ಮೇಲೆ ಚಿರತೆ ಏರಲು ಪ್ರಯತ್ನ ನಡೆಸಿದ ಪರಿಣಾಮ ಪ್ರವಾಸಿಗರು ಕೆಲಕಾಲ ಆತಂಕಕ್ಕೀಡಾದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದಿದೆ.

ಸಫಾರಿಯಲ್ಲಿ ಇತ್ತೀಚಿಗೆ ವಿಶಾಲವಾದ ತೆರೆದ ಆವರಣದಲ್ಲಿ ಚಿರತೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.19 ಚಿರತೆಗಳಿಗೆ ಆಶ್ರಯ ನೀಡಿ ಪ್ರತಿ ದಿನ 4 ಅಥವಾ 5 ಚಿರತೆಗಳನ್ನು ಒಂದೊಂದು ತಂಡವನ್ನಾಗಿಸಿ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗುತ್ತಿತ್ತು.

ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ 25ರ ಸಂಭ್ರಮ: ಹುಲಿ, ಆನೆಗಳ ಎಷ್ಟಿದೆ ಗೊತ್ತಾ?

ಒಂದು ಚಿರತೆ ಬಸ್ ಮೇಲೆ ಏರಿ ಕಿಟಕಿಗಳಲ್ಲಿ ಪ್ರವಾಸಿಗರನ್ನು ನೋಡಿ ಗುರ್ ಎಂದಿದೆ. ನಂತರ ಚಾಲಕ ಬಸ್ಸನ್ನು ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಬಸ್‌ನಿಂದ ಕೆಳಕ್ಕೆ ಹಾರಿ ಹೋಗಿದೆ. ಚಿರತೆಗಳು ಬಸ್, ಜೀಪ್ ಬಳಿ ಬರುವುದು, ಕೆಲವು ಬಾರಿ ಬಸ್, ಜೀಪ್‌ಗಳ ಮೇಲೆ ಹತ್ತುವುದು ಸಾಮಾನ್ಯವಾಗಿದ್ದು, ಇನ್ನೊಂದು ವ್ಯಾನ್‌ನಲ್ಲಿದ್ದ ಪ್ರವಾಸಿಗರು ಚಿತರೆ ಬಸ್‌ ಮೇಲೆ ಎಗರುವ ಫೋಟೋ ಕ್ಲಿಕ್ಕಿಸಿದ್ದಾರೆ.

Latest Videos
Follow Us:
Download App:
  • android
  • ios