Uttara Kannada: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ನುಗ್ಗಿದ ಚಿರತೆ
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆ ಅಂಗಳಕ್ಕೆ ಚಿರತೆ ನುಗ್ಗಿದೆ. ಮನೆಯಲ್ಲಿದ್ದ ಸಾಕು ನಾಯಿಯನ್ನು ಬೇಟೆಯಾಡಲು ಚಿರತೆ ಅಟ್ಟಾಡಿಸಿಕೊಂಡು ಹೋಗಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಕಾಗೇರಿಯವರ ಮನೆಯ ಸಾಕು ನಾಯಿ ಯಶಸ್ವಿಯಾಗಿದೆ.
ಕಾರವಾರ (ಜ.14): ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆ ಅಂಗಳಕ್ಕೆ ಚಿರತೆ ನುಗ್ಗಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಯಲ್ಲಿರುವಾಗಲೇ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ವೇಳೆ ಆಹಾರ ಅರಸಿ ಸಂಸದರ ಮನೆ ಅಂಗಳಕ್ಕೆ ಚಿರತೆ ನುಗ್ಗಿದೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿವಾಸ ಶಿರಸಿ ತಾಲೂಕಿನ ಕಾಗೇರಿಯಲ್ಲಿದೆ. ಮನೆಯಯಲ್ಲಿದ್ದ ಸಾಕು ನಾಯಿಯನ್ನು ಬೇಟೆಯಾಡಲು ಚಿರತೆ ಅಟ್ಟಾಡಿಸಿಕೊಂಡು ಹೋಗಿದೆ. ತೋಟದ ಭಾಗದಿಂದ ಮನೆಯ ನಾಯಿಯನ್ನು ಚಿರತೆ ಅಟ್ಟಿಸಿಕೊಂಡು ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಕಾಗೇರಿಯವರ ಮನೆಯ ಸಾಕು ನಾಯಿ ಯಶಸ್ವಿಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿರತೆ ಮನೆ ಬಾಗಿಲಿಗೆ ಬಂದರೂ ಯಾವುದೇ ಪ್ರಾಣಿಪಕ್ಷಿಗಳಿಗೆ ಹಾನಿಯಾಗಿಲ್ಲ. ಈ ಭಾಗದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿತ್ತು.ಇತ್ತೀಚೆಗೆ ಅಹಾರ ಅರಸಿ ನಾಡಿನತ್ತ ಆಗಮಿಸುತಿದ್ದು ಇದೇ ಮೊದಲಬಾರಿ ಕಾಗೇರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಕಾಗೇರಿ ಕೊರೋನಾ ಔಷಧಾನೂ ಕಾಡ್ತಾರಂತ್ರಿ: ನಿಮಗೆ ಗೋಕರ್ಣ ಚೌರದ ಬಗ್ಗೆ ಗೊತ್ತಾ?
ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಕಳೆದ 10 ದಿನಗಳಿಂದ ಚಿರತೆ ಪತ್ತೆ ಕಾರ್ಯ ತೀವ್ರವಾಗಿ ನಡೆಯುತ್ತಿದೆ. ಇನ್ಫೋಸಿಸ್ ಕ್ಯಾಂಪಸ್‌ನ ಉದ್ಯೋಗಿಗಳಿಗೆ ಇದೇ ಕಾರಣಕ್ಕಾಗಿ ವರ್ಕ್ ಫ್ರಮ್ ಹೋಮ್‌ಅನ್ನೂ ನೀಡಲಾಗಿದೆ. ಅಲ್ಲದೆ, ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಒಬ್ಬೊಬ್ಬರೆ ತಿರುಗಾಡದಂತೆ ಸೂಚನೆಯನ್ನೂ ನೀಡಲಾಗಿದೆ.
ರಾಜ್ಯದ 27 ಎಂಪಿಗಳು ಕನ್ನಡದಲ್ಲಿ, ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ!