Asianet Suvarna News Asianet Suvarna News

NAFED ಮೂಲಕ ಕೊಬ್ಬರಿ ಖರೀದಿಗೆ ಚಾಲನೆ: ಸಚಿವ ಬಿ.ಸಿ.ನಾಗೇಶ್ ಭರವಸೆ

ಶೀಘ್ರದಲ್ಲೇ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ. ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯಸರ್ಕಾರ ಸ್ಪಂದಿಸಲಿದೆ ಎಂದು ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದರು

Launch of coconut purchase through NAFED says Minister BC Nagesh rav
Author
First Published Jan 12, 2023, 11:13 AM IST

ತುಮಕೂರು (ಜ.12) : ಶೀಘ್ರದಲ್ಲೇ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ ಎಂದು ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದರು. ತಿಪಟೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯಸರ್ಕಾರ ಸ್ಪಂದಿಸಲಿದ್ದು ಶೀಘ್ರವೇ ನಫೆಡ್(NAFED) ಪ್ರಾರಂಭಿಸಿ ರೈತರಿಂದ ಬೆಂಬಲ ಬೆಲೆ ಜೊತೆಗೆ ರಾಜ್ಯಸರ್ಕಾರದ ಪ್ರೋತ್ಸಾಹಧನ ನೀಡಿ ಕೊಂಡುಕೊಳ್ಳಲಾಗುವುದು ಎಂದರು.

ಕಳೆದ ಹಲವಾರು ವರ್ಷಗಳಿಂದ ಕೊಬ್ಬರಿ ಬೆಲೆ 15 ಸಾವಿರದ ಆಸುಪಾಸಿನಲ್ಲಿದ್ದು, ಕಳೆದ 3 ತಿಂಗಳಿನಿಂದ ಗಣನೀಯವಾಗಿ ಕುಸಿತ ಕಂಡು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೇ ಕಳೆದ ಎರಡು ವರ್ಷದಲ್ಲಿನ ಹವಮಾನ ವೈಪರಿತ್ಯ(Climate change)ದಿಂದಾಗಿ ಕೊಬ್ಬರಿ ಸರಿಯಾದ ಸಮಯಕ್ಕೆ ಬಾರದೇ ಹಸಿ ಅಂಶ ಉಳಿದುಕೊಂಡು ರೈತರಿಗೆ ನಷ್ಟ ಉಂಟಾಗಿದೆ. ಇದೀಗ 10 ಸಾವಿರದ ಅಂಚಿನಲ್ಲಿ ಬಂದಿರುವುದು ವಿಷಾದನೀಯ ಸಂಗತಿ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಶೀಘ್ರವೇ ನಫೆಡ್ ಪ್ರಾರಂಭಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಲಿದೆ. 

ಬಿಜೆಪಿ ಬಗ್ಗೆ ಮಾತನಾಡುವದಕ್ಕಿಂತ ಡಿಕೆಶಿ ತಮ್ಮ ಪಕ್ಷ ಸರಿಮಾಡಿಕೊಳ್ಳಲಿ: ಸಚಿವ ನಾಗೇಶ್

ಸರ್ಕಾರದ ಕೆಲ ಅಧಿಕಾರಿಗಳು, ಆರ್ಥಿಕ ತಜ್ಞರುಗಳೊಂದಿಗೆ ಸಮಾಲೋಚನೆ ನಡೆಸಿ ಉಂಡೆ ಕೊಬ್ಬರಿ ಬೆಂಬಲ ಬೆಲೆ 11,750 ರೂ ಜೊತೆಗೆ ರಾಜ್ಯಸರ್ಕಾರದ ಪ್ರೋತ್ಸಾಹಧನವನ್ನು ಕೊಡಿಸಲಾಗುವುದು. ಕಳೆದ ಹಲವು ವರ್ಷಗಳಿಂದಲೂ ಬಿಜೆಪಿ ಸರ್ಕಾರ(BJP government) ರಚನೆಯಾದ ಸಂದರ್ಭದಲ್ಲಿಯೇ ರೈತರಿಗೆ(Farmers) ಬೆಂಬಲ ಬೆಲೆ ಏರಿಕೆ ಮಾಡಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಆಲೋಚನೆ ಮಾಡಲಾಗುವುದು ಎಂದಿದ್ದಾರೆ

Follow Us:
Download App:
  • android
  • ios