ಬೆಂಗಳೂರು[ಮಾ.23]: ಕಳೆದ ಎರಡು ದಿನಗಳಲ್ಲಿ 1406 ಮಂದಿ ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ಪೈಕಿ ಐವರಲ್ಲಿ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ನಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬಾಕಿ ಪ್ರಯಾಣಿಕರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರಲು ಸೂಚಿಸಲಾಗಿದೆ. ಇನ್ನು ಮಾರ್ಚ್ 17ರಿಂದ 21ರ ನಡುವೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 7998 ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಕೊರೋನಾ ಆತಂಕ: ಬೆಂಗಳೂರಲ್ಲಿ 20 ಸಾವಿರ ಜನರಿಗೆ ಕ್ವಾರಂಟೈನ್‌!

ಇದರಲ್ಲಿ ಭಾನುವಾರ ಇಟಲಿಯಿಂದ ಆಗಮಿಸಿರುವ 270 ಮಂದಿ ವಿದ್ಯಾರ್ಥಿಗಳೂ ಇದ್ದಾರೆ ಎಂದು ತಿಳಿದು ಬಂದಿದೆ.