Asianet Suvarna News Asianet Suvarna News

ವಿಧಾನಸೌಧದ ಬಳಿ 10 ಅಡಿ ಭೂಕುಸಿತ: ಆತಂಕದಲ್ಲಿ ಜನತೆ..!

*   ಮಳೆ ನೀರಿನ ಒಳಚರಂಡಿಯಿಂದಾಗಿ ಕುಸಿದ ಮಣ್ಣು
*   ಕುಸಿತ ಉಂಟಾದ ಕಡೆ ಮಳೆ ನೀರಿನ ಒಳ ಚರಂಡಿ ಇರುವುದು ಪತ್ತೆ
*   8-10 ಅಡಿ ಆಳದ ಹೆಚ್ಚು ಅಗಲವಿಲ್ಲದ ಗುಂಡಿ ಸೃಷ್ಟಿ
 

Landslide Near Vidhanasoudha in Bengaluru grg
Author
Bengaluru, First Published Sep 17, 2021, 7:45 AM IST

ಬೆಂಗಳೂರು(ಸೆ.17): ರಾಜ್ಯದ ಶಕ್ತಿಸೌಧ ವಿಧಾನಸೌಧದ ಬಳಿ ಗುರುವಾರ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.

ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ವಾಹನಗಳು ವಿಧಾನಸೌಧಕ್ಕೆ ಬಂದು ಹೋಗುತ್ತಿದ್ದವು. ಗುರುವಾರ ವಿಧಾನಸೌಧದ ದ್ವಾರ ಸಂಖ್ಯೆ ಎರಡರ ಬಳಿ ಭೂ ಕುಸಿತ ಉಂಟಾಗಿ ಆಳವಾದ ಗುಂಡಿ ಸೃಷ್ಟಿಯಾಗಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಆತಂಕಕಗೊಂಡರು. ಅಕ್ಕ ಪಕ್ಕದ ಮತ್ತಷ್ಟು ಭೂ ಕುಸಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಜಾಗದ ಸುತ್ತಲೂ ಬ್ಯಾರಿಕೇಡ್‌ ವ್ಯವಸ್ಥೆ ಮಾಡಿದರು.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭೂಕುಸಿತದ ಆತಂಕ, ಪರಿಸರ ತಜ್ಞರು ಹೇಳೋದೇನು.?

ಬಳಿಕ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಭೂ ಕುಸಿತ ಉಂಟಾದ ಕಡೆ ಮಳೆ ನೀರಿನ ಒಳ ಚರಂಡಿ ಇರುವುದು ಪತ್ತೆಯಾಗಿದೆ. ಮಳೆ ನೀರು ಹೆಚ್ಚಾಗಿ ಹರಿದು ಮಣ್ಣು ಸವೆತ ಉಂಟಾಗಿ ಮಣ್ಣು ಕುಸಿದಿದೆ. ಇದರಿಂದ 8-10 ಅಡಿ ಆಳದ ಹೆಚ್ಚು ಅಗಲವಿಲ್ಲದ ಗುಂಡಿ ಸೃಷ್ಟಿಯಾಗಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿ ರಿಪೇರಿ ಮಾಡುವುದಾಗಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. 
 

Follow Us:
Download App:
  • android
  • ios