ನಾಟಕದಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ವೀರೇಶ್ವರ ಪುಣ್ಯಾಶ್ರಮಕ್ಕೆ ಸಲ್ಲಿಸಲಾಗುತ್ತದೆ. ನಿರಂತರವಾಗಿ ಹೀಗೆ ನಡೆದುಕೊಂಡು ಬಂದಿದೆ. ನಾಟಕದಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಾರೆ: ಪಾತ್ರಧಾರಿ ಮತ್ತು ನಾಟಕ ರಚನಕಾರ ಮಹದೇವ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜ.23): ಸ್ತ್ರೀ ಪಾತ್ರವನ್ನು ಪುರುಷರೇ ಅಭಿನಯಿಸುವ, ಸಂಭಾಷಣೆಗೆ ಜಾಗವಿಲ್ಲದೆ, ಭಾವೈಕ್ಯತೆಯ ಬೆಳಕು ನೀಡುವ ಮೂಲಕ ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಘ ಅಭಿನಯಿಸುತ್ತಿರುವ ನಾಟಕ ಅಕ್ಕ ಅಂಗಾರ, ತಂಗಿ ಬಂಗಾರ ಕೊಪ್ಪಳ ಜಾತ್ರೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.
38 ವರ್ಷಗಳ ಹಿಂದೆ ಪುಟ್ಟರಾಜ ಗವಾಯಿಗಳು ನಾಟಕದಲ್ಲಿ ಬೆಳಗಿದ ದೀಪವನ್ನು ಇಂದಿಗೂ ಆರದಂತೆ ನೋಡಿಕೊಂಡು ಬರಲಾಗುತ್ತದೆ. ಹಚ್ಚಿದ ದೀಪ ಇಂದಿಗೂ ಆರದಂತೆ ಸಂರಕ್ಷಣೆ ಮಾಡಿಕೊಂಡು ಬರಲಾಗುತ್ತದೆ. ನಾಟಕ ಪ್ರದರ್ಶನ ಇರಲಿ, ಇಲ್ಲದಿರಲಿ ಹಗಲು, ರಾತ್ರಿ ಈ ದೀಪ ಉರಿಯುತ್ತಲೇ ಇರುತ್ತದೆ. ಊರಿಂದ ಊರಿಗೆ ಸಂಚಾರ ಮಾಡುವ ವೇಳೆಯಲ್ಲಿಯೂ ದೀಪವನ್ನು ಆರದಂತೆ ನೋಡಿಕೊಳ್ಳಲಾಗುತ್ತದೆ.
ಬಿಜೆಪಿ ಅಂಗಳದಲ್ಲಿ ಕತ್ತೆ ಸತ್ತು ಬಿದ್ದಿದೆ: ಸಚಿವ ಶಿವರಾಜ್ ತಂಗಡಗಿ
ನಾಟಕ ಪ್ರದರ್ಶನ ನೋಡಿದವರಿಗೆ ನಿರಂತರವಾಗಿ ಉರಿಯುವ ಜ್ಯೋತಿಯನ್ನು ನೋಡಿಕೊಂಡು ಹೋಗಲು ಅವಕಾಶ ಮಾಡಿಕೊಡಲಾಗುತ್ತದೆ. ನಾಟಕದ ವಿಷಯ ವಸ್ತುವೂ ಸಹ ಗಮನ ಸೆಳೆಯುತ್ತಿದ್ದು, ಜೊತೆಗೆ ಭಾವೈಕ್ಯತೆ ಸಾರುವ ನಾಟಕವನ್ನು ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ.
50ನೇ ಪ್ರಯೋಗದತ್ತ:
ಜಾತ್ರೆಗೂ ಮುನ್ನವೇ ನಗರದ ಜಿಎಸ್‌ಆರ್ ಆಸ್ಪತ್ರೆಯ ಬಳಿ ಫಕೀರಪ್ಪ ಆರೇರ ಅವರ ಜಾಗೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ನಾಟಕ 50ನೇ ಪ್ರಯೋಗದತ್ತ ಸಾಗುತ್ತಿದೆ. ಹೆಣ್ಣು ಮಕ್ಕಳ ಮಾರಾಟ ದಂಧೆಯ ಕತೆ ಹೊಂದಿರುವ ಈ ನಾಟಕದಲ್ಲಿ ಭಾವೈಕ್ಯತೆ ಬೆಸೆಯಲಾಗಿದೆ.
ಅನಾಥ ಹೆಣ್ಣು ಮಗುವನ್ನು ಸಾಕುವ ಮುಸ್ಲಿಂ ಸಮುದಾಯದ ವ್ಯಕ್ತಿ ಆ ಮಗುವನ್ನು ಲಿಂಗಾಯತ ಧರ್ಮದಂತೆಯೇ ಬೆಳೆಸಿ, ಪೋಷಿಸುತ್ತಾನೆ. ಅಷ್ಟೇ ಅಲ್ಲ, ಹಿಂದೂಗೆ ಕೊಟ್ಟು ಮದುವೆ ಮಾಡಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗುತ್ತಾನೆ. ಹೆಣ್ಣು ಮಕ್ಕಳ ಮಾರಾಟದ ಕರಾಳ ದಂಧೆಯ ಕತೆಯ ಜೊತೆಗೆ ಹಿಂದೂ-ಮುಸ್ಲಿಂ ಭಾವೈಕ್ಯತೆ, ಬಸವಣ್ಣರ ತತ್ವಗಳನ್ನು ಸಾರಿ ಸಾರಿ ಹೇಳಲಾಗುತ್ತದೆ.
ಪುರುಷರೇ ಸ್ತ್ರೀ ಪಾತ್ರಧಾರಿಗಳು: ಗವಾಯಿಗಳ ಕಂಪನಿಯಲ್ಲಿ ಸ್ತ್ರೀಯರ ಅಭಿಯನಕ್ಕೆ ಅವಕಾಶ ಇಲ್ಲ. ಹೀಗಾಗಿ, ಪುರುಷರೇ ಸ್ತ್ರೀ ಪಾತ್ರಗಳನ್ನು ಮಾಡುತ್ತಾರೆ. ಕಲಾವಿದ ಮಹದೇವ ಮಹಿಳೆಯ ಪಾತ್ರದಲ್ಲಿ ಮನೋಜ ವಾಗಿ ಅಭಿನಯಿಸಿದ್ದಾರೆ.
ಯಾರು ಸಹ ಆತನನ್ನು ಪುರುಷ ಎಂದು ಗುರುತಿಸಲು ಸಾಧ್ಯವೇ ಇಲ್ಲ ಅಷ್ಟೊಂದು ಸುಂದರವಾಗಿ ಅಭಿನಯಿಸಿ, ಎಲ್ಲರ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಎಲ್ಲ ಪಾತ್ರಗಳಲ್ಲಿಯೂ ಸಹ ಅಚ್ಚುಕಟ್ಟಾದ ಅಭಿನಯ, ಅಶ್ಲೀಲ ಇಲ್ಲದ ಸಂಭಾಷಣೆ ಇರುವುದರಿಂದ ಕುಟುಂಬ ಸಮೇತ ಕುಳಿತು ನೋಡುವಂತಿದೆ. ವಿಶೇಷ ಎಂದರೆ ಈ ನಾಟಕವನ್ನು ಸ್ತ್ರೀ ಪಾತ್ರದಲ್ಲಿ ನಟಿಸುತ್ತಿರುವ ರಚಿಸಿದ್ದಾರೆ. ಮಹಾದೇವ ಅವರೇ ಪಂಚಾಕರಿ ಗವಾಯಿಗಳ ಈ ನಾಟಕ ಸಂಘ ಈಗ 88ನೇ ವರ್ಷದಲ್ಲಿ ಮುನ್ನುಗ್ಗುತ್ತಿದೆ. ಸ್ತ್ರೀ ಪಾತ್ರದಲ್ಲಿಯೂ ಪುರುಷರೇ ನಟಿಸುವ ದೇಶದ ಏಕೈಕ ಕಂಪನಿ ಇದಾಗಿದೆ ಎನ್ನುವುದು ಹೆಮ್ಮೆಯ ಸಂಗತಿ.
ಕೊಪ್ಪಳ: ಗವಿಸಿದ್ದೇಶ್ವರ ರಥೋತ್ಸವದಲ್ಲಿ ಪಲ್ಲಕ್ಕಿ ಹೊತ್ತ ವಿಜಯೇಂದ್ರ!
ಆದಾಯ ಪುಣ್ಯಾಶ್ರಮಕ್ಕೆ:
ಕಲಾವಿದರು ನಾಟಕದಿಂದ ಬರುವ ಆದಾಯವನ್ನು ಗದಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ನೀಡುತ್ತಾರೆ. ಪುಣ್ಯಾಶ್ರಮದಲ್ಲಿರುವ ಅಂಧ ಮಕ್ಕಳ ಶೈಕ್ಷಣಿಕ ವೆಚ್ಚಕ್ಕಾಗಿ ಈ ನಾಟಕದಿಂದ ಬಂದಿರುವ ಆದಾಯ ಬಳಕೆ ಮಾಡಲಾಗುತ್ತದೆ. ನಾಟಕದ ಪಾತ್ರಧಾರಿಗಳಿಗೆ ನೀಡಿ, ಉಳಿದ ಆದಾಯವನ್ನು ಪುಣ್ಯಾಶ್ರಮಕ್ಕೆ ಸಲ್ಲಿಸಲಾಗುತ್ತದೆ.
ನಾಟಕದಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ವೀರೇಶ್ವರ ಪುಣ್ಯಾಶ್ರಮಕ್ಕೆ ಸಲ್ಲಿಸಲಾಗುತ್ತದೆ. ನಿರಂತರವಾಗಿ ಹೀಗೆ ನಡೆದುಕೊಂಡು ಬಂದಿದೆ. ನಾಟಕದಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಾರೆ ಎಂದು ಪಾತ್ರಧಾರಿ ಮತ್ತು ನಾಟಕ ರಚನಕಾರ ಮಹದೇವ ತಿಳಿಸಿದ್ದಾರೆ.
