ಅಥಣಿ(ನ.21): ರೆಬರ್ ಬ್ರದರ್ಸ್ ಗೆ(ಜಾರಕಿಹೊಳಿ) ಹೆದರಿ ಲಕ್ಷ್ಮೀ ಹೆಬ್ಬಾಳಕರ್ ಅವರು ಉಸ್ತುವಾರಿ ಬದಲಿಸಿಕೊಂಡಿದ್ದಾರಾ ಎಂಬ ಮಾತುಗಳು ಕೇಳಬರಲಾರಂಭಿಸಿವೆ. ಇದಕ್ಕೆ ಇಂಬು ನೀಡುವಂತೆ ಲಕ್ಷ್ಮೀ ಹೆಬ್ಬಾಳಕರ್ ಗೋಕಾಕ್ ಉಪಚುನಾವಣೆಯ ಉಸ್ತುವಾರಿ ಬದಲಿಸಿಕೊಂಡಿದ್ದಾರೆ. 

ಗುರುವಾರ ನಗರದಲ್ಲಿ ಗೋಕಾಕ್ ಉಪಚುನಾವಣೆಯ ಉಸ್ತುವಾರಿ ಬದಲಿಸಿಕೊಂಡಿದ್ದು ಏಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಗೋಕಾಕ್ ಕ್ಷೇತ್ರದ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವಳಲ್ಲ, ಗೋಕಾಕ್ ಕ್ಷೇತ್ರದ ರಾಜಕಾರಣವೇ ಬೇರೆಯಾಗಿದೆ. ಗೋಕಾಕ್ ಕ್ಷೇತ್ರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ. ಪಾಟೀಲರಂತ ನಾಯಕರು ಮಾತನಾಡುತ್ತಾರೆ. ಅವರ ಮುಂದೆ ನಾನು ತುಂಬಾ ಚಿಕ್ಕವಳು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗೋಕಾಕ್ ಕ್ಷೇತ್ವರದಲ್ಲಿ ಸತೀಶ ಜಾರಕಿಹೊಳಿಯವರ ನಾಯಕತ್ವ ತುಂಬಾ ಒಳ್ಳೆಯದಿದೆ. ಗೋಕಾಕ್ ನಲ್ಲಿ ಸಮರ್ಥರಿದ್ದಾರೆ ಅವರು ಚುನಾವಣಾ ಪ್ರಚಾರ ಮಾಡಿಕೊಳ್ಳುತ್ತಾರೆ. ಹೀಗಾಗಿ ನನ್ನ ಅವಶ್ಯಕತೆ ಅಥಣಿಗೆ ಇದೆ ಎಂದು ಇಲ್ಲಿ ಪ್ರಚಾರಕ್ಕೆ ಕರೆಯಿಸಿಕೊಂಡಿದ್ದಾರೆ. ನಾನು ಎಲ್ಲಿಗೆ ಪ್ರಚಾರಕ್ಕೆ ಕರೆದರೂ ಹೋಗುತ್ತೇನೆ. ಪಕ್ಷ‌ ಎಲ್ಲಿ ಕಳಿಸುತ್ತೊ ಅಲ್ಲಿ ಹೋಗಲು ರೆಡಿ ಎಂದ ಹೆಬ್ಬಾಳಕರ್ ಅವರು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.