ಬೆಳಗಾವಿ (ಅ.02): ಉತ್ತರ ಪ್ರದೇಶದಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಅಮಾನವೀಯ ಕೃತ್ಯ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. 

ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆಯ ವಿಡಿಯೋ ಪೋಸ್ಟ್‌ ಮಾಡಿರುವ ಅವರು, ಯುವತಿಯ ಕುಟುಂಬದವರಿಗೆ ಅವಳ ಮುಖ ತೋರಿಸದೇ ಉತ್ತರ ಪ್ರದೇಶ ಪೊಲೀಸರು ರಾತ್ರೋರಾತ್ರಿ ಸುಟ್ಟು ಹಾಕಿ ಅಮಾನವೀಯ ಕೃತ್ಯ ಎಸಗಿದ್ದಾರೆ. 

11 ರೇಪುಗಳು ; ಹತ್ತಾರು ಅನುಮಾನಗಳು... ಬೆಚ್ಚಿ ಬೀಳಿಸುವ ಯುಪಿ ರಿಪೋರ್ಟ್ ಕಾರ್ಡ್!

ಘಟನೆ ನಡೆದು 8 ದಿನಕ್ಕೆ ಕೇಸ್ ದಾಖಲಿಸಿಕೊಳ್ಳುತ್ತಿರಿ. ಆದರೆ ಯುವತಿ ಮೃತಪಟ್ಟಬಳಿಕ 8 ನಿಮಿಷ ಶವ ಯುಪಿ ಪೊಲೀಸರು ಇಡಲಿಲ್ಲ. ಪೊಲೀಸರೇ ನಿಮಗೆ ಮನುಷ್ಯತ್ವ ಇದೆಯಾ ಎಂದು ಯುಪಿ ಪೊಲೀಸರ ವಿರುದ್ಧ ಹೆಬ್ಬಾಳ್ಕರ್‌ ವಾಗ್ದಾಳಿ ನಡೆಸಿದ್ದಾರೆ.

ಆರೋಪಿಗಳಿಗೆ ಕಂಡಲ್ಲಿ ಗುಂಡು ಹಾಕಬೇಕು, ಗಲ್ಲಿಗೇರಿಸಬೇಕು ಅಂತಾ ನಾವೆಲ್ಲಾ ಒತ್ತಾಯ ಮಾಡೋಣ ಎಂದು ಹೇಳಿಕೆ ನೀಡಿರುವ ಅವರ ವಿಡಿಯೋ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.