ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಅಲ್ಪ ಸ್ವಲ್ಪ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ತೇವಾಂಶ ಕೊರತೆಯಿಂದ ಒಣಗುತ್ತಿವೆ. ಇದರಿಂದ ಬೆಳೆಯನ್ನು ರಕ್ಷಣೆ ಮಾಡಲು ರೈತರು ಸ್ಪಿಂಕ್ಲರ್‌ ಮೂಲಕ ನೀರು ಕೊಡಬೇಕಾದ ಪರಿಸ್ಥಿತಿ ತಲೆದೋರಿದೆ.

ನರಗುಂದ (ಜೂ.9) ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಅಲ್ಪ ಸ್ವಲ್ಪ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ತೇವಾಂಶ ಕೊರತೆಯಿಂದ ಒಣಗುತ್ತಿವೆ. ಇದರಿಂದ ಬೆಳೆಯನ್ನು ರಕ್ಷಣೆ ಮಾಡಲು ರೈತರು ಸ್ಪಿಂಕ್ಲರ್‌ ಮೂಲಕ ನೀರು ಕೊಡಬೇಕಾದ ಪರಿಸ್ಥಿತಿ ತಲೆದೋರಿದೆ.

ಕೆಲವು ಜಮೀನುಗಳಲ್ಲಿ ಬಿತ್ತನೆ:

ಪ್ರತಿ ವರ್ಷ ಮೇ ತಿಂಗಳ ಕೊನೆ ವಾರದಲ್ಲಿ ಉತ್ತಮ ಮಳೆ ಆಗುತ್ತಿತ್ತು. ರೈತರು ಜಮೀನು ಉಳುಮೆ ಮಾಡಿಕೊಂಡು ರೋಹಿಣಿ ಮಳೆಗೆ ಬಿತ್ತನೆ ಮಾಡುತ್ತಿದ್ದರು. ರೈತರು ಪ್ರತಿ ಎಕರೆಗೆ 6ರಿಂದ 8 ಕ್ವಿಂಟಲ್‌ ಹೆಸರು ಬೆಳೆಯುತ್ತಿದ್ದರು. ಆದರೆ ಈ ವರ್ಷ ಕೃತಿಕಾ, ಭರಣಿ ಮಳೆ ಸಂಪೂರ್ಣವಾಗಿ ಆಗಿಲ್ಲ. ಜಮೀನಿನಲ್ಲಿ ತೇವಾಂಶ ಇರದಿದ್ದರೂ ಮುಂದೆ ಮಳೆ ಆಗುವ ಆಶಾಭಾವನೆಯಿಂದ ಬಿತ್ತನೆ ಮಾಡಿದ್ದಾರೆ. ಆದರೆ ಬಿತ್ತನೆ ಮಾಡಿ 15 ದಿನ ಗತಿಸಿದರೂ ಮಳೆ ಆಗದಿರುವುದರಿಂದ ರೈತರು ತಮ್ಮ ಕೃಷಿ ಹೊಂಡದಲ್ಲಿ ಸಂಗ್ರಹಿರುವ ನೀರನ್ನು ಪಂಪ್‌ಸೆಟ್‌ ಮೂಲಕ ಸ್ಪಿಂಕ್ಲರ್‌ನಿಂದ ನೀರು ಬಿಡುತ್ತಿದ್ದಾರೆ. ತಾಲೂಕಿನಲ್ಲಿ ಬಿತ್ತನೆಗೆ ಬೇಕಾದ ಉತ್ತಮ ಮಳೆ ಆಗದೇ ಬರಗಾಲದ ಲಕ್ಷಣಗಳು ಗೋಚರಿಸುತ್ತಿವೆ. ಇದು ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾ​ಗಿ​ದೆ.

ಮುಂಗಾರುಪೂರ್ವ ಮಳೆ ಕೊರತೆ; 79 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ!

ಅಲ್ಪಸ್ವಲ್ಪ ರೋಹಿಣಿ ಮಳೆಗೆ ಹೆಸರು ಬಿತ್ತನೆ ಮಾಡಿದ್ದೇವೆ. ಆದರೆ ಮಳೆಯಾಗುತ್ತಿಲ್ಲ. ಮೊಳಕೆ ಒಡೆದ ಹೆಸರು ಬೆಳೆ ತೇವಾಂಶ ಕೊರತೆಯಿಂದ ಒಣಗುತ್ತಿದೆ. ಬೆಳೆಗೆ ಕೃಷಿ ಹೊಂಡದ ನೀರನ್ನು ಸ್ಪಿಂಕ್ಲರ್‌ ಮೂಲಕ ಬೆಳೆಗೆ ಪೂರೈಕೆ ಮಾಡುತ್ತಿದ್ದೇವೆ.

-ಯಲ್ಲಪ್ಪ ಚಲವಣ್ಣವರ, ಕುರ್ಲಗೇರಿ ರೈತ