ಉಡುಪಿ: ಕೊಲ್ಲೂರು ಕ್ಷೇತ್ರದ ಸುತ್ತ ಕೊಳಕು ವಾಸನೆ, ಎಲ್ಲಿ ನೋಡಿದರೂ ಬರೀ ತ್ಯಾಜ್ಯ..!

ಕೊಲ್ಲೂರು ದೇವಸ್ಥಾನಕ್ಕೆ ಬರುವ ಯಾತ್ರಾರ್ತಿಗಳು ಪರಿಸರ ಮಾಲಿನ್ಯಕ್ಕೂ ಕೊಡುಗೆ ನೀಡಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆಗಾಗಿ ಶೌಚಾಲಯ, ಒಳಚರಂಡಿ ವ್ಯವಸ್ಥೆ ತಕ್ಕಮಟ್ಟಿಗೆ ಇದ್ದರೂ ಕೂಡ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಗೆ ಇದು ಅನುಗುಣವಾಗಿಲ್ಲ. ಹಾಗಾಗಿ ಎಲ್ಲೆಂದರಲ್ಲಿ ದೇಹ ಬಾಧೆ ತೀರಿಸಿಕೊಂಡು ಪರಿಸರವನ್ನು ಹಾಳು ಗೆಡವಿದ್ದಾರೆ. 

Lack of Environmental Cleanliness in Kollur Mookambika Temple Premises in Udupi grg

ಉಡುಪಿ(ಜ.04):  ದೇಶದಲ್ಲಿ ಅತ್ಯಂತ ಪ್ರಸಿದ್ಧ ಶಕ್ತಿಪೀಠ ಎನಿಸಿರುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಈ ಬಾರಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ತಾಯಿ ಮೂಕಾಂಬಿಕೆಯ ದರ್ಶನ ಕೈಗೊಂಡು ಕೃತಾರ್ಥರಾಗಿದ್ದಾರೆ ಆದರೆ ಕ್ಷೇತ್ರದಲ್ಲಿ ಈ ಬಾರಿ ಪರಿಸರ ಸ್ವಚ್ಛತೆಯ ಕೊರತೆ ಕಾಣಿಸಿದೆ. ಕೊಲ್ಲೂರು ದೇವಸ್ಥಾನಕ್ಕೆ ಬರುವ ಯಾತ್ರಾರ್ತಿಗಳು ಪರಿಸರ ಮಾಲಿನ್ಯಕ್ಕೂ ಕೊಡುಗೆ ನೀಡಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆಗಾಗಿ ಶೌಚಾಲಯ, ಒಳಚರಂಡಿ ವ್ಯವಸ್ಥೆ ತಕ್ಕಮಟ್ಟಿಗೆ ಇದ್ದರೂ ಕೂಡ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಗೆ ಇದು ಅನುಗುಣವಾಗಿಲ್ಲ. ಹಾಗಾಗಿ ಎಲ್ಲೆಂದರಲ್ಲಿ ದೇಹ ಬಾಧೆ ತೀರಿಸಿಕೊಂಡು ಪರಿಸರವನ್ನು ಹಾಳು ಗೆಡವಿದ್ದಾರೆ. ದೇವಸ್ಥಾನ ಪರಿಸರದ ಆಸು ಪಾಸು ಗಬ್ಬು ವಾಸನೆ ಹೊಡೆಯುತ್ತಿದೆ.

ಕೊಲ್ಲೂರು ಕ್ಷೇತ್ರದ ಆಸು ಪಾಸು ಸೌಪರ್ಣಿಕಾ ನದಿಯಲ್ಲಿ ಮೊದಲಿನಿಂದಲೂ ಪರಿಸರ ಸ್ವಚ್ಛತೆಯದ್ದೇ ಕೊರತೆ. ಈ ಹಿಂದೆಯೂ ಅನೇಕ ಬಾರಿ ಇಲ್ಲಿನ ಅಸಮರ್ಪಕ ನಿರ್ವಹಣೆಯ ಕುರಿತು ದೂರುಗಳು ಕೇಳಿ ಬಂದಿದ್ದವು. ಇದೀಗ ದೇವಾಲಯದ ವಾತಾವರಣದಲ್ಲಿ ಗಂಧ, ಪುಷ್ಪಗಳ ಪರಿಮಳ ಬರಬೇಕಾದ ಸ್ಥಳದಲ್ಲಿ ಗಬ್ಬು ವಾಸನೆ ಹೊಡೆಯುತ್ತಿದೆ. ಈ ಬಾರಿ ಅತಿಹೆಚ್ಚಿನ ಸಂಖ್ಯೆಯ ಶಬರಿಮಲೆ ಯಾತ್ರೆಗಳು, ಪ್ರವಾಸಿ ಶಾಲಾ ಮಕ್ಕಳು ಬಂದ ಕಾರಣದಿಂದ ಸಹಸ್ರ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭಕ್ತರು ಭೇಟಿಕೊಟ್ಟಿದ್ದಾರೆ. ಈಗಲೂ ಬರುತ್ತಿದ್ದಾರೆ. 

ನಾರಾಯಣಗುರು ನಿಗಮ ಸ್ಥಾಪನೆ ಬಿಜೆಪಿಯ ಚುನಾವಣಾ ಗಿಮಿಕ್‌: ಸೊರಕೆ ಆರೋಪ

ಸಾವಿರಾರು ಜನ ಬಂದಾಗ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಕೊಲ್ಲೂರು ಕ್ಷೇತ್ರದಲ್ಲಿ ಇರುವುದಿಲ್ಲ. ಸಿಕ್ಕಿದ ಸ್ಥಳದಲ್ಲಿ ರಾತ್ರಿ ಕಳೆದು ಬೆಳಗಿನ ಜಾವ ದೇಹಬಾಧೆ ತೀರಿಸಿಕೊಳ್ಳಲು ಊರೂರು ಅಲೆದು ಪರಿಸರವನ್ನು ಹಾಳುಗಡವಿದ್ದಾರೆ. ಎಲ್ಲಿ ಹೋದರೂ ಮಲ ಮೂತ್ರಗಳ ವಾಸನೆ ಮೂಗಿಗೆ ಹೊಡೆಯುತ್ತದೆ.

ಈ ನಡುವೆ ಕ್ಷೇತ್ರದಲ್ಲಿ ನಿರ್ವಹಿಸಿರುವ ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ ಸುಮಾರು 19.97 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿದ್ದರೂ ಈ ಯೋಜನೆ ಹಳ್ಳ ಹತ್ತಿದೆ. ಕಾಮಗಾರಿಯ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಜೊತೆಗೆ ಕ್ಷೇತ್ರದ ಸುತ್ತಮುತ್ತಲೂ ಇರುವ ವಸತಿ ಸಮುಚ್ಚಯ, ಹೋಟೆಲ್, ಮನೆ , ವಾಣಿಜ್ಯ ಸಂಕೀರ್ಣಗಳ ತ್ಯಾಜ್ಯವನ್ನು ಕೂಡ ನದಿಗೆ ಬಿಡಲಾಗುತ್ತಿದೆ ಈ ಕೊಳಕು ನೀರಿನಿಂದ ಸೌಪರ್ಣಿಕಾ ನದಿಯಲ್ಲಿ ಜಲಚರಗಳು ಸಾಯುತ್ತಿವೆ.

ಒಳಚರಂಡಿ ವ್ಯವಸ್ಥೆ ಸೂಕ್ತ ರೀತಿಯಲ್ಲಿ ನಡೆದರೆ ದೇವಾಲಯದ ಪವಿತ್ರತೆ ಹೆಚ್ಚಬಹುದು. ಕೊಳಕು ನೀರನ್ನು ರಿ ಸೈಕ್ಲಿಂಗ್ ಮಾಡುವ ಸ್ಥಳ ಎತ್ತರದಲ್ಲಿದೆ. ಆ ಎತ್ತರಕ್ಕೆ ನೀರು ಏರುವುದಿಲ್ಲ. ಒಳ ಚರಂಡಿಗೆ ಹಾಕಿರುವ ಪೈಪ್ ಲೈನ್ ಗಳು ಕಳಬಾಗದಲ್ಲಿವೆ ಹಾಗಾಗಿ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ. ಈಗಿರುವ ಸ್ಥಿತಿಯಲ್ಲಿ ಈ ಯೋಜನೆ ಗ್ರಾಮ ಪಂಚಾಯಿತಿಗೆ ಹಸ್ತಾಂತರವಾದರೆ ನಿರ್ವಹಣೆ ಅಸಾಧ್ಯ. ಕಾಮಗಾರಿ ನಡೆಸಿರುವ ಇಂಜಿನಿಯರ್ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೊಲ್ಲೂರು ಕ್ಷೇತ್ರಕ್ಕೆ ದೇಶದ ಅನೇಕ ಭಾಗಗಳಿಂದ ಭಕ್ತರು ಬರುವುದರಿಂದ ದೇವಾಲಯಗಳ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿಗೆ ಇಂತಹ ಬೆಳವಣಿಗೆಗಳು ಕಪ್ಪು ಚುಕ್ಕೆಯಾಗಿದೆ.

Latest Videos
Follow Us:
Download App:
  • android
  • ios