Asianet Suvarna News Asianet Suvarna News

40% ಕಮಿಷನ್ ಕೊಟ್ಟು ಕೆಲ್ಸ ಮಾಡಲು ಅಸಾಧ್ಯ: ಹಂಚಿನಾಳ

ಕೆಂಪಣ್ಣ ಗುತ್ತಿಗೆದಾರರು ಆಗಿದ್ದರೆ ಅವರಿಗೆ ಇದೆಲ್ಲಾ ಸಹಜವಾಗಿಯೇ ಗೊತ್ತಾಗುತ್ತಿತ್ತು. ಉತ್ತರ ಕರ್ನಾಟಕದ ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು 2013 ರಲ್ಲಿ, ಕೆಂಪಣ್ಣ ಆರೋಪ ಮಾಡುತ್ತಿರುವ ಈಗ. ಇಷ್ಟೊಂದು ದಿನ ಇವರ ಗಮನಕ್ಕೆ ಬರಲಿಲ್ಲವೇ?: ಕೆ. ವಿ. ಹಂಚಿನಾಳ 

KV Hanchinal Talks Over 40 Percent Commission in Government grg
Author
First Published Aug 30, 2022, 10:46 AM IST

ಗದಗ(ಆ.30):  ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರು 40% ಕಮಿಷನ್ ಕೊಡಬೇಕು ಎನ್ನುವ ಡಿ.ಕೆಂಪಣ್ಣ ಆರೋಪ ಆಧಾರ ರಹಿತ, ಇದು ಕೇವಲ ರಾಜಕೀಯ ಪ್ರೇರಿತವಾಗಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಹಿರಿಯ ಸದಸ್ಯ ಕೆ. ವಿ. ಹಂಚಿನಾಳ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸೋಮವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೆಂಪಣ್ಣ ಆರೋಪ ನಿರಾಧಾರವಾಗಿದೆ. ಅವರಿಗೆ ವಯಸ್ಸಾಗಿದೆ. ಅಷ್ಟೇ ಅಲ್ಲದೇ ಅವರು ಗುತ್ತಿಗೆದಾರರೇ ಅಲ್ಲ. ಲಕ್ಷಾಂತರ ಜನ ಗುತ್ತಿಗೆದಾರರು ಇದ್ದಾರೆ. ಅಷ್ಟೇ ಅಲ್ಲದೇ ಗುತ್ತಿಗೆದಾರರಿಗೂ ಬೇರೆ ಬೇರೆ ಸಮಸ್ಯೆಗಳು ಹೆಚ್ಚಾಗಿದೆ. ಆದರೆ ಯಾವ ಗುತ್ತಿಗೆದಾರರಿಗೂ 40% ಕಮಿಷನ್ ಕೊಟ್ಟು ಕೆಲಸ ಮಾಡೋಕೆ ಸಾಧ್ಯವೇ ಇಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ASIANET SUVARNA NEWS EXCLUSIVE: ಅಭಿಮಾನಿಯ ಬಯಕೆಯಂತೆ ಮಗುವಿಗೆ ಅಪ್ಪು ಎಂದು ಹೆಸರಿಟ್ಟ ರಾಘಣ್ಣ!

ಕೆಂಪಣ್ಣ ಅವರು ಈ ಫೀಲ್ಡ್‌ನಲ್ಲಿ ಇಲ್ಲ. ಹಾಗಾಗಿ ಅವರಿಗೆ ಇದರ ಬಗ್ಗೆ ಜ್ಞಾನವೇ ಇಲ್ಲ. ಕಂಪಣ್ಣ ಅವರ ಪ್ರಕಾರ 40 ಪರ್ಸೆಂಟೇಜ್, ಇದರೊಟ್ಟಿಗೆ 18 ಜಿಎಸ್‌ಟಿ ಕಟ್ಟಿ, ಇನ್ನೂ 2% ಇನ್ಕಮ್ ಟ್ಯಾಕ್ಸ್ ಕಟ್ಟುತ್ತವೆ ಇದೆಲ್ಲಾ ಗುತ್ತಿಗೆದಾರರು ಕೆಲಸ ಮಾಡಲು ಸಾಧ್ಯವೇ ಇಲ್ಲ, ಇದು ಕೇವಲ ರಾಜಕೀಯ ಆರೋಪವಾಗಿದ್ದು 40% ಕೊಟ್ಟು ಗುತ್ತಿಗೆದಾರರು ಕೆಲಸ ಮಾಡಲು ಅಸಾಧ್ಯವಾದ ಮಾತು.

ಕೆಂಪಣ್ಣ ಅವರು ಗುತ್ತಿಗೆದಾರರು ಆಗಿದ್ದರೆ ಅವರಿಗೆ ಇದೆಲ್ಲಾ ಸಹಜವಾಗಿಯೇ ಗೊತ್ತಾಗುತ್ತಿತ್ತು. ಉತ್ತರ ಕರ್ನಾಟಕದ ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು 2013 ರಲ್ಲಿ, ಕೆಂಪಣ್ಣ ಆರೋಪ ಮಾಡುತ್ತಿರುವ ಈಗ. ಇಷ್ಟೊಂದು ದಿನ ಇವರ ಗಮನಕ್ಕೆ ಬರಲಿಲ್ಲವೇ ? ಗುತ್ತಿಗೆದಾರರ ಬಗ್ಗೆ ಕಾಳಜಿ ಇರುವ ಕೆಂಪಣ್ಣ ಅವರು ಕೋವಿಡ್ ಸಂದರ್ಭದಲ್ಲಿ ಗುತ್ತಿಗೆದಾರರು ಸಾಕಷ್ಟು ಸಮಸ್ಯೆಯಲ್ಲಿದ್ದಾಗ ಎಲ್ಲಿ ಹೋಗಿದ್ದರು, ಇವರ ಸಂಘ ಯಾರ ನೆರವಿಗೆ ಧಾವಿಸಿ ಬಂದಿತ್ತು ಎನ್ನುವುದನ್ನು ರಾಜ್ಯದ ಜನತೆಯ ಮುಂದೆ ಸ್ಪಷ್ಟ ಪಡಿಸಲಿ ಎಂದರು.

ಇವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಆರೋಪ ಮಾಡಿರುವುದನ್ನು ಇಲ್ಲಿ ಗಮನಿಸಬಹುದು. 40% ಕಮಿಷನ್ ಆರೋಪ ಮಾಡಿದರೆ ಅಂತಹ ಗುತ್ತಿಗೆದಾರನ ವಿರುದ್ಧ ತನಿಖೆ ಮಾಡಿ. ಈ ಕಮಿಷನ್ ಆರೋಪದಿಂದಾಗಿ ಗುತ್ತಿಗೆದಾರರಿಗೆ ಮಾನ, ಮಾರ್ಯಾದೆ ಇಲ್ಲ ಎನ್ನುವ ಥರ ಆಗಿದೆ. ಇವರ ಆರೋಪದಿಂದ ಜನ ನಮ್ಮನ್ನು ಬೋಗಸ್ ಕೆಲಸ ಮಾಡುತ್ತಾರೆ ಎಂದು ಅನುಮಾನದಿಂದ ನೋಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಗುತ್ತಿಗೆದಾರ ಸಂಘದ ಸದಸ್ಯ ಮಹಾಂತೇಶ ಅಂಗಡಿ, ಬಸವರಾಜ್ ಬಿಂಗಿ, ಬಿ ಎನ್ ಪಾಟೀಲ್, ಎನ್ ಸಿ ಮಾಗಡಿ ಮತ್ತ ಇತರರು ಇದ್ದರು.
 

Follow Us:
Download App:
  • android
  • ios