Asianet Suvarna News Asianet Suvarna News

ಹೈರಿಸ್ಕ್‌ : ಭಾರತದಿಂದ ಕುವೈತ್‌ ನೇರ ಪ್ರವೇಶ ಬಂದ್‌

ಕೊರೋನಾ ಮಹಾಮಾರಿ ಆತಂಕ ತೀವ್ರ ಹೆಚ್ಚಿದ್ದು ಈ ನಿಟ್ಟಿನಲ್ಲಿ ಕುವೈತ್ ನಲ್ಲಿ  31 ದೇಶಗಳಿಂದ ಆಗಮಿಸುವವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. 

Kuwait visa ban due to corona high risk
Author
bengaluru, First Published Aug 3, 2020, 10:43 AM IST

ಮಂಗಳೂರು (ಆ.03): ಕೊರೋನಾ ಆತಂಕ ಹೆಚ್ಚಿ​ರುವ ಭಾರತ ಸೇರಿ 31 ರಾಷ್ಟ್ರ​ಗ​ಳಿಂದ ಈಗ ಕುವೈತ್‌ ಪ್ರವೇಶಕ್ಕೆ ಅವಕಾಶ ನಿರ್ಬಂಧಿ​ಸಿ​ರುವ ಕಾರ​ಣ ಅನಿ​ವಾಸಿ ಭಾರ​ತೀ​ಯರು ಕೆಲ ತಿಂಗಳ ಕಾಲ ನೇರ​ವಾಗಿ ಕುವೈತ್‌ ಯಾನ ಕೈಗೊ​ಳ್ಳು​ವಂತಿ​ಲ್ಲ. ಒಮಾನ್‌ ಅಥವಾ ದುಬೈಗೆ ತೆರಳಿ ಕ್ವಾರಂಟೈನ್‌ ಅವಧಿ ಮುಗಿಸಿ ಕುವೈತ್‌ ಪ್ರವೇ​ಶಿ​ಸ​ಬ​ಹು​ದಾ​ಗಿ​ದೆ.

ಕೊರೋನಾ ಲಾಕ್ಡೌನ್‌ ಹಾಗೂ ಅದಕ್ಕೂ ಮೊದಲೇ ನೂರಾರು ಅನಿವಾಸಿ ಭಾರತೀಯರು ಕುವೈತ್‌ನಿಂದ ತಾಯ್ನಾಡಿಗೆ ಆಗಮಿಸಿದ್ದು, ಮತ್ತೆ ತೆರಳಲು ಈಗ ಪ್ರವೇಶ ನಿರ್ಬಂಧ ತೊಡಕಾಗಿದೆ. ಮುಂದಿನ ಏಪ್ರಿಲ್‌ ವರೆಗೆ ಅಂದರೆ 9 ತಿಂಗಳ ಕಾಲ ಈ ಪ್ರವೇಶ ನಿರ್ಬಂಧ ಮುಂದುವರಿಯಲಿದೆ ಎಂದು ಅಲ್ಲಿ​ನ ಪತ್ರಿಕೆಯೊಂದು ಹೇಳಿದೆ. ಈಗಾಗಲೇ ವೀಸಾ ಅವಧಿ ಮುಗಿದವರಿಗೆ ಹಾಗೂ ವೀಸಾ ಅವಧಿ ಇದ್ದರೂ ಪಾಸ್‌ಪೋರ್ಟ್‌ ಅವಧಿ ಮುಗಿದವರಿಗೆ ಈ ನಿಯ​ಮ ಅನ್ವಯವಾಗಲಿದೆ.

ಪಾಸ್‌ಪೋರ್ಟ್‌ನ್ನು ಇಲ್ಲಿ ನವೀಕರಣ ಮಾಡಿದರೂ ರೆಸಿಡೆನ್ಸಿ (ವಾಸ್ತವ್ಯ) ದೃಢೀಕರಣದ ನವೀಕರಣ ಕುವೈಟ್‌ನಲ್ಲೇ ಮಾಡಿಸಬೇಕಾಗುತ್ತದೆ. ಅದಕ್ಕೆ ಕುವೈಟ್‌ ಸದ್ಯದ ಮಟ್ಟಿಗೆ ಬ್ರೇಕ್‌ ಹಾಕಿದೆ. ಹೀಗಾಗಿ ಇವೆರಡು ಪ್ರಕರಣಗಳಲ್ಲಿ ಕುವೈಟ್‌ಗೆ ತೆರಳಲು ಸಾಧ್ಯವಾಗುವುದಿಲ್ಲ.

ಆದರೆ, ವೀಸಾ ಹಾಗೂ ಪಾಸ್‌ಪೋರ್ಟ್‌ ಅವಧಿ (6 ತಿಂಗಳ ಅವಧಿ) ಮುಕ್ತಾಯಗೊಳ್ಳದಿದ್ದರೆ, ಅಂಥವರು ಸುತ್ತು ಬಳಸಿ ಕುವೈಟ್‌ ತಲುಪಲು ಅವಕಾಶ ಕಲ್ಪಿಸಲಾಗಿದೆ. ಅಂದರೆ, ಭಾರತದಿಂದ ಕುವೈಟ್‌ಗೆ ನೇರ ಯಾನದ ಬದಲು ದುಬೈ ಅಥವಾ ಒಮಾನ್‌ಗೆ ತೆರಳಿ, ಅಲ್ಲಿ 14 ದಿನ ಕ್ವಾರಂಟೈನ್‌ ಮುಗಿಸಿ ನಂತರವಷ್ಟೆಅಲ್ಲಿಂದ ಕುವೈಟ್‌ ಪ್ರವೇಶಿಸಬಹುದು ಎಂದು ಅಲ್ಲಿನ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

Follow Us:
Download App:
  • android
  • ios