Asianet Suvarna News Asianet Suvarna News

H Vishwanath ವಿರುದ್ಧ ಗರಂ : ಖಡಕ್ ಎಚ್ಚರಿಕೆ ನೀಡಿದ ಮುಖಂಡರು

  • ಕುರುಬ ಸಮುದಾಯದಲ್ಲಿ ಒಡಕು ಮೂಡಿಸುವ ಹೇಳಿಕೆ ನೀಡುವುದು ಮುಂದುವರೆದರೆ ಉಗ್ರ ಹೋರಾಟ 
  • ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಎಂ. ಶಿವಣ್ಣ ಎಚ್ಚರಿಕೆ
Kuruba Leaders Warns To BJP Leader H vishwanath snr
Author
Bengaluru, First Published Nov 8, 2021, 10:11 AM IST

 ಮೈಸೂರು (ನ.08): ಕುರುಬ (Kuruba) ಸಮುದಾಯದಲ್ಲಿ ಒಡಕು ಮೂಡಿಸುವ ಹೇಳಿಕೆ ನೀಡುವುದು ಮುಂದುವರೆದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ (karnataka) ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಎಂ. ಶಿವಣ್ಣ (M shivanna) ಎಚ್ಚರಿಸಿದರು.

ಇತ್ತೀಚಿಗೆ ಕೆಲ ರಾಜಕೀಯ (Politics) ಮುಖಂಡರು ಕುರುಬ ಸಮುದಾಯದಲ್ಲಿ ಒಡಕು ಮೂಡಿಸುವಂತಹ ಹೇಳಿಕೆ ನೀಡುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಸಮಾಜಕ್ಕೆ ಕೊಡುಗೆ ನೀಡಿದ ಒಬ್ಬ ನಾಯಕನ ವಿರುದ್ಧವಾಗಿ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವುದು ಸರಿಯಲ್ಲ. ಇತ್ತೀಚಿನ ಕೆಲವು ದಿನಗಳ ಹಿಂದೆ ನಮ್ಮ ಸಮಾಜದ ಮುಖಂಡರು, ಮಾಜಿ ಮಂತ್ರಿ ವಿಶ್ವನಾಥ್‌ (Vishwanath) ಅವರು ಸಿದ್ದರಾಮಯ್ಯ (Siddaramaiah) ಬಗ್ಗೆ ಬಹಳ ಕಟುವಾದ ಶಬ್ಧಗಳಲ್ಲಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಈ ಸಮಾಜಕ್ಕೆ ಏನು ಕೊಟ್ಟಿದ್ದಾರೆ. ಅಹಿಂದ ವರ್ಗಕ್ಕೆ (Ahinda) ಅವರ ಕೊಡುಗೆ ಏನು? ಎಂದು ಅವರು ಪ್ರಶ್ನಿಸಿದರು.

ಅಂದಿನ ರಾಮಕೃಷ್ಣ ಹೆಗಡೆ (Ramakrishna Hegade) ಅವರ ಸರ್ಕಾರದಲ್ಲಿ ಪಶುಸಂಗೋಪನೆ ಸಚಿವರಾಗಿದ್ದ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕುರುಬರ ಸಂಘದ ಬೆಂಗಳೂರಿನ (Bengaluru) ಆಸ್ತಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂದು ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದವರು ಬೆಂಗಳೂರು ಆಸ್ತಿಯನ್ನು ಗಿರವಿ ಇಡಲು ಹೋಗಿದ್ದರು. ಎಸ್‌.ಆರ್‌. ಬೊಮ್ಮಾಯಿ (SR Bommai) ಅವರ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಮಾಡಿ 500ನೇ ವರ್ಷ ಕನಕ ಜಯಂತಿಯನ್ನು (Kanaka Jayanti) ಸರ್ಕಾರದ ವಯಿಂದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲು ಕಾರಣರಾಗಿದ್ದಾರೆ ಎಂದರು.

ಸಿದ್ದರಾಮಯ್ಯನವರನ್ನು ಟೀಕಿಸಿದರೆ ಅವರಗಿಂತ ಎತ್ತರದ ನಾಯಕನಾಗುತ್ತೇನೆ ಎಂದು ಕನಸು ಕಾಣುತ್ತಿದ್ದರೆ ಅದು ನಿಮ್ಮ ಭ್ರಮೆ. ಅವರನ್ನು ಟೀಕಿಸಿ ಸಣ್ಣವರಾಗಬೇಡಿ. ನಮ್ಮ ಸಮಾಜಕ್ಕೆ ವಿಶ್ವನಾಥ್‌ ಕೊಡುಗೆ ಏನೂ ಇಲ್ಲ ಎಂದು ಹೇಳಿಲ್ಲ. ಆದರೆ ಇವರು ಒಂದೊಂದು ಪಕ್ಷಕ್ಕೆ ಸೇರಿದ ಬಳಿಕ ಅದೇ ಪಕ್ಷದ ವರಿಷ್ಠರನ್ನು ಟೀಕಿಸುವ ಮನೋಭಾವ ನಮ್ಮ ಸಮುದಾಯಕ್ಕೆ ಅಗೌರವ ಉಂಟು ಮಾಡಲಿದೆ ಎಂದು ಅವರು ಹೇಳಿದರು.

ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ದಲಿತರ (Dalits) ಬಗ್ಗೆ ಸಿದ್ದರಾಮಯ್ಯ ಹಾಗೆ ಹೇಳಿಲ್ಲ ಎಂದರೂ, ಸಿ.ಟಿ. ರವಿ (CT Ravi) ಅವರು ಟೀಕಿಸುತ್ತಲೇ ಇದ್ದಾರೆ. ಆ ಮೂಲಕ ಸಮಾಜವನ್ನು ಬೇರೆ ಸಮಾಜದೊಂದಿಗೆ ಎತ್ತಿ ಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಸದಸ್ಯ ಜೆ. ಗೋಪಿ, ಚೌಹಳ್ಳಿ ಪುಟ್ಟಸ್ವಾಮಿ, ಮಹದೇವಪ್ಪ ಇದ್ದರು.

ಕಂಬಳಿ ವಿಚಾರ ತೆಗೆದು ಟೀಕೆ : 

ಕುರುಬರು, ಕಂಬಳಿ, ಕುರಿ, ಜಾತಿ ಸೇರಿದಂತೆ ಅನಾವಶ್ಯಕ ಚರ್ಚೆಗಳು ಆರಂಭವಾಗಿದೆ. ಜಾತಿ ವಿಚಾರವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraja bommai) ಆ ಭಾಗದವರು. ಅವರಿಗೆ ಕುರುಬ ಸಮುದಾಯದವರು ಕಂಬಳಿ ಹೊದಿಸಿ ಶುಭ ಹಾರೈಸಿದ್ದಾರೆ. ಆದರೆ, ಇದನ್ನು ಸಿದ್ದರಾಮಯ್ಯ (Siddaramaiah) ಸಹಿಸುತ್ತಿಲ್ಲ. ಅದನ್ನೇ ಸಿದ್ದರಾಮಯ್ಯ ಅನಗತ್ಯವಾಗಿ ಹಾದಿರಂಪ ಬೀದಿರಂಪ ಮಾಡುತ್ತಿದ್ದಾರೆ ಎಂದು ಎಚ್ ವಿಶ್ವನಾಥ್ ಆರೋಪಿಸಿದ್ದರು.

ಕಂಬಳಿ ಹೊದ್ದುಕೊಳ್ಳಲು ಇವರಾರು? ಕಂಬಳಿಗೂ ಇವರಿಗೂ ಏನು ಸಂಬಂಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಇದು ಸಿದ್ದರಾಮಯ್ಯರ ಸಣ್ಣತನವನ್ನು ತೋರಿಸಿದೆ. ಇವರು ಸಹ ಮುಖ್ಯಮಂತ್ರಿಯಾಗಿದ್ದವರು. ನೀವು ಸಮಾಜದ ಗೌರವವನ್ನು ಕಳೆಯುತ್ತಿದ್ದೀರಿ. ಬಸವರಾಜ ಬೊಮ್ಮಾಯಿಯವರು ಕಂಬಳಿ ಹೊದ್ದುಕೊಂಡಾಗ ಅದರ ಗೌರವವನ್ನು ಹೆಚ್ಚಿಸುತ್ತೇನೆ. ಕುರುಬ ಸಮುದಾಯದ ಹಿತ ಕಾಯುತ್ತೇನೆಂದು ಭರವಸೆ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ ಏಕವಚನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿಯನ್ನು ನಿಂದಿಸುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

Follow Us:
Download App:
  • android
  • ios