ಮಂಗಳೂರು : ರಾಜ್ಯದ ಅತ್ಯಂತ ಶ್ರೀಮಂತ ದೇಗುಲ ಎಂದೇ ಪ್ರಸಿದ್ಧವಾಗಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದಿದೆ. 

ಪ್ರತೀ ವರ್ಷ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ಆದಾಯ ಈ ಬಾರಿ ಕುಸಿದಿದೆ. ಕಳೆದ ವರ್ಷ 95.92 ಕೋಟಿ ರು. ಇದ್ದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಸ್ತಿ ಈ ಬಾರಿ ಕುಸಿತ ಕಂಡಿದೆ. ಈ ಬಾರಿ 92.2 ಕೋಟಿ ರು. ಸಂಗ್ರವಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದಲ್ಲಿ 3.83 ಕೋಟಿ ರು. ಇಳಿದಿದೆ. ಕಳೆದ ಏಳು ವರ್ಷಗಳಲ್ಲಿ ಮೂರು ಪಟ್ಟು ಆದಾಯದಲ್ಲಿ ಹೆಚ್ಚಳವಾಗಿದ್ದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಈ ಬಾರಿ ಭಾರಿ ಇಳಿದಿದೆ. 

ನೀರಿನ ಕೊರತೆ, ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಇಳಿಕೆ ಹಾಗೂ ಇಲ್ಲಿನ ಆಡಳಿತ ಮಂಡಳಿ ಮುಸುಕಿನ ಗುದ್ದಾಟವು ಆದಾಯ ಇಳಿಕೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.