ತುಮಕೂರು (ಡಿ.03): ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ  ತುಮಕೂರು ಮಧುಗಿರಿ ಹಾಗೂ ತುಮಕೂರು ಪಾವಗಡ ಮಾರ್ಗದ ಸಾರಿಗೆ ದರವನ್ನು ಪರಿಷ್ಕರಿಸಲಾಗಿದೆ. 

ಈ ಬಗ್ಗೆ ನಿಗಮದ  ವಿಭಾಗೀಯ  ಸಂಚಾರನಿಯಂತ್ರಣಾಧಿಕಾರಿ ಫಕೃದ್ದೀನ್ ತಿಳಿಸಿದ್ದಾರೆ.

ಈ ಪರಿಷ್ಕೃತ ದರ ಡಿಸೆಂಬರ್ 4 ರಿಂದ ಜಾರಿಗೆ ಬರಲಿದೆ. ಪರಿಷ್ಕರಣೆಯಾಗಿರುವ ದರದನ್ವಯ ತುಮಕೂರು- ಮಧುಗಿರಿ ಮಾರ್ಗದಲ್ಲಿ ತುಮಕೂರಿನಿಂದ ಮಧುಗಿರಿಗೆ  ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 42 ರು.ಗಳ ಪ್ರಯಾಣ ದರವನ್ನು 35 ರು.ಗಳಿಗೆ ಇಳಿಸಲಾಗಿದೆ. 

ಬಿಎಂಟಿಸಿ ಪ್ರಯಾಣಿಕರಿಗೆ ಖುಷ್ ಖಬರ್; ಟಿಕೆಟ್ ದರ ಇಳಿಕೆ

ಅದೇ ರೀತಿ  ತುಮಕೂರು ಪಾವಗಡ ಮಾರ್ಗದಲ್ಲಿ ತುಮಕೂರಿನಿಂದ ಮಧುಗಿರಿಗೆ ನಿಗಧಿತ ನಿಲುಗಡೆಯಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 47 ರು.ಗಳನ್ನು 40 ರು.ಗಳಿಗೆ  ಇಳಿಸಲಾಗಿದೆ. 

ಸಾರ್ವಜನಿಕ ಪ್ರಯಾಣಿಕರು ಪರಿಸ್ಕೃತ ಸಾರಿಗೆ ದರ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ