Asianet Suvarna News Asianet Suvarna News

400 ಎಲೆಕ್ಟ್ರಿಕ್‌ ಬಸ್‌ಗೆ KSRTC ಟೆಂಡರ್‌ ಆಹ್ವಾನ

ಗುತ್ತಿಗೆ ಆಧಾರದ ಮೇಲೆ ಬಿಎಂಟಿಸಿಗೆ 300 ಸೇರಿದಂತೆ ಒಟ್ಟು 400 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಕೆಎಸ್‌ಆರ್‌ಟಿಸಿ ಟೆಂಡರ್‌ ಕರೆದಿದೆ.

KSRTC Tender For 400 Electric Buses
Author
Bengaluru, First Published Sep 20, 2019, 7:20 AM IST

ಬೆಂಗಳೂರು (ಸೆ.20):  ಕಡೆಗೂ ರಾಜ್ಯದಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರದ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಗುತ್ತಿಗೆ ಆಧಾರದ ಮೇಲೆ ಬಿಎಂಟಿಸಿಗೆ 300 ಸೇರಿದಂತೆ ಒಟ್ಟು 400 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಕೆಎಸ್‌ಆರ್‌ಟಿಸಿ  ಟೆಂಡರ್‌ ಕರೆದಿದೆ.

ಕೆಎಸ್‌ಆರ್‌ಟಿಸಿಗೆ ಅಂತರ್‌ ನಗರ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹವಾ ನಿಯಂತ್ರಿತ ವ್ಯವಸ್ಥೆಯ 50 ಎಲೆಕ್ಟ್ರಿಕ್‌ ಬಸ್‌, ಬಿಎಂಟಿಸಿಗೆ ನಗರ ಸಾರಿಗೆಗೆ ಪೂರಕವಾಗಿ ಹವಾನಿಯಂತ್ರಿತ 300 ಎಲೆಕ್ಟ್ರಿಕ್‌ ಬಸ್‌ ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ ನಗರ ಕಾರ್ಯಾಚರಣೆಗೆ 50 ಸೇರಿ ಒಟ್ಟು 400 ಎಲೆಕ್ಟ್ರಿಕ್‌ ಬಸ್‌ಗೆ ಟೆಂಡರ್‌ ಆಹ್ವಾನಿಸಲಾಗಿದೆ. ಸೆ.27ರಂದು ಟೆಂಡರ್‌ ಪೂರ್ವ ಸಭೆ ನಿಗದಿಯಾಗಿದೆ. ಅ.18 ಟೆಂಡರ್‌ ಸಲ್ಲಿಕೆಗೆ ಕಡೆಯ ದಿನ. ಅ.21ರಂದು ಪ್ರೀ ಕ್ವಾಲಿಫಿಕೇಶನ್‌ ಬಿಡ್‌ ಮತ್ತು ಅ.30ರಂದು ಕಮರ್ಷಿಯಲ್‌ ಬಿಡ್‌ ತೆರೆಯುವುದಾಗಿ ಟೆಂಡರ್‌ನಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಬೃಹತ್‌ ಕೈಗಾರಿಕಾ ಸಚಿವಾಲಯದ ಫೇಮ್‌ ಎರಡನೇ ಹಂತದಲ್ಲಿ ಈ ಮೂರು ರಸ್ತೆ ಸಾರಿಗೆ ನಿಗಮಗಳು ಪಡೆಯುವ ಪ್ರತಿ ಎಲೆಕ್ಟ್ರಿಕ್‌ ಬಸ್‌ಗೆ ಸುಮಾರು .1 ಕೋಟಿ ಸಬ್ಸಿಡಿ ಸಿಗಲಿದೆ. ಹಾಗಾಗಿ ನಿಗಮಗಳಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಇನ್ನು ಎಲೆಕ್ಟ್ರಿಕ್‌ ಬಸ್‌ ಬ್ಯಾಟರಿ ಚಾರ್ಜಿಂಗ್‌ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಕೆಗೆ ಮೂರೂ ನಿಗಮಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.

Follow Us:
Download App:
  • android
  • ios