ಬೆಳಗಾವಿ(ಡಿ.12): ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾರಿಗೆ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದಲ್ಲಿ ಇಂದು(ಶನಿವಾರ) ನಡೆದಿದೆ. ದತ್ತಾ ಮಂಡೋಲ್ಕರ್(58) ಮೃತ ನೌಕರರಾಗಿದ್ದಾರೆ. 

ಮೃತ ದತ್ತಾ ಮಂಡೋಲ್ಕರ್ ಅವರು ಶುಕ್ರವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದರು. ದತ್ತಾ ಮಂಡೋಲ್ಕರ್ ಬೆಳಗಾವಿ ನಗರ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ಬೆಳಗ್ಗೆಯಿಂದ ರಾತ್ರಿಯವರೆಗೂ ಮಂಡೋಲ್ಕರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಸವದಿನೂ ಮೂಲೆ ಗುಂಪೇ: ಸಾರಿಗೆ ಸಚಿವರ ವಿರುದ್ಧ ಸಾರಿಗೆ ನೌಕರರ ಆಕ್ರೋಶ

ರಾತ್ರಿ ಮನೆಗೆ ತೆರಳಿದ್ದರು. ನಗರದ ವಡಗಾವಿಯ ಮನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

ಬೆಳಗಾವಿಯಲ್ಲಿ ಎರಡನೇ ದಿನವೂ ಬಸ್ ಸಂಚಾರ ಸ್ಥಗಿತಗೊಳಿಸಿ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಬರಲು ಬಸ್ ಸೌಲಭ್ಯ ಇರದ ಹಿನ್ನೆಲೆ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗಿದೆ. 

ಪಿಹೆಚ್‌ಡಿ ಕೋರ್ಸ್ ವರ್ಕ್,  ಡಿಪ್ಲೊಮಾ ಇನ್ ಯೋಗಾ ಪರೀಕ್ಷೆ, ಅಂಬೇಡ್ಕರ್ ಸ್ಟಡೀಸ್ ಪರೀಕ್ಷೆ ಸೇರಿ ಹಲವು ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಇಂದು ನಡೆಯಬೇಕಿದ್ದ ಯೋಗಾ ಡಿಪ್ಲೊಮಾ ಪರೀಕ್ಷೆ ಡಿ. 15 ಕ್ಕೆ ಮುಂದೂಡಿಕೆಯಾಗಿದೆ.