Asianet Suvarna News Asianet Suvarna News

ಚಿಕ್ಕಮಗಳೂರು: ಲೋಕಾಯುಕ್ತ ದಾಳಿ, ಲಂಚ ಸಮೇತ ಸಿಕ್ಕಿಬಿದ್ದ ಕೆಎಸ್ಆರ್‌ಟಿಸಿ ಡಿಸಿ

ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಡಿಸಿ. ಚಿಕ್ಕಮಗಳೂರಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಒಳಗಿನ ಕೆಎಸ್ಆರ್‌ಟಿಸಿ ಡಿಸಿ ಕಚೇರಿಯಲ್ಲಿ ಚಾಲಕರೊಬ್ಬರನ್ನ ಮೂಡಿಗೆರೆ ಬಸ್ ಡಿಪೋವಿನಿಂದ ಚಿಕ್ಕಮಗಳೂರು ಬಸ್ ಡಿಪೋವಿಗೆ ವರ್ಗಾವಣೆ ಮಾಡಲು 10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೆ.ಎಸ್.ಆರ್.ಟಿ.ಸಿ. ಡಿಸಿ 10,000 ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ರೆಡ್ ಹ್ಯಾಂಡಾಗಿ ವಶಕ್ಕೆ ಪಡೆದಿದ್ದಾರೆ.

KSRTC DC Arrested For Taken Bribe in Chikkamgaluru grg
Author
First Published Feb 6, 2024, 9:40 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.06): 10,000 ಲಂಚ ಪಡೆಯುವಾಗ ಕೆಎಸ್ಆರ್‌ಟಿಸಿ ಡಿಸಿ ಲೋಕಾಯುಕ್ತ ಪೊಲೀಸರ ಅತಿಥಿಯಾಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.  ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಡಿಸಿ. ಚಿಕ್ಕಮಗಳೂರಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಒಳಗಿನ ಕೆಎಸ್ಆರ್‌ಟಿಸಿ ಡಿಸಿ ಕಚೇರಿಯಲ್ಲಿ ಚಾಲಕರೊಬ್ಬರನ್ನ ಮೂಡಿಗೆರೆ ಬಸ್ ಡಿಪೋವಿನಿಂದ ಚಿಕ್ಕಮಗಳೂರು ಬಸ್ ಡಿಪೋವಿಗೆ ವರ್ಗಾವಣೆ ಮಾಡಲು 10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೆ.ಎಸ್.ಆರ್.ಟಿ.ಸಿ. ಡಿಸಿ 10,000 ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ರೆಡ್ ಹ್ಯಾಂಡಾಗಿ ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೆಎಸ್ಆರ್‌ಟಿಸಿ ಡಿಸಿ ಒಬ್ಬರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆ ಕೂಡ ಕೆಎಸ್ಆರ್‌ಟಿಸಿ. ಡಿಸಿ ಮೇಲೆ ಸಾಕಷ್ಟು ಆರೋಪಗಳು ಕೇಳ ಬಂದಿದ್ದವು. ಇಲಾಖೆಯ ನೌಕರರು, ಚಾಲಕರು ಹಾಗೂ ನಿರ್ವಾಹಕರನ್ನು ಒಂದು ಡಿಪೋವಿನಿಂದ ಮತ್ತೊಂದು ಡಿಪೋವಿಗೆ ವರ್ಗಾವಣೆ ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೂಡ ಇವರ ಮೇಲಿದೆ. ಸಾಲದ್ದಕ್ಕೆ ಇಲಾಖೆ ನೌಕರರ ಮೇಲೆ ಜಾತಿ ನಿಂದನೆ ಮಾಡಿದ ಕಾರಣ ದಲಿತ ಸಂಘಟನೆಗಳು ಇವರ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದರು. 

ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ತೆರಿಗೆ ಹಣ ಬಂದಿದೆ: ಸಿಎಂ ಸಿದ್ದುಗೆ ಪ್ರಶ್ನೆ ಮಾಡಿದ ಸಿ.ಟಿ.ರವಿ!

ಇಂದು 10,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೆಎಸ್ಆರ್‌ಟಿಸಿ ಡಿಸಿ ಬಸವರಾಜ್ ಎ1 ಆರೋಪಿಯಾಗಿದ್ದರೆ, ಚಾಲಕ ನಾಗರಾಜ್ ಎ2 ಆರೋಪಿಯಾಗಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Follow Us:
Download App:
  • android
  • ios