ರಾಮನಗರದಲ್ಲಿ ಉರುಳಿದ KSRTC ಬಸ್ : ಅದೃಷ್ಟವಶಾತ್ ಪಾರಾದ ಪ್ರಯಾಣಿಕರು

KSRTC ಬಸ್ ಒಂದು ರಸ್ತೆ ಬದಿಯ ಚರಂಡಿಗೆ ಉರುಳಿದ್ದು, ಬಸ್ಸಿನಲ್ಲಿದ್ದ 14 ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. 

KSRTC Bus Falls into Trench in Ramanagara

ರಾಮನಗರ [ಸೆ.08]: ಕಾಡಾನೆಗಳನ್ನು  ತಪ್ಪಿಸಲು ಹೋಗಿ KSRTC ಬಸ್ ಪಕ್ಕದ ಚರಂಡಿಗೆ ಉರುಳಿದ ಘಟನೆ ಕನಕಪುರದಲ್ಲಿ ನಡೆದಿದೆ. 

ಕನಕಪುರ ತಾಲೂಕಿನ ಶಿವಗಿರಿಯ ಹನುಮಂತನಕಲ್ಲಿ ಗ್ರಾಮದಲ್ಲಿ ಬಸ್ ಚರಂಡಿಗೆ ಉರುಳಿದ್ದು, ಬಸ್ ನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶಿವಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬಸ್ ಮುಂದೆ ಕಾಡಾನೆಗಳು ಬಂದಿದ್ದು, ಆನೆಗಳನ್ನು ತಪ್ಪಿಸಲು ಹೋಗಿ ಉರುಳಿದೆ. ಈ ವೇಳೆ ಬಸ್ಸಿನಲ್ಲಿ 14 ಪ್ರಯಾಣಿಕರು ಸಂಚರಿಸುತ್ತಿದ್ದು, ಅದೃಷ್ಟ ವಶಾತ್ ಪಾರಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ರಾಮನಗರ ಜಿಲ್ಲೆಯ ಸಾತನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Latest Videos
Follow Us:
Download App:
  • android
  • ios