ಬೆಳಗಾವಿ[ಜ.22]: ಗೋವಾ ರಾಜ್ಯದ ಜ. 26 ರಂದು ಸ್ಟೆಟ್ ಪರೇಡನಲ್ಲಿ ಭಾಗವಹಿಸಲು ಕರ್ನಾಟಕ ಪ್ರತಿನಿಧಿಸಿ ಬೆಳಗಾವಿ ಕೆಎಸ್‌ಆರ್‌ಪಿಯ 35 ಮಹಿಳಾ ಪೊಲೀಸರ ತಂಡ ಮಂಗಳವಾರ ಗೋವಾಕೆ ತೆರಳಿದೆ. ಕರ್ನಾಟಕವನ್ನು ಪ್ರತಿನಿಧಿಸಿರುವ ತಂಡ ಗೋವಾ ರಾಜ್ಯದ ಪಣಜಿಯಲ್ಲಿ ನಡೆಯುವ ಜ.26ರ ಗಣರಾಜ್ಯೋತ್ಸವದ ದಿನ ಅಲ್ಲಿನ ಗವರ್ನರ ಹಾಗೂ ಮುಖ್ಯಮಂತ್ರಿ ಎದುರು ಶಿಸ್ತಿನ ಕವಾಯತು ಪ್ರದರ್ಶಿಸಲಿದೆ. 

ಗೋವಾ ರಾಜ್ಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಆಕರ್ಷಕ ಕವಾಯತು ಅಲ್ಲಿ ಪ್ರದರ್ಶಿಸಲು ಬೆಳಗಾವಿ ಕೆಎಸ್‌ಆರ್‌ಪಿ ಬಟಾಲಿಯನ್ನ್‌ನ್ ನಿಂದ 35  ಮಹಿಳಾ ಪೆದೆಗಳ ತಂಡ ಇಂದು ಗೋವಾಕೆ ತೆರಳಿದ್ದು ಅವರಿಗೆ ಐಟಿಬಿಟಿ ಬೆಳಗಾವಿ ಅವರ ವತಿಯಿಂದ ಹೆಚ್ಚಿನ ತರಬೇತಿ ಕೊಡಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆಎಸ್‌ಆರ್‌ಪಿ ಬೆಳಗಾವಿ ಕಮಾಂಡಂಟ್ ಹಮ್ಜಾ ಹುಸೇನ್ ಪರೇಡ್ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಏಕ ಭಾರತ್, ಶ್ರೇಷ್ಠ ಭಾರತ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕಾರ್ಯಕ್ರಮದ ಅಂಗವಾಗಿ ರಾಜ್ಯಗಳು ಪರಸ್ಪರ ಕವಾಯತು ತಂಡ ಗಳನ್ನು ಜ.26ರಂದು ಕಳಿಸುತ್ತವೆ. ಅದರಂತೆ ಜ.26ರಂದು ಗೋವಾ ಪೊಲೀಸರ ತಂಡ ಸಹ ಬೆಂಗಳೂರು ‘ಸ್ಟೇಟ್ ಪರೇಡ್’ನಲ್ಲಿ ಭಾಗವಹಿಸಲಿದೆ. ಪರಸ್ಪರ ರಾಜ್ಯಗಳನ್ನು ಬೆಸೆದು ಒಂದೇ ಭಾರತದ ಐಕ್ಯತೆ ಸಾರುವ ಕೇಂದ್ರದ ಕಾರ್ಯಕ್ರಮ ಎಂದು ಕೆಎಸ್ ಆರ್‌ಪಿ ಎಡಿಜಿಪಿ ಅಲೋಕ ಕುಮಾರ ತಿಳಿಸಿದ್ದಾರೆ.