ಶಿವಮೊಗ್ಗ [ನ.16]: ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ನವರಿಗೆ ಸಂಕಟ ಶುರುವಾದ ಮೇಲೆ ಬಿಜೆಪಿ ನೆನಪಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. 

ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಹೇಳಿದ್ದೆಲ್ಲಾ ಸುಳ್ಳು ಆಗುತ್ತದೆ.  ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.  

ವಿಪಕ್ಷಗಳು ಇರುವುದೇ ನಮ್ಮನ್ನು ಟೀಕಿಸಲು. ಸಿದ್ದರಾಮಯ್ಯ ನವರದು ಅದೇ ಕೆಲಸ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಶುರುವಾದ ಮೇಲೆ ಬಿಜೆಪಿ‌ ನೆನಪು ಆಗುತ್ತದೆ. ಐದು ವರ್ಷ ಮುಖ್ಯಮಂತ್ರಿ ಆಗಿದ್ದರು, ಯಾಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಯಾಕೆ ಸರ್ಕಾರ ಉರುಳಿಸಿದರು ಎಂದರು. 

ಕಾಂಗ್ರೆಸ್ ಜೆಡಿಎಸ್ ಶಾಸಕರು ಚುನಾವಣೆ ನಿಲ್ಲಬಾರದು ಅಂತ ಸಿದ್ದರಾಮಯ್ಯ, ರಮೇಶ್ ಕುಮಾರ್ ಸೇರಿ  ಕುತಂತ್ರ ರಾಜಕಾರಣ ಮಾಡಿದರು.  ಸುಪ್ರೀಂ ಕೋರ್ಟ್ ತೀರ್ಪು ತುಂಬ ಚನ್ನಾಗಿ ಬಂದಿದೆ. ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಸಂಕಷ್ಟ, ಸಮಸ್ಯೆ ಬರಲ್ಲ. 15 ಜನರು ಗೆಲ್ಲುತ್ತಾರೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿಗೆ ಅತಿ ಹೆಚ್ಚು ಬಹುಮತ ಬರುತ್ತದೆ.  ಯಾವುದೇ ಕಾರಣಕ್ಕೂ  ಸರಕಾರಕ್ಕೆ ಸಂಕಷ್ಟ ಎದುರಾಗುವುದಿಲ್ಲ. ಸಿದ್ದರಾಮಯ್ಯಗೆ ಸ್ಪಷ್ಟವಾಗಿ ಹೇಳುತ್ತೇನೆ ಎಂದು  ಬಿಜೆಪಿ 8 ಸ್ಥಾನ ಗೆಲ್ಲಲ್ಲ ಎಂದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. 

ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಜೆಡಿಎಸ್  ಬಳಿ ಅಭ್ಯರ್ಥಿಗಳೇ ಇಲ್ಲದಂತಾಗಿದೆ.  ಬಿಜೆಪಿಯಲ್ಲಿ ಕಾಂಪಿಟೇಷನ್ ಹೆಚ್ಚಾಗಿದ್ದು,  ಒಂದೊಂದು ಕ್ಷೇತ್ರಕ್ಕೆ ಮೂರು ನಾಲ್ಕು‌ ಮಂದಿ ಇದ್ದಾರೆ.  ನಮ್ಮನ್ನು ನಂಬಿ ಬಂದ ಕಾಂಗ್ರೆಸ್, ಜೆಡಿಎಸ್ ನವರಿಗೆ ಟಿಕೆಟ್ ಕೊಟ್ಟಿದ್ದೇವೆ.  ಅವರನ್ನು ಗೆಲ್ಲಿಸುವ ಜವಾಬ್ದಾರಿ, ಕರ್ತವ್ಯ ನಮ್ಮ ಮೇಲಿದೆ ಎಂದರು.

ರಾಜ್ಯದಲ್ಲಿ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.