Asianet Suvarna News Asianet Suvarna News

ಕೃಷ್ಣಪ್ಪ ಕಾಂಗ್ರೆಸ್‌ ತೊರೆದು ಶಾಸಕ ಕೆ. ಮಹದೇವ್‌ ಅವರ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆ

ತಾಪಂ ಮಾಜಿ ಅಧ್ಯಕ್ಷ ಶಾನುಭೋಗನಹಳ್ಳಿ ಗ್ರಾಮದ ಕೃಷ್ಣಪ್ಪ ಅವರು ಕಾಂಗ್ರೆಸ್‌ ತೊರೆದು ಶಾಸಕ ಕೆ. ಮಹದೇವ್‌ ಅವರ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದರು

Krishnappa left Congress and MLA K. Joining of JDS in presence of Mahadev snr
Author
First Published Dec 24, 2022, 5:36 AM IST

 ಪಿರಿಯಾಪಟ್ಟಣ :  ತಾಪಂ ಮಾಜಿ ಅಧ್ಯಕ್ಷ ಶಾನುಭೋಗನಹಳ್ಳಿ ಗ್ರಾಮದ ಕೃಷ್ಣಪ್ಪ ಅವರು ಕಾಂಗ್ರೆಸ್‌ ತೊರೆದು ಶಾಸಕ ಕೆ. ಮಹದೇವ್‌ ಅವರ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದರು. ಶಾನುಭೋಗನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಪಕ್ಷ ಸೇರ್ಪಡೆಗೊಂಡ ಬಳಿಕ ಕೃಷ್ಣಪ್ಪ ಅವರು ಮಾತನಾಡಿ, ಜನಪ್ರತಿನಿಧಿಗಳಾದವರಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಮನಸ್ಸು ಇರಬೇಕು, ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಶಾಸಕರಾದ ಕೆ. ಮಹದೇವ್‌ ಅವರು ತಾಲೂಕಿನ ಯಾವುದೇ ಪ್ರದೇಶದ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅವರನ್ನು ಭೇಟಿ ಮಾಡಿದ ಸಂದರ್ಭ ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿಕೊಡುವ ಅವರ ಪ್ರಾಮಾಣಿಕ ಕರ್ತವ್ಯವನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಶಾಸಕ ಕೆ. ಮಹದೇವ್‌ ಮಾತನಾಡಿ, ಅಭಿವೃದ್ಧಿ ಕಾರ್ಯಗಳು ಹಾಗೂ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಯಾರೇ ಜೆಡಿಎಸ್‌ ಸೇರಿದರು ಅವರನ್ನು ನಮ್ಮ ಕಾರ್ಯಕರ್ತರಂತೆ ಸಮನಾಗಿ ಕಂಡು ಪಕ್ಷ ಸಂಘಟನೆ ಹಾಗೂ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ದೊಡ್ಡಕಮ್ಮರಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಪುಟ್ಟಸ್ವಾಮಿಗೌಡ, ಹರೀಶ್‌, ಪಾರ್ವತಿ, ಜ್ಯೋತಿ, ಪುಟ್ಟಮ್ಮ, ಯಜಮಾನರಾದ ಮಲ್ಲಿಕಾರ್ಜುನ್‌ ಇದ್ದರು.

ಶೀಘ್ರ ಮೇಕಲುಕೋಟೆಗೆ ಪಂಚರತ್ಬ

ಪಾಂಡವಪುರ (ಡಿ.19): ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಡಿ.24ರಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಆಗಮಿಸುವ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಸಿ.ಎಸ್‌.ಪುಟ್ಟರಾಜು ಮನವಿ ಮಾಡಿದರು. ತಾಲೂಕಿನ ಬೇಬಿಬೆಟ್ಟದಲ್ಲಿ ಚಿನಕುರಳಿ ಜಿಪಂ ಕ್ಷೇತ್ರ, ಎಲೆಕೆರೆ ಹ್ಯಾಂಡ್‌ ಪೋಸ್ಟ್‌ ಅಕ್ಷಯ ಕನ್ವೆನ್ಷನ್‌ ಹಾಲ್‌ನಲ್ಲಿ ಕ್ಯಾತನಹಳ್ಳಿ ಜಿಪಂ, ಕುಂತಿಬೆಟ್ಟದಲ್ಲಿ ಚಿಕ್ಕಾಡೆ ಜಿಪಂ ಕ್ಷೇತ್ರ, ತೊಣ್ಣೂರುಕೆರೆ ಏರಿಯಲ್ಲಿ ಲಕ್ಷ್ಮೀಸಾಗರ ಜಿಪಂ ಕ್ಷೇತ್ರದ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿದರು. 

ಪಟ್ಟಣದ ತಮ್ಮ ನಿವಾಸದಲ್ಲಿ ಪುರಸಭೆ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿ ಪಂಚರತ್ನ ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಡಿ.24ರಂದು ಬೆಳಗ್ಗೆ 9ಗಂಟೆಗೆ ಕೆಆರ್‌ಎಸ್‌ನಿಂದ ಪಂಚರತ್ನ ಯಾತ್ರೆ ನಾಥ್‌ರ್‍ಬ್ಯಾಂಕ್‌, ಕಟ್ಟೇರಿ, ಅರಳಕುಪ್ಪೆ, ಹರವು, ಕ್ಯಾತನಹಳ್ಳಿ, ಕೆನ್ನಾಳು ಮಾರ್ಗವಾಗಿ ಪಟ್ಟಣ ಪ್ರವೇಶಿಸಲಿದೆ. ಪಟ್ಟಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಲಿದ್ದಾರೆ ಎಂದರು. ಬಳಿಕ ಚಿಕ್ಕಾಡೆ, ಚಿಕ್ಕಬ್ಯಾಡರಹಳ್ಳಿ ಸರ್ಕಲ್, ಕನಗನಮರಡಿ, ಹುಲಿಕೆರೆ ಮಾರ್ಗವಾಗಿ ಶಿವಳ್ಳಿ ತಲುಪಿ ವಾಸ್ತವ್ಯ ಇರಲಿದ್ದಾರೆ. 

Mandya: ನನ್ನ ಜೀವನೋತ್ಸಾಹ ಕುಂದಿಲ್ಲ: ಎಸ್‌.ಎಂ.ಕೃಷ್ಣ

ಶಿವಳ್ಳಿಯಲ್ಲಿ ದೊಡ್ಡಮಟ್ಟದ ಸಭೆ ನಡೆಯಲಿದೆ. ಬಳಿಕ ಡಿ.25ರಂದು ಬೆಳಗ್ಗೆ ಶಿವಳ್ಳಿಯಿಂದ ಹೊರಟು ದುದ್ದ ಮಾರ್ಗವಾಗಿ ಜಕ್ಕನಹಳ್ಳಿ ಸರ್ಕಲ್, ಮೇಲುಕೋಟೆ, ನಾರಾಯಣಪುರ, ಚಿನಕುರಳಿ ಮಾರ್ಗವಾಗಿ ಕೆ.ಆರ್‌ .ಪೇಟೆ ತಾಲೂಕಿನ ಅಶೋಕ ನಗರಕ್ಕೆ ತಲುಪಲಿದೆ ಎಂದರು. ಪ್ರತಿ ಗ್ರಾಪಂ ಮಟ್ಟದಲ್ಲೂ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲೂ ಸಹ ಊಟದ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ ಕಾರ್ಯಕರ್ತರು ಎಲ್ಲರು ದಾರಿಯುದ್ದಕ್ಕೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಲೀಡ್‌ ಕೊಡಿಸಲು ಸಾಧ್ಯವಾಗದ ನೋವಿದೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೂ ಸಹ ಮೇಲುಕೋಟೆ ಕ್ಷೇತ್ರದಿಂದ ನಮ್ಮ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಲೀಡ್‌ ಕೊಡಿಸಲು ಸಾಧ್ಯವಾಗಲಿಲ್ಲ ಎನ್ನುವ ನೋವುವಿದೆ. ಸಂಸದರಾದವರು ಜನರ ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎನ್ನವುದು ಜನರಿಗೆ ಅರಿವಿದೆ. ಸೋಲಿನ ನೋವನ್ನು ತೀರಿಸಿಕೊಳ್ಳುವ ಸಂದರ್ಭ ಈಗ ಬಂದಿದೆ. ಮುಂದಿನ 2023ರ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಗೆಲ್ಲಿಸಿಕೊಡುವ ಮೂಲಕ ನೋವು ಮರೆಸಬೇಕು ಎಂದು ಮನವಿ ಮಾಡಿದರು

Follow Us:
Download App:
  • android
  • ios