Tumakur : ರೆಡ್ಡಿ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ
ಚಂದ್ರಶೇಖರೆಡ್ಡಿ ಸಮ್ಮುಖದಲ್ಲಿ ಶನಿವಾರ ಪಳವಳ್ಳಿ ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿಯ ಮುಖಂಡರಾದ ಕೃಷ್ಣಾರೆಡ್ಡಿ ತಮ್ಮ ಆನೇಕ ಮಂದಿ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಪಾವಗಡ (ನ.06): ತಾಲೂಕಿನ ಪ್ರಗತಿ ಹಾಗೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಶಾಸಕ ವೆಂಕಟರಮಣಪ್ಪ, ರೈತ ಸಂಘದ ಅಧ್ಯಕ್ಷ ಗುಂಡಾರ್ಲಹಳ್ಳಿ ನರಸಿಂಹರೆಡ್ಡಿ ಹಾಗೂ ತಾಲೂಕಿನ ಮುಖಂಡ ಬೆಳ್ಳಿಬಟ್ಟಲು ಚಂದ್ರಶೇಖರೆಡ್ಡಿ ಸಮ್ಮುಖದಲ್ಲಿ ಶನಿವಾರ ಪಳವಳ್ಳಿ ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿಯ ಮುಖಂಡರಾದ ಕೃಷ್ಣಾರೆಡ್ಡಿ ತಮ್ಮ ಆನೇಕ ಮಂದಿ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಇದೇ ರೀತಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಪುರಸಭೆ ಸದಸ್ಯ ಪಿ.ಎಚ್. ರಾಜೇಶ್ ಹಾಗೂ ಅಲ್ಪ ಸಂಖ್ಯಾತರ ಘಟಕದ ಮುಖಂಡ ಶಂಷುದ್ದೀನ್ ಸಮ್ಮುಖದಲ್ಲಿ ತಾಲೂಕಿನ ರಂಗಸಮುದ್ರ ಗ್ರಾಮದ ವಾಸಿ,ಮಾಜಿ ಗ್ರಾಪಂ ಸದಸ್ಯರಾದ ನಾಗೇಶ್ ಇತರೆ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಮೇರೆಗೆ ಸೇರ್ಪಡೆಯಾದ ಮುಖಂಡರನ್ನು ತಾಲೂಕು ಕಾಂಗ್ರೆಸ್ ಸಮಿತಿಯಿಂದ ಸ್ವಾಗತಿಸಿ ಬರಮಾಡಿಕೊಂಡರು.
ಶಾಸಕ ವೆಂಕಟರಮಣಪ್ಪರ ಅಭಿವೃದ್ಧಿ ಹಾಗೂ ಪುತ್ರ ವಂಕಟೇಶ್ ನಾಯಕತ್ವದ ಮೇರೆಗೆæ ಕಾಂಗ್ರೆಸ್ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದು, ಮುಖಂಡರಾದ ಬಿ.ಕೆ.ಹಳ್ಳಿ ಮಧು, ನಾರಾಯಣಪ್ಪ ಹಾಗೂ ಇತರೆ ಆನೇಕ ಮಂದಿ ಮುಖಂಡರಿದ್ದಾರೆ.
ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಂತರಿಕ ಸಮಸ್ಯೆ ಮತ್ತು ಪ್ರಚಾರ, ಕೆಲ ಗೊಂದಲ ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷ ಸೋತಿದ್ದೇವೆ ಹೊರತು ಮತದಾರರಿಂದಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ ಹೇಳಿದರು.
ತಾಲೂಕಿನಾದ್ಯಂತ ಕಾಂಗ್ರೆಸ್ (Congress) ಪಕ್ಷ ಹಮ್ಮಿಕೊಂದಿರುವ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮಕ್ಕೆ ಚುಂಚನ ಕಟ್ಟೆಹೋಬಳಿಯ ಕಾರ್ಯಕರ್ತರು ಚುಂಚನ ಕಟ್ಟೆ ರಾಮ ದೇಗುಲದಲ್ಲಿ (Temple) ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಮೂಹಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲಾ ಸಮಾಜದ ಪಕ್ಷ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಈಗಿನಿಂದಲೇ ಸಿದ್ಧತೆ ಆರಂಭಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ 75 ದಿನಗಳ ಕಾಲ ತಾಲೂಕಿನ ಪ್ರತಿ ಗ್ರಾಮದ ಮನೆ ಮನೆಗಳಿಗೆ ಪಾದಯಾತ್ರೆ ಮೂಲಕ ಹಿರಿಯರ ಮತ್ತು ಕಿರಿಯರ ಹಾಗೂ ಹಿತೈಷಿಗಳ ಆಶೀರ್ವಾದ ಪಡೆದು ಅವರಿಂದ ಮಾರ್ಗದರ್ಶನ ಹಾಗೂ ಸಲಹೆ ಪಡೆಯುವುದರೊಂದಿಗೆ ಈ ಬಾರಿ ಅಂತಹ ಯಾವುದೇ ಸಮಸ್ಯೆಗಳಿಗೆ ಆಸ್ಪದ ಕೊಡದೆ ಸಮರ್ಥವಾಗಿ ಚುನಾವಣೆ ಎದುರಿಸಲು ನಮ್ಮ ಮುಖಂಡರು ಸಿದ್ಧರಿದ್ದೇವೆ ಎಂದರು.
ಎಲ್‌ಐಸಿ ಜಗದೀಶ್ ಮಾತನಾಡಿದರು. ಈ ವೇಳೆ ಹೋಬಳಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಚ್ಚಿನ್, ಲಾಯರ್ ಪುನೀತ್, ಅಭಿಷೇಕ್ ಗೌಡ, ಹಳೆಯೂರು ಮಂಜುನಾಥ್, ಹೊಸೂರ್ ಮೀನ್ ಮಧು, ಮಾಯಿಗೌಡನಹಳ್ಳಿ ಜಯರಾಮ…, ಮೇಕಾನಿಕ್ ಮುನ್ನ, ಗ್ರಾಪಂ ಸದಸ್ಯರಾದ ಮಹದೇವ, ಸಾಲೆಕೊಪ್ಪಲು ನೂತನ್, ಸೋಮನಹಳ್ಳಿ ಶಿವಪ್ಪ, ದಿನೇಶ್, ಹರೀಶ್, ಹಾಡ್ಯ ಪ್ರಸನ್ನ, ರಘು, ಕುಮಾರಸ್ವಾಮಿ, ಹೊಸಕೋಟೆ ಮಾದಪ್ಪ, ಚಿಕ್ಕೆಗೌಡ, ವೆಂಕಟೇಶ್, ಪ್ರಸನ್ನ, ಜಯಣ್ಣ, ಹನಸೋಗೆ ನವೀನ್, ನವೀನ್ ನಾಯಕ, ಹರೀಶ್, ಪಾನಿ ಮಹೇಶ್, ಮುಖಂಡರಾದ ಮಲ್ಲಿಕಾರ್ಜುನ, ವಿಜಿ, ಅನಂತ ಸೇರಿದಂತೆ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಕಾಂಗ್ರೆಸ್‌ನಲ್ಲಿ ಅರ್ಜಿ ಆಹ್ವಾನ :
ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಕಾಂಗ್ರೆಸ್ ಅಧಿಕೃತ ಚಾಲನೆ ನೀಡಿದ್ದು, ನ.5ರಿಂದ ನ.15ರವರೆಗೆ 224 ಕ್ಷೇತ್ರಗಳಿಂದಲೂ ಅರ್ಹ ಆಕಾಂಕ್ಷಿಗಳಿಂದ ಟಿಕೆಟ್‌ಗೆ ಅರ್ಜಿ ಆಹ್ವಾನಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಪಕ್ಷದ ಕೆಲಸ ಮಾಡದವರಿಗೆ ಟಿಕೆಟಿಲ್ಲ: ಮತ್ತೊಮ್ಮೆ ಶಾಸಕರಿಗೆ ಎಚ್ಚರಿಕೆ ನೀಡಿದ ಡಿಕೆಶಿ
ಭಾನುವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭದ ಸಿದ್ಧತೆ ಕುರಿತು ಚರ್ಚಿಸಲು ಹಿರಿಯ ನಾಯಕರ ಸಭೆ ನಡೆಯಿತು. ಈ ವೇಳೆ ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.
ಕಳೆದ ಉಪ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವವರು ಪಕ್ಷದ ನಿಧಿಗೆ 1 ಲಕ್ಷ ರು. ನೀಡಬೇಕು ಎಂದು ನಿಯಮ ರೂಪಿಸಲಾಗಿತ್ತು. ಇದೀಗ ಮುಂದಿನ ಸಾರ್ವತ್ರಿಕ ಚುನಾವಣೆಗೆ ಎಷ್ಟುಶುಲ್ಕ ನಿಗದಿ ಮಾಡಬೇಕು. ಯಾವ್ಯಾವ ದಾಖಲೆಗಳನ್ನು ಒದಗಿಸಬೇಕು ಎಂಬಿತ್ಯಾದಿ ಅಂಶಗಳ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.