Asianet Suvarna News Asianet Suvarna News

ಮಂಡ್ಯ : ಸಂಸದೆ ಸುಮಲತಾ ಬಳಿ ಅಳಲು ತೋಡಿಕೊಂಡ JDS ಅನರ್ಹ ಶಾಸಕ

ಜೆಡಿಎಸ್ ಅನರ್ಹ ಶಾಸಕ ಸಂಸದೆ ಸುಮಲತಾ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

KR Pete Disqualified MLA Narayana Gowda Shares Plight With Sumalatha
Author
Bengaluru, First Published Aug 30, 2019, 3:21 PM IST
  • Facebook
  • Twitter
  • Whatsapp

ಮಂಡ್ಯ [ಆ.30] : ಕೆ.ಆರ್.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮಂಡ್ಯ ಸಂಸದೆ ಸುಮಲತಾ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೆಡಿಎಸ್ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ನಾರಾಯಣ ಗೌಡ 1966ರ KR ಪೇಟೆ ಉಪ ಚುನಾವಣೆ ಸನ್ನಿವೇಶ ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದಾರೆ. 

1996 ರಲ್ಲಿ ಕೆ.ಆರ್ ಪೇಟೆ ಶಾಸಕರಾಗಿದ್ದ ಕೃಷ್ಣ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು.. ಆಗ ಜವರಾಯಿ ಗೌಡ ಎನ್ನುವವರಿಗೆ ದೇವೇಗೌಡರು ಟಿಕೆಟ್ ಕೊಟ್ಟಿದ್ದರು. ಇದರಿಂದ ಬಿ. ಪ್ರಕಾಶ್ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಜವರಾಯಿ ಗೌಡ ಸೋತರು. ಇದರ ಹಿಂದೆ ಸೋಲಿಸುವ ಉದ್ದೇಶವಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಟ್ಟು JDS ನವರು ನನ್ನ ಸೋಲಿಸಲು  ಹುನ್ನಾರ ನಡೆಸಿದರು. ಆದರೆ ದೇವರ ಆಶೀರ್ವಾದದಿಂದ ನಾನು ಗೆದ್ದೆ ಎಂದರು. 

ರಾಜೀನಾಮೆ ನೀಡಿ ಅನರ್ಹಗೊಂಡ 17 ಕ್ಷೇತ್ರಗಳಿಗೆ ಶೀಘ್ರ  ಚುನಾವಣೆ ನಡೆಯುತ್ತಿದ್ದು, KR ಪೇಟೆ ಕ್ಷೇತ್ರದಿಂದ ನಾರಾಯಣ ಗೌಡ ಬಿಜೆಪಿ ಅಭ್ಯರ್ಥಿಯಾದರೆ ಸುಮಲತಾ ಬೆಂಬಲ ನೀಡುವ ಸಾಧ್ಯತೆ ಇದೆ.  ಈ ನಿಟ್ಟಿನಲ್ಲಿ KR ಪೇಟೆಯ ಚುನಾವಣೆ ವಿಚಾರವನ್ನು ಸುಮಲತಾ ಜೊತೆಗೆ ನಾರಾಯಣ ಗೌಡ ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios