ಮೈಸೂರಿನಲ್ಲಿ ಮೇಯರ್ ಆಯ್ಕೆಯಾದರೂ ಕೂಡ ಈ ವಿಚಾರದ ಚರ್ಚೆ ಮಾತ್ರ ಇನ್ನೂ ಕೂಡ ನಿಂತಿಲ್ಲ. ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಮೇಯರ್ ಆಯ್ಕೆಯ ಸೀಕ್ರೇಟ್ ಬಗ್ಗೆ ಮಾತನಾಡಿದ್ದಾರೆ.
ಚಾಮರಾಜನಗರ(ಫೆ.28) : ಇತ್ತೀಚೆಗೆ ನಡೆದ ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯುತ್ತಾ? ಇಲ್ಲವೇ ಬಿಜೆಪಿ-ಜೆಡಿಎಸ್ ಮೈತ್ರಿಯಾಗುತ್ತಾ? ಅನ್ನುವುದು ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಹುಟ್ಟಿಸಿತ್ತು. ಅಂತಿಮವಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಮುಂದುವರಿದಿದ್ದು ಮೇಯರ್ ಸ್ಥಾನ ಜೆಡಿಎಸ್‌ಗೆ ಹೋಗಿದೆ.
ಆದರೆ, ಈ ಹಿಂದಿನ ಒಪ್ಪಂದದಂತೆ ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಬರಬೇಕಿತ್ತು. ಕಾಂಗ್ರೆಸ್‌ಗೆ ಮೇಯರ್ ಸ್ಥಾನ ನೀಡಿದರೆ ಮಾತ್ರ ಜೆಡಿಎಸ್ ಜೊತೆ ಒಪ್ಪಂದ ಅಂಥ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಹೇಳಿದ್ದರು. ಇದೀಗ ಮೇಯರ್ ಸ್ಥಾನದ ರಹಸ್ಯವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಬಿಚ್ಚಿಟ್ಟಿದ್ದಾರೆ.
'2023ಕ್ಕೆ ಮತ್ತೊಮ್ಮೆ ಎಚ್ಡಿಕೆ ಮುಖ್ಯಮಂತ್ರಿ'
ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಂದು, ಮೇಯರ್ ಆಯ್ಕೆ ಸಂಬಂಧ ಅಯೂಬ್ ಖಾನ್ ಕಚೇರಿಯಲ್ಲಿ ಜೆಡಿಎಸ್ ಪಕ್ಷದವರೊಂದಿಗೆ ಸಭೆ ನಡೆಸಲಾಯಿತು. ಈ ಬಾರಿ ನಮಗೆ ಮೇಯರ್ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡೆ. 11.30ಕ್ಕೆ ಸಿದ್ದರಾಮಯ್ಯ ಕರೆ ಮಾಡಿ ಯಾವುದೇ ಕಾರಣಕ್ಕೂ ಮೇಯರ್ ಸ್ಥಾನ ಬಿಡದಂತೆ ಹೇಳಿದರು.
ಮೈಸೂರು 'ಮೈತ್ರಿ' ಯುದ್ಧ: ನೋಟಿಸ್‌ಗೆ ಉತ್ತರಿಸಲು ಸಿದ್ಧ ಎಂದ ತನ್ವೀರ್ ಸೇಠ್ .
12 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ಮಾಡಿ, ಜೆಡಿಎಸ್‌ನವರು ಮೇಯರ್ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಜೆಡಿಎಸ್‌ನವರನ್ನು ಈ ಬಗ್ಗೆ ವಿಚಾರಿಸಿದರೆ ಅವರು ನಮಗೆ ಮೆಸೇಜ್ ಬಂದಿಲ್ಲ ಅಂದರು. ತಕ್ಷಣ ನಾನು ಡಿ.ಕೆ.ಶಿವಕುಮಾರ್‌ಗೆ ಕರೆ ಮಾಡಿ ತಿಳಿಸಿದೆ. ಆಗ ಡಿ.ಕೆ.ಶಿವಕುಮಾರ್ ಅವರು ಶಾಸಕ ಸಾ.ರಾ.ಮಹೇಶ್‌ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಚುನಾವಣೆಗೆ ಹೋದ ಸಂದರ್ಭದಲ್ಲಿ ಪಾಲಿಕೆ ಸದಸ್ಯರ ನಿರ್ಧಾರ ಬದಲಾಗಿದೆ. ಈ ಬಗ್ಗೆ ಸಂಪೂರ್ಣವಾದ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು.
Last Updated Feb 28, 2021, 10:14 AM IST