ಕೆಪಿಸಿಸಿ ಅಧ್ಯಕ್ಷ ಡಿಕೆಶಿಯಿಂದ ಏಟು : ಸಮರ್ಥಿಸಿಕೊಂಡ ಮುಖಂಡ
- ಡಿಕೆ ಶಿವಕುಮಾರ್ ಜೆಡಿಎಸ್ ಕಾರ್ಯಕರ್ತನಿಗೆ ಕೆನ್ನೇ ಏಟು ನೀಡಿದ ಪ್ರಕರಣ
- ಕ್ರಮವನ್ನು ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಸಮರ್ಥಿಸಿಕೊಂಡಿದ್ದಾರೆ.
ಶಿವಮೊಗ್ಗ (ಜು.12): ಡಿಕೆ ಶಿವಕುಮಾರ್ ಜೆಡಿಎಸ್ ಕಾರ್ಯಕರ್ತನಿಗೆ ಕೆನ್ನೇ ಏಟು ನೀಡಿದ ಕ್ರಮವನ್ನು ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಸಮರ್ಥಿಸಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ದೇವೇಂದ್ರಪ್ಪ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. ಕುಟುಂಬದ ಸದಸ್ಯರು ತಲೆಹರಟೆ ಮಾಡಿದಾಗ ದಂಡಿಸುವ ಪ್ರೀತಿಸುವ ಹಕ್ಕು ಯಜಮಾನನಿಗಿದೆ. ನಿಮ್ಮ ಅಂಗಳದಲ್ಲಿ ಸತ್ತು ಬಿದ್ದಿರುವ ಕತ್ತೆಯನ್ನು ತೆಗೆದು ಇತರ ತಟ್ಟೆಯಲ್ಲಿರುವ ನೊಣವನ್ನು ಓಡಿಸಲು ಬರಬೇಕು ಎಂದರು.
ನನ್ನ ಹೆಗಲ ಮೇಲೆ ಕೈ ಹಾಕೊಂಡು ಬರ್ತಿದ್ದ ಅದಕ್ಕೆ ಎರಡೇಟು ಹೊಡೆದಿದ್ದೇನೆ: ಡಿಕೆಶಿ
ಡಿ.ಕೆ.ಶಿವಕುಮಾರ್ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಇದು ಮಹಾ ತಪ್ಪಲ್ಲ ಎನ್ನುವಂತೆ ದೇವೇಂದ್ರಪ್ಪ ಸಮರ್ಥಿಸಿಕೊಂಡರು.
ಇತ್ತೀಚೆಗೆ ಮಂಡ್ಯ ಖಾಸಗಿ ನರ್ಸಿಂಗ್ ಹೋಂನಲ್ಲಿ ಮಾಜಿ ಸಂಸದ ಹಾಗೂ ಹೋರಾಟಗಾರರಾದ ಜಿ ಮಾದೇಗೌಡ ಆರೋಗ್ಯ ವಿಚಾರಿಸಿ ಹೊರಬರುತ್ತಿದ್ದಾಗ ಈ ಘಟನೆ ನಡೆದಿತ್ತು. ವ್ಯಕ್ತಿಯೋರ್ವರು ಕೆಪಿಸಿಸಿ ಅಧ್ಯಕ್ಷರ ಬೆನ್ನ ಮೇಲೆ ಕೈಹಾಕಿದಾಗ ಡಿಕೆ ಶಿವಕುಮಾರ್ ತಲೆಗೆ ಹೊಡೆದಿದ್ದರು.
ಸ್ನೇಹಪೂರ್ವಕವಾಗಿ ಏಟು ಕೊಟ್ಟು ಈ ರೀತಿ ಮಾಡಬೇಡ ಎಂದು ಬುದ್ಧಿ ಹೇಳಿದರು. ಇದು ಕಾರ್ಯಕರ್ತರು ಮತ್ತು ನಾಯಕರ ಮಧ್ಯೆ ಇರುವ ಸ್ನೇಹ ಸಂಬಂಧಗಳು. ಆದರೆ ಇದನ್ನೇ ಬಿಜೆಪಿ ಕಾರ್ಯಕರ್ತರು ನಾಯಕರು ವಿನಾಕಾರಣ ವಿವಿಧ ಭಾಷೆಗಳೊಂದಿಗೆ ಅವರನ್ನು ತೇಜೋವಧೆ ಮಾಡುತ್ತಿದ್ದಾರೆ. ಈ ಮೂಲಕ ಅವರ ಘನತೆಗೆ ಧಕ್ಕೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.