tumakur : ಕೋಟಿ ಕಂಠ ಗಾಯನ ವಿನೂತನ ಪ್ರಯೋಗ

ಕೋಟಿ ಕಂಠ ಗಾಯನ ಕಾರ್ಯಕ್ರಮ ವಿನೂತನ ಪ್ರಯೋಗವಾಗಿದ್ದು, ಇದೊಂದು ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಕಾರಿ ಮೈಲಿಗಲ್ಲಾಗಿದೆ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಚೇತನ್‌ ಅಭಿಪ್ರಾಯಪಟ್ಟರು.

Koti Kanta Gayana For Kannada rajyotsava in Tumakur snr

  ತುಮಕೂರು (ಅ.26):  ಕೋಟಿ ಕಂಠ ಗಾಯನ ಕಾರ್ಯಕ್ರಮ ವಿನೂತನ ಪ್ರಯೋಗವಾಗಿದ್ದು, ಇದೊಂದು ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಕಾರಿ ಮೈಲಿಗಲ್ಲಾಗಿದೆ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಚೇತನ್‌ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ಜಿಲ್ಲಾಸ್ಪತ್ರೆ, ಸ್ವರಸಿಂಚನ ಸುಗಮ ಸಂಗೀತ ಜಾನಪದ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು-ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕೋಟಿ ಕಂಠ ಗಾಯನದ ಪ್ರಯುಕ್ತ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಟಿ ಕಂಠ ಗಾಯನ ಕಾರ್ಯಕ್ರಮದಂತಹ ವೇದಿಕೆಗಳ ಮೂಲಕ ಸಾವಿರಾರು ಪ್ರತಿಭಟನೆ ಹೊರಹೊಮ್ಮುತ್ತಾರೆ. ಈ ಕೋಟಿ ಕಂಠ ಗಾಯನ ಸಂಗೀತ ಪ್ರತಿಭೆಗಳಿಗೂ ಅತ್ಯಂತ ಉಪಯುಕ್ತವಾಗಿದೆ. ಸಂಗೀತ ಎಂಬುದು ನಮ್ಮ ನಾಡು, ಸಂಸ್ಕೃತಿಯಲ್ಲಿ ಬಂದಿರುವಂತಹ ಕಲೆ. ನಮಗೆ ಪ್ರತಿನಿತ್ಯ ಗಾಳಿ, ನೀರು, ನಿದ್ದೆ ಯಾವ ರೀತಿ ಅವಶ್ಯಕತೆ ಇದೆಯೋ ಅದೇ ರೀತಿ ಸಂಗೀತವೂ ಅಗತ್ಯವಾಗಿದೆ. ಸಂಗೀತ ಮಾನಸಿಕವಾಗಿ ಶಕ್ತಿ ತುಂಬುವುದರ ಜತೆಗೆ ಹೃದಯವಂತಿಕೆಯನ್ನು ಗಟ್ಟಿಗೊಳಿಸುತ್ತದೆ. ನಮ್ಮ ಹೃದಯ, ಮೆದುಳಿನ ಕಾರ್ಯಗಳು ಅತ್ಯಂತ ಕ್ರಿಯಾಶೀಲವಾಗಲು ಸಂಗೀತ ಸಹಕಾರಿ. ಹಾಗಾಗಿ ಪ್ರತಿಯೊಬ್ಬರೂ ಸಂಗೀತವನ್ನು ಕೇಳಿ ಆನಂದಿಸುವುದರ ಜತೆಗೆ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.

ಸ್ವರಸಿಂಚನ ಸಂಗೀತ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಮನುಷ್ಯನಿಗೆ ಸಂಗೀತದಿಂದ ನೆಮ್ಮದಿ ಸಿಗುತ್ತದೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳನ್ನು ಆರೈಕೆ ಮಾಡುವುದರಿಂದಲೂ ನೆಮ್ಮದಿ ದೊರೆಯುತ್ತದೆ. ಕಳೆದ ಬಾರಿ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ತುಮಕೂರು ನಂ. 1 ಸ್ಥಾನ ಪಡೆದಿತ್ತು. ಅಲ್ಲದೆ ಕಳೆದ ವರ್ಷ 16 ವೇದಿಕೆಗಳಲ್ಲಿ ಕಾರ್ಯಕ್ರಮ ನಡೆದಿತ್ತು. ಆದರೆ ಈ ಬಾರಿ 60-70 ವೇದಿಕೆಗಳು ಸಿಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಚೇತನ್‌, ಗಾಯಕ ಮಲ್ಲಿಕಾರ್ಜುನ ಕೆಂಕೆರೆ, ನೇತ್ರತಜ್ಞ ಡಾ. ದಿನೇಶ್‌, ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್‌, ಎಸ್‌.ಪಿ. ಗಂಗಮ್ಮ, ಉಪಪ್ರಾಂಶುಪಾಲರಾದ ಎಚ್‌.ಎಸ್‌. ಚಂದ್ರಕಲಾ, ಲಕ್ಷ್ಮಮ್ಮ, ಚಿಕ್ಕಹನುಮಂತಯ್ಯ, ಮಮತಾ, ಆಶಾರಾಣಿ, ರೂಪ, ಧನಲಕ್ಷ್ಮಿ, ವಿನುತ್‌ ಮತ್ತಿತರರು ಉಪಸ್ಥಿತರಿದ್ದರು.

ಸಣ್ಣ ಮಗುವಿನ ಮುಂದೆಯೂ ಸುಶ್ರಾವ್ಯವಾದ ಸಂಗೀತ ಹಾಕಿದರೆ ಆ ಮಗುವೂ ತಲೆದೂಗುತ್ತದೆ. ಇಂತಹ ಸಂಗೀತಕ್ಕೆ ಮಾರು ಹೋಗದವರೇ ಇಲ್ಲ. ಮಾನಸಿಕವಾಗಿ ಖಿನ್ನತೆಗೆ ಒಳಗಾದವರಿಗೂ ಸಂಗೀತ ಚೈತನ್ಯ ನೀಡುತ್ತದೆ. ಸಂಗೀತಕ್ಕೆ ಸಾಕಷ್ಟುಸಾಹಿತ್ಯ ಬೇಕು. ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಕಲುಷಿತಗೊಳ್ಳುತ್ತಿರುವ ಮನಸ್ಸುಗಳಿಗೆ ಮುದ ನೀಡಲಿದೆ.

ಡಾ. ಚೇತನ್‌ ಜಿಲ್ಲಾಧ್ಯಕ್ಷ, ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ

ಚಾಮರಾಜನಗರ: 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಪೂರ್ವವಾಗಿ ಅ. 28ರಂದು ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ವಿದ್ಯಾರ್ಥಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳನ್ನೊಳಗೊಂಡಂತೆ ನಿಗದಿಪಡಿಸಿರುವ ನಾಡಿನ ಶ್ರೇಷ್ಠ ಕವಿಗಳ ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ನನ್ನ ಹಾಡು-ನನ್ನ ನಾಡು ಎಂಬ ಶೀರ್ಷಿಕೆಯಡಿ ಕನ್ನಡದ ಆಯ್ದ 6 ಗೀತೆಗಳ ಸಮೂಹ ಗಾಯನ ಏರ್ಪಡಿಸಲಾಗಿದೆ.

ನಾಡಗೀತೆ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಡಾ. ಡಿ.ಎಸ್‌. ಕರ್ಕಿರವರ ಹಚ್ಚೇವು ಕನ್ನಡದ ದೀಪ, ನಾಡೋಜ ಡಾ. ಚನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ ಹಾಗೂ ಡಾ. ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಏಕಕಾಲದಲ್ಲಿ ಹಾಡಲಾಗುತ್ತದೆ.

ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವು ರಾಜ್ಯ ಸರ್ಕಾರದ ಐತಿಹಾಸಿಕ ದಾಖಲೆಯ ಕಾರ್ಯಕ್ರಮವಾಗಿದ್ದು, ಈ ಮೂಲಕ ರಾಜ್ಯೋತ್ಸವವನ್ನು ಆಚರಿಸುವ ಸಂಕಲ್ಪ ಮಾಡಲಾಗಿದೆ. ಈ ಬೃಹತ್‌ ವೃಂದದಲ್ಲಿ ಗೀತೆಗಳನ್ನು ಹಾಡುವ ಮತ್ತು ಹಾಡಿಸುವುದರ ಮೂಲಕ ಕನ್ನಡ ಸಂಸ್ಕೃತಿಯ ಸಂಭ್ರಮದಲ್ಲಿ ಎಲ್ಲರೂ ಭಾಗಿಗಳಾಗಬೇಕಿದೆ. ಜಿಲ್ಲೆಯ ವಿವಿಧ ಪರ ಸಂಘಟನೆಗಳು, ಕನ್ನಡ ಪರ ಸಂಸ್ಥೆಗಳು, ಪ್ರಗತಿಪರ, ರೈತಪರ, ಮಹಿಳಾ ಸಂಘದವರು, ಕಲಾವಿದರು, ವಿದ್ಯಾರ್ಥಿ ಮಿತ್ರರು, ಆಟೋ ಚಾಲಕರ ಸಂಘದವರು, ವಿವಿಧ ಕ್ಷೇತ್ರಗಳ ಮುಖ್ಯಸ್ಥರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಕೈಗಾರಿಕಾ ಕ್ಷೇತ್ರದವರು, ಸಾರ್ವಜನಿಕರು ತಮ್ಮ ತಮ್ಮ ಕೆಲಸದ ಸ್ಥಳಗಳಲ್ಲಿ ಅಕ್ಟೋಬರ್‌ 28ರಂದು ಬೆಳಿಗ್ಗೆ 11 ಗಂಟೆಗೆ ಕೋಟಿ ಕಂಠ ಗೀತ ಗಾಯನದÜ ಮೂಲಕ ಕನ್ನಡದ ಅಸ್ಮಿತೆ ಎತ್ತಿಹಿಡಿಯಬೇಕೆಂದು ಮನವಿ ಮಾಡಲಾಗಿದೆ.

Latest Videos
Follow Us:
Download App:
  • android
  • ios