ಕೊಲ್ಲೂರು ಕ್ಷೇತ್ರದ ಹೆಸರಲ್ಲಿ ನಕಲಿ ವೆಬ್‌ಸೈಟ್‌ ತೆರೆದು ವಂಚನೆ

ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ಅಪರಿಚಿತರು ನಕಲಿ ವೆಬ್‌ಸೈಟ್‌ ತೆರೆದು ದೇವಾಲಯಕ್ಕೆ ವಂಚಿಸಿದ ಬಗ್ಗೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅ. ಸುತಗುಂಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

kollur temple Fake website looted people

ಉಡುಪಿ(ನ.24): ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ಅಪರಿಚಿತರು ನಕಲಿ ವೆಬ್‌ಸೈಟ್‌ ತೆರೆದು ದೇವಾಲಯಕ್ಕೆ ವಂಚಿಸಿದ ಬಗ್ಗೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅ. ಸುತಗುಂಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೇವಾಲಯದಲ್ಲಿಯೇ ಅಧಿಕೃತ ಸೇವಾ ಕೌಂಟರ್‌ ಹಾಗೂ ಅಧಿಕೃತ ವೆಬ್‌ ಸೈಟ್‌ ಇದ್ದು, ಅದರ ಮೂಲಕ ದೇವರಿಗೆ ಸೇವೆಗಳನ್ನು ನೀಡಬಹುದಾಗಿದೆ. ಆದರೆ ಅಪರಿಚಿತರು ದೇವಳದಿಂದ ಯಾವುದೇ ಅನುಮತಿಯನ್ನು ಪಡೆಯದೆ ಮೂಕಾಂಬಿಕಾ ಇಸ್ಫೋಲೈನ್‌ ಎಂಬ ಹೆಸರಿನಲ್ಲಿ ಖಾಸಗಿ ವೆಬ್‌ಸೈಟ್‌ ತೆರೆದಿದ್ದಾರೆ.

ಕೈ ಕಾಲು ಕಳೆದುಕೊಂಡರೂ ಸಾಧನೆ; ವಿದ್ಯಾರ್ಥಿಗಳೊಂದಿಗೆ ಬ್ಲೇಡ್ ರನ್ನರ್ ಶಾಲಿನಿ ಸಂವಾದ

ದೇವಸ್ಥಾನದಲ್ಲಿ ನಡೆಯುವ ಚಂಡಿಕಾ ಹೋಮ ಹಾಗೂ ಇತರ ಸೇವೆಗಳನ್ನು ಮುಗಂಡವಾಗಿ ಕಾಯ್ದಿರಿಸಿಕೊಂಡು ಭಕ್ತರಿಂದ ಹೆಚ್ಚಿನ ಹಣ ವಸೂಲಿ ಮಾಡಿರುವ ಘಟನೆಗಳು ನಡೆದಿವೆ. ಇದರಿಂದ ಭಕ್ತರಿಗೆ ಮೋಸವಾಗಿದ್ದು ದೇವಾಲಯಕ್ಕೂ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಉಡುಪಿ: ಈ ಬಾರಿ 1 ಲಕ್ಷ ಮಕ್ಕಳಿಂದ ಸೂರ್ಯಗ್ರಹಣ ವೀಕ್ಷಣೆ..!

Latest Videos
Follow Us:
Download App:
  • android
  • ios