ಹೆಣ್ಣು ಭ್ರೂಣವನ್ನು ಗಂಡಾಗಿ ಪರಿವರ್ತಿಸೋದಾಗಿ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ ಖಾಸಗಿ ಆಸ್ಪತ್ರೆ!

ಕೋಲಾರ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆಂದು ತೆರಳಿದ ದಂಪತಿಗೆ ನಿಮ್ಮ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಮಾತ್ರೆ ಕೊಟ್ಟಿದ್ದಾರೆ. ಆದರೆ, ಹೊಟ್ಟೆಯಲ್ಲಿದ್ದ ಗಂಡು ಭ್ರೂಣ ಸಾವನ್ನಪ್ಪಿದೆ.

Kolar Private Hospital given pill to pregnant lady to convert female Fetus to male but aborted sat

ಕೋಲಾರ (ಮೇ 11): ರಾಜ್ಯದ ಗಡಿ ಜಿಲ್ಲೆ ಕೋಲಾರದಲ್ಲಿ ಈಗಾಗಲೇ ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದ ದಂಪತಿ ಮೂರನೇ ಮಗು ಗಂಡು ಮಗು ಬೇಕೆಂದು, ಗರ್ಭಿಣಿಯಾಗಿದ್ದ ವೇಳೆ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಈ ವೇಳೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಿಮ್ಮ ಹೊಟ್ಟೆಯಲ್ಲಿರುವ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತಿಸೋದಾಗಿ ಮಾತ್ರೆ ಕೊಟ್ಟಿದ್ದಾರಂತೆ. ನಂತರ, ಮಹಿಳೆಗೆ ಅಬಾರ್ಷನ್ ಆಗಿದ್ದು, ಹೊಟ್ಟೆಯಲ್ಲಿದ್ದ 3 ತಿಂಗಳ ಗಂಡು ಭ್ರೂಣ ಸಾವನ್ನಪ್ಪಿದೆ.

ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿರುವ ಹಿನ್ನೆಲೆಯಲ್ಲಿ ಗಂಡು ಮಗುವನ್ನು ಪಡೆಯಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ 3 ತಿಂಗಳು ಗರ್ಭಿಣಿಯಾಗಿದ್ದ ಪತ್ನಿ ಅನಿತಾಳನ್ನು ಖಾಸಗಿ ಆಸ್ಪತ್ರೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಿ ಭ್ರೂಣ ಲಿಂಗ ಪತ್ತೆ ಮಾಡಿಸಿದ್ದಾರೆ. ಆಗ ಆಸ್ಪತ್ರೆ ಸಿಬ್ಬಂದಿ ಹೊಟ್ಟೆಯಲ್ಲಿರೊ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತ‌ನೆ ಮಾಡಿಸೊದಾಗಿ ಮಾತ್ರೆಗಳನ್ನು ಕೊಟ್ಟಿದ್ದಾರಂತೆ. ಈ ಮಾತ್ರೆ ಸೇವಿಸಿದ ನಂತರ  ಬುಧವಾರ ಗರ್ಭದಲ್ಲಿದ್ದ ಗಂಡು ಮಗು ಸಾವನಪ್ಪಿದೆ ಎಂದು ದಂಪತಿ ಆರೋಪ ಮಾಡಿದ್ದಾರೆ. 

ಕೊಡಗು ಅಪ್ತಾಪ್ತೆಯ ಭೀಕರ ಹತ್ಯೆ ಪ್ರಕರಣ, ಮೃತ ವಿದ್ಯಾರ್ಥಿನಿಯ ರಂಡ ಪತ್ತೆ

ಹೆಣ್ಣು ಮಗುವೆಂದು ಭಾವಿಸಿ, ತಾಯಿಯೇ ಮಾತ್ರೆ ಸೇವಿಸಿ ಗಂಡು ಮಗು ಗರ್ಭಪಾತವಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ. ಕೆಜಿಎಫ್ ತಾಲೂಕಿನ ಹಾರಂಪಲ್ಲಿ ನಿವಾಸಿಗಳಾದ ಮುರುಗೇಶ್ ಹಾಗೂ ಅನಿತಾ ದಂಪತಿಯ  3 ತಿಂಗಳ ಗಂಡು ಭ್ರೂಣ ಸಾವನ್ನಪ್ಪಿದೆ. ತನ್ನ ಪತ್ನಿಯ ಹೊಟ್ಟೆಯಲ್ಲಿದ್ದ ಗಂಡು ಮಗುವನ್ನು ಹೆಣ್ಣು ಮಗುವೆಂದು ಹೇಳಿ, ಅದನ್ನು ಗಂಡಾಗಿ ಪರಿವರ್ತಿಸಲು ಮಾತ್ರೆ ಕೊಡುವುದಕ್ಕೆ ಬರೋಬ್ಬರಿ 25 ಸಾವಿರ ರೂ. ಹಣವನ್ನೂ ಪಡೆದಿದ್ದಾರೆ ಎಂದು ಮೃತ ಮಗುವಿನ ತಂದೆ ಮುರುಗೇಶ್ ಆರೋಪ ಮಾಡಿದ್ದಾರೆ.

ನಾವು ಸ್ಕ್ಯಾನಿಂಗ್ ಮಾಡಿಯೇ ಇಲ್ಲ, ಮಾತ್ರೆ ಕೊಟ್ಟೇ ಇಲ್ಲ ಎನ್ನುತ್ತಿರುವ ಆಸ್ಪತ್ರೆ:
ದಂಪತಿಯ 3 ತಿಂಗಳ ಭ್ರೂಣ ಗರ್ಭಪಾತದ ಮೂಲಕ ಸಾವನ್ನಪ್ಪಿದ ಬೆನ್ನಲ್ಲಯೇ ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿ ದೂರು ನೀಡಿದ್ದಾರೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳು ಬಂದು ಆಸ್ಪತ್ರೆಯಲ್ಲಿ ಪರಿಶೀಲನೆ ಮಾಡಿದಾಗ ನಾವು ಗರ್ಭಪಾತಕ್ಕೆ ಮಾತ್ರೆ ಕೊಟ್ಟಿಲ್ಲ. ನಾವು ಇಲ್ಲಿ ಸ್ಕ್ಯಾನಿಂಗ್ ಸಹ ಮಾಡಿಲ್ಲ ಎಂದು ಖಾಸಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ದಂಪತಿ ನಮ್ಮನ್ನು ಬ್ಲಾಕ್ ಮೇಲ್ ಮಾಡಿ ಹಣ ಕೇಳೋದಕ್ಕೆ ಬಂದಿದ್ದರು. ನಾವು ಅದಕ್ಕೆ ಒಪ್ಪದಿದಕ್ಕೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಮಾಲೂರು ತಾಲೂಕು ವೈದ್ಯಾಧಿಕಾರಿ ಪರಿಶೀಲನೆಗೆ ಬಂದಾಗಲೂ ಒದೇ ಮಾತನ್ನು ಹೇಳಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಏನೂ ನಡೆದಿಲ್ಲವೆಂದು ಮರಳಿ ಹೋಗಿದ್ದಾರೆ.

ಹಾಸನ ಲೈಂಗಿಕ ದೌರ್ಜನ್ಯ ಕೇಸ್‌ನಡಿ ವಕೀಲ ದೇವರಾಜೇಗೌಡ ಬಂಧನ; ವಶಕ್ಕೆ ಪಡೆಯುತ್ತಾ ಎಸ್‌ಐಟಿ?

ಆದರೆ, ಗಂಡು ಮಗು ಗರ್ಭಪಾತದ ಬಗ್ಗೆ ಪ್ರಶ್ನೆ ಮಾಡಲು ಮಗು ಕಳೆದುಕೊಂಡ ಪೋಷಕ ಮುರುಗೇಶ್ ಆಸ್ಪತ್ರೆಯ ಬಳಿ ತೆರಳಿದಾಗ ಆಸ್ಪತ್ರೆಯ ನರ್ಸ್ ಗೆ ಗಲಾಟೆ ಮಾಡಿದ್ದಾರೆ. ಇಲ್ಲಿ ಯಾವುದೇ ನ್ಯಾಯ ಸಿಗದ ಹಿನ್ನೆಲೆಯಲ್ಲಿ ತನ್ನ ಮಗುವಿಗಾದ ಗತಿ ಬೇರೊಬ್ಬರಿಗೆ ಆಗಬಾರದೆಂದು ಭಾವಿಸಿ ಖಾಸಗಿ ಆಸ್ಪತ್ರೆ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಮಾಲೂರು ತಾಲೂಕು ವೈದ್ಯಾದಿಕಾರಿಗೆ ದೂರು ನೀಡಿದ್ದಾರೆ. ಈ ಘಟನೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದೂರು ದಾಖಲಾದ ಬಗ್ಗೆ ಮಾಹಿತಿಯಿಲ್ಲ. 

Latest Videos
Follow Us:
Download App:
  • android
  • ios