ಕೋಲಾರ[ಸೆ.06]: ಅನೈತಿಕ ಸಂಬಂಧದಿಂದ ಉಂಟಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಕೋಲಾರದ ಮುಳಬಾಗಿಲಿನಲ್ಲಿ ನಡೆದಿದೆ. 

ಮುಳಬಾಗಿಲಿನ ಕೆ ಚದುಮನಹಳ್ಳಿ ಗ್ರಾಮದ 32 ವರ್ಷದ ಅಶ್ವಥ್ ಕೊಲೆಯಾದ ವ್ಯಕ್ತಿ. ಅಶ್ವಥ್ ನನ್ನು ರಮೇಶ್ ಹಾಗೂ ವಿಜಿ ಎಂಬವರು ರಾಡ್ನಿಂದ ಹೊಡೆದು ಕೊಂದಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. 

ಕೊಲೆಯಾದ ಅಶ್ವಥ್ ಹಾಗೂ ತನ್ನ ಪತ್ನಿ ಅನೈತಿಕ ಸಂಬಂಧ ಇತ್ತು. ಹೀಗಾಗಿ ತಾನು ಕೊಲೆ ಮಾಡಿರುವುದಾಗಿ ಆರೋಪಿ ರಮೇಶ್ ಆರೋಪವಾಗಿದೆ. ಸದ್ಯ ಈ ಕೊಲೆ ಪ್ರಕರಣ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.