Asianet Suvarna News Asianet Suvarna News

ಕೋಲಾರ ಕ್ಷೇತ್ರ: ಅಭ್ಯರ್ಥಿಗಳ ಆಯ್ಕೆ, ಬಿಡಿಸಲಾಗದ ಕಗ್ಗಂಟು

ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ, ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಗ್ಗಂಟುಗಳು ಇನ್ನೂ ಬಗೆಹರಿದಿಲ್ಲ, ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಮೈತ್ರಿಯಿಂದ ಎನ್.ಡಿ.ಎ. ಅಭ್ಯರ್ಥಿಯನ್ನು ಕಣಕ್ಕಿಳಿಸಲು ಗೊಂದಲದಲ್ಲಿ ಮುಳುಗಿವೆ, ಕಾಂಗ್ರೆಸ್ ಪಕ್ಷ ಇಷ್ಟು ದಿನಗಳಿಂದ ಕಾದು ನೋಡುವ ತಂತ್ರ ಅನುಸರಿಸಿತ್ತು.ಪ್ರಸ್ತುತ ಕೋಲಾರದಲ್ಲಿ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟಗೊಳ್ಳದೇ ಗೊಂದಲದಲ್ಲಿ ಮೂರು ಪಕ್ಷಗಳು ಮುಳುಗಿವೆ.

Kolar Constituency: Selection of candidates, an inextricable knot snr
Author
First Published Mar 21, 2024, 11:47 AM IST

 ಕೋಲಾರ :  ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ, ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಗ್ಗಂಟುಗಳು ಇನ್ನೂ ಬಗೆಹರಿದಿಲ್ಲ, ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಮೈತ್ರಿಯಿಂದ ಎನ್.ಡಿ.ಎ. ಅಭ್ಯರ್ಥಿಯನ್ನು ಕಣಕ್ಕಿಳಿಸಲು ಗೊಂದಲದಲ್ಲಿ ಮುಳುಗಿವೆ, ಕಾಂಗ್ರೆಸ್ ಪಕ್ಷ ಇಷ್ಟು ದಿನಗಳಿಂದ ಕಾದು ನೋಡುವ ತಂತ್ರ ಅನುಸರಿಸಿತ್ತು.ಪ್ರಸ್ತುತ ಕೋಲಾರದಲ್ಲಿ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟಗೊಳ್ಳದೇ ಗೊಂದಲದಲ್ಲಿ ಮೂರು ಪಕ್ಷಗಳು ಮುಳುಗಿವೆ.

ಮೈತ್ರಿ ಧರ್ಮದಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ 3 ಸೀಟು ಹಂಚಿಕೆಯಾಗಿದ್ದು, ಈಗಾಗಲೇ 2  ಸೀಟು ಹಂಚಿಕೆ ಮುಗಿದಿದ್ದರೂ ಕೋಲಾರದ ಸೀಟು ಹಂಚಿಕೆ ಇನ್ನು ಬಗೆಹರಿಯದಿರುವುದು ಜೆ.ಡಿ.ಎಸ್ ಮುಖಂಡರಲ್ಲಿ ಅಸಮಾಧಾನವನ್ನುಂಟು ಮಾಡಿದೆ.

ಜೆ.ಡಿ.ಎಸ್‌ನಲ್ಲಿ ಮಲ್ಲೇಶ್ ಬಾಬು, ಸಮೃದ್ಧಿ ಮಂಜುನಾಥ್ ಹಾಗೂ ನಿಸರ್ಗ ನಾರಾಯಣಸ್ವಾಮಿ ಸೇರಿ ಮೂವರು ಆಕಾಂಕ್ಷಿಗಳ ಪೈಕಿ ಮಲ್ಲೇಶ್ ಬಾಬು ಅಥವಾ ಸಮೃದ್ದಿ ಮಂಜುನಾಥ್ ಎಂದು ಕೇಳಿ ಬಂದಿತು, ಮತ್ತೊಂದು ಕಡೆ ಬಿಜೆಪಿ ಪಕ್ಷದಲ್ಲಿ ಎಸ್.ಮುನಿಸ್ವಾಮಿ, ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರಿಗಿಂತ ೨ ಲಕ್ಷಕ್ಕೂ ಅಧಿಕ ಮತ ಪಡೆದು ವಿಜಯದ ಪತಾಕೆ ಹಾರಿಸಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ಭಾರಿಗೆ ಬಿಜೆಪಿ ಖಾತೆಯನ್ನು ತೆರೆದಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ಕೆ.ಎಚ್.ಮುನಿಯಪ್ಪನವರ ವಿರುದ್ಧದ ಜಿಲ್ಲೆಯಲ್ಲಿ ಭಿನ್ನಮತ ಶಮನವಾಗಿದ್ದರೂ ಇನ್ನು ಕೆಲವು ಶಾಸಕರ ಕೋಪ ಹಾಗೆಯೇ ಇದೆ. ಅದಕ್ಕೆ ಮೀಸಲಾತಿಯಲ್ಲಿ ಬಲಗೈನವರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿರುವುದೇ ಸಾಕ್ಷಿಯಾಗಿದೆ.

ಇದಕ್ಕೆ ಪ್ರತಿಯಾಗಿ ಕೆ.ಎಚ್.ಮುನಿಯಪ್ಪ ಲೋಕಸಭೆಯಲ್ಲಿ ಟಿಕೆಟ್ ಪಡೆದರೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ, ಅಲ್ಲಿ ಯಾವ ಮಂತ್ರಿ ಸ್ಥಾನವೂ ಲಭಿಸುವುದಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ತಮ್ಮ ಕೆಲಸಗಳು ಸಮರ್ಪಕವಾಗಿ ಆಗದು, ಅದರ ಬದಲು ರಾಜ್ಯದಲ್ಲಿ ತಮ್ಮದೇ ಸರ್ಕಾರ ಇರುವುದರಿಂದ ಈಗ ಸಿಕ್ಕಿರುವ ಮಂತ್ರಿ ಸ್ಥಾನನವನ್ನು ಕಳೆದುಕೊಳ್ಳುವುದು ಬೇಡ ಎಂಬುದಾಗಿದ್ದು, ಮತ್ತೊಂದೆಡೆ ಕಾಂಗ್ರೆಸ್ ಹೈಕಮಾಂಡ್ ಗೆ ಮುನಿಯಪ್ಪನವರು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದ್ದರೂ ಭಿನ್ನಮತದ ಘಟಬಂಧನ್ ಭೀತಿಯಿಂದಾಗಿ ಗೊಂದಲಕ್ಕೆ ಒಳಗಾಗಿದೆ.

ಈ ಸಂದರ್ಭದಲ್ಲಿ ಕೆ.ಎಚ್.ಮುನಿಯಪ್ಪನವರು, ನಾನು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಷರತ್ತು ಒಡ್ಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೊಂದಲಕ್ಕೆ ಒಳಗಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆ.ಎಚ್.ಮುನಿಯಪ್ಪ ತಮಗೆ ಅಥವಾ ತಮ್ಮ ಅಳಿಯ ಚಿಕ್ಕ ಪೆದ್ದನ್ನನಿಗೆ ನೀಡಿ ಎಂದರೆ ಮತ್ತೊಂದೆಡೆ ಬಲಗೈ ಸಮುದಾಯದ ಮಾಜಿ ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಪ್ರಬಲ ಅಕಾಂಕ್ಷಿಯಾಗಿದ್ದಾರೆ, ಅಂತಿಮವಾಗಿ ಚಿಕ್ಕಪೆದ್ದನ್ನ ಅಥವಾ ಡಾ.ಎಲ್.ಹನುಮಂತಯ್ಯ ಇಬ್ಬರಲ್ಲಿ ಒಬ್ಬರನ್ನು ಘೋಷಿಸುವ ಸಾಧ್ಯತೆಯಿದೆಯನ್ನಲಾಗಿದೆ.

ಜೆ.ಡಿ.ಎಸ್. ಪಕ್ಷದ ಮುಖಂಡರು ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ೨೮ ಸ್ಥಾನಗಳ ಪೈಕಿ ಬಿಜೆಪಿಯು ಮೂರು ಸ್ಥಾನಗಳನ್ನು ಬಿಟ್ಟು ಕೊಡಲು ಸಹ ನಿರ್ಲಕ್ಷಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ತೋರುತ್ತಿದೆ.

ಒಟ್ಟಾರೆಯಾಗಿ ಕೋಲಾರದ ಲೋಕಸಭೆ ಚುನಾವಣೆಯಲ್ಲಿ ಪ್ರತಿಷ್ಠಿತ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲ ಉಂಟಾಗಿರುವುದಂತೂ ಸತ್ಯ,ಶೀಘ್ರದಲ್ಲಿಯೇ ಅಧಿಕೃತ ಅಭ್ಯರ್ಥಿಗಳು ತೆರೆಯ ಮೇಲೆ ಕಾಣುವ ಸಾಧ್ಯತೆಯಿದೆ.

ಮತ್ತೊಮ್ಮೆ ಟಿಕೆಟ್ ಭರವಸೆಯಲ್ಲಿ ಬಿಜೆಪಿ ಹಾಲಿ ಸಂಸದ:

ಬಿಜೆಪಿ ಸಂಸದರಾಗಿದ್ದ ಎಸ್.ಮುನಿಸ್ವಾಮಿಯವರು ಈಗಾಗಲೇ ಬಿಜೆಪಿ ಹೈಕಮಾಂಡ್ ಮುಖಂಡರನ್ನು ಸಂರ್ಪಕಿಸಿ ಟಿಕೆಟ್ ಆಶ್ವಾಸನೆ ಪಡೆದಿದ್ದು, ಕೋಲಾರದ ಲೋಕಸಭಾ ಟಿಕೆಟ್ ಮತ್ತೊಮ್ಮೆ ತಮಗೇ ಸಿಗಲಿದೆ ಎಂಬುವುದಾಗಿ ಹೇಳುತ್ತಿದ್ದಾರೆ. ಅವರು ಈಗಾಗಲೇ ಜೆಡಿಎಸ್ ವರಿಷ್ಠರನ್ನು ಸಂಪರ್ಕಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಪಕ್ಷದಲ್ಲಿರುವ ಭಿನ್ನಮತದ ಲಾಭವನ್ನು ಪಡೆಯುವ ವಿಶ್ವಾಸವನ್ನು ಮುನಿಸ್ವಾಮಿಯವರು ಹೊಂದಿದ್ದಾರೆ, ಆದರೆ ಬಿಜೆಪಿಯಲ್ಲೂ ಎಸ್.ಮುನಿಸ್ವಾಮಿ ವಿರುದ್ಧ ಒಂದು ಗುಂಪು ಅಸಮಾಧಾನಗೊಂಡಿತ್ತು, ಆದರೀಗ ಆ ಗುಂಪು ಸಮಾಧಾನಗೊಂಡಿದೆ.

ಮುನಿಸ್ವಾಮಿಯವರು ಒಂದು ವೇಳೆ ಜೆಡಿಎಸ್ ಪಕ್ಷದಲ್ಲಿಯೇ ಟಿಕೆಟ್ ನೀಡುವುದಾದರೆ ಅದಕ್ಕೂ ಸೈ ಎಂದಿದ್ದಾರೆ. ಜೆ.ಡಿ.ಎಸ್ ಗುರುತಿನಲ್ಲಿ ಸ್ಪರ್ಧಿಸಿದರೂ ಸಹ ಎನ್.ಡಿ.ಎ ಮೂಲ ಉದ್ದೇಶ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬುದಾಗಿದೆ. ಹಾಗಾಗಿ ಮೋದಿಯ ಕೈಗೆ ಆಡಳಿತದ ಚುಕ್ಕಾಣಿ ನೀಡಲು ಎಲ್ಲದಕ್ಕೂ ಸಿದ್ಧ ಎಂಬ ಘೋಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.

Follow Us:
Download App:
  • android
  • ios