ಕೋಲಾರ ಕ್ಷೇತ್ರ : ಕೈ ಟಿಕೆಟ್‌ ಗೊಂದಲ

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ವಿಷಯ ಇನ್ನೂ ಗೊಂದಲದಲ್ಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಟಿಕೆಟ್‌ ಮೊದಲ ಪಟ್ಟಿಯಲ್ಲಿ ಪ್ರಕಟವಾಗಿಲ್ಲ.

Kolar Constituency: Confusion in Congress Ticket  snr

ಕೋಲಾರ:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ವಿಷಯ ಇನ್ನೂ ಗೊಂದಲದಲ್ಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಟಿಕೆಟ್‌ ಮೊದಲ ಪಟ್ಟಿಯಲ್ಲಿ ಪ್ರಕಟವಾಗಿಲ್ಲ.

ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಲಾಗಿದೆ. ಆದರೆ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರು ಇಲ್ಲ. ಎಸ್ಪಿ ಮೀಸಲು ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ.

 ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು ನೀವು ಕೈಹಿಡಿದ್ರಿ: ಬದುಕಿರೋತನಕ ಬಾದಾಮಿ ಜನರನ್ನ ಮರೆಯೊಲ್ಲ: ಸಿದ್ದು ಭಾವನಾತ್ಮಕ ಮಾತು

ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಜಾತಿ ಪ್ರಮಾಣ ಪತ್ರದ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾರ ಹೆಸರನ್ನೂ ಘೋಷಿಸಿಲ್ಲ.

ಕಾಂಗ್ರೆಸ್‌ಗೆ ಕಗ್ಗಂಟಾಗಿರುವ ಉಡುಪಿ ಕಾರ್ಕಳ

ಉಡುಪಿ :  ಮುಂದಿನ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಪಕ್ಷ ಘೋಷಿಸಿದೆ.

ನಿರೀಕ್ಷೆಯಂತೆ ಕಾಪು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮತ್ತು ಬೈಂದೂರು ವಿಧಾನ ಕ್ಷೇತ್ರಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ ಅವರನ್ನು ಪುನಃ ಕಣಕ್ಕಿಳಿಸಲಾಗಿದೆ. ಕುಂದಾಪುರ ಕ್ಷೇತ್ರಕ್ಕೆ ಹೊಸಮುಖ, ಗುತ್ತಿಗೆದಾರರಾಗಿ ಜನಪರಿಚಿತರಾಗಿರುವ ಮೊಳಹಳ್ಳಿ ದಿನೇಶ್‌ ಹೆಗ್ಡೆ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕಾಪು ಕ್ಷೇತ್ರದಿಂದ ಸಿನಿಮಾ ನಟ ರಾಜಶೇಖರ ಕೋಟ್ಯಾನ್‌ ಆಕಾಂಕ್ಷಿಯಾಗಿದ್ದರು. ಕುಂದಾಪುರದಿಂದ ನ್ಯಾಯವಾದಿ ಶ್ಯಾಮಲಾ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಬಿಲ್ಲವ ನಾಯಕ ಅಶೋಕ್‌ ಪೂಜಾರಿ ಆಸೆಯಲ್ಲಿದ್ದರು. ಆದರೆ ಈ ಮೂರು ಕ್ಷೇತ್ರಗಳಲ್ಲಿ ಈಗ ಆಯ್ಕೆಯಾಗಿರುವ ಮೂವರಿಗೆ ಬಹುತೇಕ ಟಿಕೆಟ್‌ ಈ ಹಿಂದೆ ಖಚಿತವಾಗಿದ್ದರಿಂದ, ಟಿಕೆಟ್‌ ಸಿಗದವರು ನಿರಾಶರಾಗುವ ಅಥವಾ ಬಂಡಾಯ ಮಾಡುವ ಸಾಧ್ಯತೆಗಳಿಲ್ಲ.

* ಉಡುಪಿ-ಕಾರ್ಕಳ ಗೊಂದಲ

ಜಿಲ್ಲಾ ಕೇಂದ್ರ ಉಡುಪಿ ಮತ್ತು ರಾಜಕೀಯವಾಗಿ ಚರ್ಚೆಯಲ್ಲಿರುವ ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಲು ಕಾಂಗ್ರೆಸ್‌ ವಿಫಲವಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಅನುಭವಿ ಅಭ್ಯರ್ಥಿಗಳ ಕೊರತೆ ಇರುವುದು ಗೊಂದಲಕ್ಕೆ ಕಾರಣವಾಗಿದೆ.

ಉಡುಪಿ ಕ್ಷೇತ್ರಕ್ಕೆ ಉಡುಪಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಉಪಾಧ್ಯಕ್ಷ ಕೀರ್ತಿ ಶೆಟ್ಟಿ, ಉಡುಪಿ ಬ್ಲಾಕ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ಕೋಟ ಬ್ಲಾಕ್‌ ಅಧ್ಯಕ್ಷ ಅಶೋಕ್‌ ಕುಂದರ್‌, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಮಾಜಿ ಜಿ.ಪಂ. ಸದಸ್ಯ ದಿವಾಕರ ಕುಂದರ್‌, ಉದ್ಯಮಿಗಳಾದ ಪ್ರಸಾದ್‌ ಕಾಂಚನ್‌ ಮತ್ತು ಅಮೃತ್‌ ಶೆಣೈ ಟಿಕೆಟ್‌ ಆಕಾಂಕ್ಷಿಗಳಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಕಾರ್ಕಳ ಕ್ಷೇತ್ರದಿಂದ ಹೆಬ್ರಿ ಬ್ಲಾಕ್‌ ಅಧ್ಯಕ್ಷ ಮಂಜುನಾಥ ಪೂಜಾರಿ, ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿನೀರೆ, ಬಿಲ್ಲವ ನಾಯಕ ಡಿ.ಆರ್‌.ರಾಜು, ಹೊಟೇಲ್‌ ಉದ್ಯಮಿ ಸುರೇಂದ್ರ ಶೆಟ್ಟಿಅರ್ಜಿ ಸಲ್ಲಿಸಿದ್ದಾರೆ.

ಆದರೆ ಈ ಎರಡೂ ಕ್ಷೇತ್ರಗಳು ಪ್ರಸ್ತುತ ಬಿಜೆಪಿಯ ಭದ್ರಸ್ಥಾನಗಳಾಗಿರುವುದರಿಂದ, ಅರ್ಜಿ ಸಲ್ಲಿಸಿರುವವರಲ್ಲಿ ಬಿಜೆಪಿಗೆ ಸಡ್ಡು ಹೊಡೆಯುವ ಸಮರ್ಥರು ಯಾರು ಎಂಬುದನ್ನು ನಿರ್ಧರಿಸುವುದೇ ಕಾಂಗ್ರೆಸ್‌ಗೆ ತಲೆನೋವಾಗಿದೆ.

3 ಬಾರಿ ಗೆದ್ದು, ಸಚಿವರೂ ಆದ ಸೊರಕೆ

ವಿನಯಕುಮಾರ್‌ ಸೊರಕೆ ಇದುವರೆಗೆ 4 ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು, 3 ಬಾರಿ ಗೆದ್ದಿದ್ದಾರೆ. ಪುತ್ತೂರಿನಲ್ಲಿ 1985 ಮತ್ತು 1990ರಲ್ಲಿ ಗೆದ್ದಿದ್ದರು, ಕಾಪುನಿಂದ 2013ರಲ್ಲಿ ಗೆದ್ದು ಸಚಿವರೂ ಆಗಿದ್ದಾರೆ. 2018ರಲ್ಲಿ ಸೋತಿದ್ದಾರೆ. ಇದೀಗ ಪುನಃ ಟಿಕೆಟ್‌ ಪಡೆದಿದ್ದಾರೆ. ನಡುವೆ 1999ರಲ್ಲಿ ಲೋಕಸಭೆಗೂ ಸ್ಪರ್ಧಿಸಿ ಗೆದ್ದಿದ್ದರು.

4 ಬಾರಿ ಗೆದ್ದಿರುವ ಗೋಪಾಲ ಪೂಜಾರಿ

ಹೊಟೇಲ್‌ ಉದ್ಯಮಿ ಗೋಪಾಲ ಪೂಜಾರಿ ಒಟ್ಟು 7 ಬಾರಿ ವಿಧಾನಸಭೆಗೆ ಸ್ಪರ್ಧಿಸಿ, ಇದೀಗ 8ನೇ ಬಾರಿ ಕಣಕ್ಕಿಳಿದಿದ್ದಾರೆ. 1994ರಲ್ಲಿ ಕೆಸಿಪಿಯಿಂದ ಸ್ಪರ್ಧಿಸಿ ಸೋತಿದ್ದರು, ನಂತರ 1996, 1999, 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. 2008ರಲ್ಲಿ ಮತ್ತೆ ಸೋಲಿನ ರುಚಿ ಕಂಡರೂ, 2013ರಲ್ಲಿ ಮತ್ತೆ ಗೆದ್ದರು, 2018ರಲ್ಲಿ ಮತ್ತೆ ಸೋತರು.

ಬಿಲ್ಲವ, ಬಂಟರಿಗಾಯ್ತು, ಇನ್ನು ಮೊಗವೀರ?

ಜಾತಿ ಲೆಕ್ಕಾಚಾರದಲ್ಲಿ ಜಿಲ್ಲೆಯಲ್ಲಿ ಪ್ರಬಲರಾಗಿರುವ ಬಿಲ್ಲವ ಸಮುದಾಯದ ಸೊರಕೆ ಮತ್ತು ಗೋಪಾಲ ಪೂಜಾರಿ ಹಾಗೂ ಬಂಟ ಸಮುದಾಯದ ದಿನೇಶ್‌ ಹೆಗ್ಡೆ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದೆ. ಇನ್ನು ಮೊಗವೀರ ಸಮುದಾಯಕ್ಕೆ ಟಿಕೆಟ್‌ ಕೊಡುವುದಿದ್ದರೇ ಉಡುಪಿ ಕ್ಷೇತ್ರದಲ್ಲಿ ಕೊಡಬೇಕು ಅಥವಾ ಜಾತಿ ಲೆಕ್ಕಾಚಾರವನ್ನು ಕಾಂಗ್ರೆಸ್‌ ಕೈಬಿಡುತ್ತದೋ ಕಾದು ನೋಡಬೇಕು.

Latest Videos
Follow Us:
Download App:
  • android
  • ios