ಮಾಲೂರು (ಫೆ.28): ಕಾಂಗ್ರೆಸ್‌ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಜಿ.ಇ.ರಾಮೇಗೌಡ ಅವರು ತಮ್ಮ ಬೆಂಬಲಿಗರೂಡನೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ರಾಮನಗರದಲ್ಲಿ ಜೆಡಿಎಸ್‌ ಸೇರಿದರು.

ರಾಮೇಗೌಡರನ್ನು ಅತ್ಮೀಯವಾಗಿ ಸ್ವಾಗತಿಸಿದ ಕುಮಾರಸ್ವಾಮಿ ಅವರು, ಕ್ಷೇತ್ರದ ಜೆಡಿಎಸ್‌ ಕಾರ‍್ಯಕರ್ತರು ರಾಮೇಗೌಡ ನೇತೃತ್ವದಲ್ಲಿ ಪಕ್ಷವನ್ನು ಮಾಲೂರಲ್ಲಿ ಮುನ್ನೆಡೆಸುವುದಾಗಿ ತಿಳಿಸಿದ್ದು,ನನ್ನದೇನು ಅಕ್ಷೇಪಣೆ ಇಲ್ಲ ಎಂದರು. ಇನ್ನೂ ಮುಂದೆ ರಾಮೇಗೌಡರ ನೇತೃತ್ವದಲ್ಲೇ ಮುಂದಿನ ವಿಧಾನ ಸಭೆ ಚುನಾವಣೆ ನಡೆಯಲಿದ್ದು,ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ. ಈ ಮಾತನ್ನು ನನ್ನ ಕರ್ಮ ಭೂಮಿಯಲ್ಲಿ ತಿಳಿಸುತ್ತಿದ್ದು, ಯಾವುದೇ ಬದಲಾವಣೆ ಇಲ್ಲ ಎಂದರು.

'2023ಕ್ಕೆ ಮತ್ತೊಮ್ಮೆ ಎಚ್ಡಿಕೆ ಮುಖ್ಯಮಂತ್ರಿ' .

ಚಿಂತಾಮಣಿ ಶಾಸಕ ಕೃಷ್ಣಾ ರೆಡ್ಡಿ, ಎಂಎಲ್‌ಸಿ ಗೋವಿಂದರಾಜು, ಚೌಡರೆಡ್ಡಿ, ತಾಲೂಕು ಅಧ್ಯಕ್ಷ ಚಂದ್ರಶೇಖರ್‌ ಗೌಡ,ಮಾಜಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಸ್ವಾಮಿ ರೆಡ್ಡಿ, ಜಿ.ಮಂಜುನಾಥ್‌ ಗೌಡ,ದಿನೇಶ್‌ ಗೌಡ,ಬಿ.ಕೆ.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರಿದ್ದರು.