Asianet Suvarna News Asianet Suvarna News

ಮನೆ ಕಟ್ಟಲು ಮರಳು ಸಾಗಣೆಗೆ ಸ್ಥಳೀಯರಿಗೆ ತೊಂದ್ರೆ ಕೊಟ್ರೆ ಹುಷಾರ್‌: ರಾಜಣ್ಣ

ತಾಲೂಕಿನಲ್ಲಿ ಸ್ಥಳೀಯರು ಮನೆ ಕಟ್ಟಿಕೊಳ್ಳಲು ಮರಳು ಸಾಗಾಣೆ ಮಾಡಿಕೊಂಡರೆ ತೊಂದರೆ ಕೊಡಬೇಡಿ, ಲಾರಿಗಳಿಗೆ ತುಂಬಿ ಲಾಟ್‌ ಹಾಕಿದರೆ ಕಡ್ಡಾಯವಾಗಿ ಕ್ರಮ ಕೈಗೊಂಡು ಜೈಲಿಗೆ ಕಳಿಸಿ ನಾನು ಬೇಡ ಎನ್ನುವುದಿಲ್ಲ, ಆದರೆ ಮನೆ ಕಟ್ಟಲು ಸ್ಥಳೀಯರು ಮರಳು ಸಾಗಾಣೆ ಮಾಡಿ ಕೊಂಡರೆ ಟ್ರ್ಯಾಕ್ಟರ್‌ ಹಿಡಿದು ಪ್ರಕರಣ ದಾಖಲಿಸಿರುವುದು ಯಾವ ನ್ಯಾಯ...? ನಮ್ಮ ತಾಲೂಕಿನಲ್ಲಿ ಎಲ್ಲಿ ಮರಳು ದಂಧೆ ನಡೆಯುತ್ತಿದೆ ನೀವೇ ಉತ್ತರಿಸಿ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

KN Rajanna Supports Local People snr
Author
First Published Dec 18, 2023, 9:48 AM IST

  ಮಧುಗಿರಿ :  ತಾಲೂಕಿನಲ್ಲಿ ಸ್ಥಳೀಯರು ಮನೆ ಕಟ್ಟಿಕೊಳ್ಳಲು ಮರಳು ಸಾಗಾಣೆ ಮಾಡಿಕೊಂಡರೆ ತೊಂದರೆ ಕೊಡಬೇಡಿ, ಲಾರಿಗಳಿಗೆ ತುಂಬಿ ಲಾಟ್‌ ಹಾಕಿದರೆ ಕಡ್ಡಾಯವಾಗಿ ಕ್ರಮ ಕೈಗೊಂಡು ಜೈಲಿಗೆ ಕಳಿಸಿ ನಾನು ಬೇಡ ಎನ್ನುವುದಿಲ್ಲ, ಆದರೆ ಮನೆ ಕಟ್ಟಲು ಸ್ಥಳೀಯರು ಮರಳು ಸಾಗಾಣೆ ಮಾಡಿ ಕೊಂಡರೆ ಟ್ರ್ಯಾಕ್ಟರ್‌ ಹಿಡಿದು ಪ್ರಕರಣ ದಾಖಲಿಸಿರುವುದು ಯಾವ ನ್ಯಾಯ...? ನಮ್ಮ ತಾಲೂಕಿನಲ್ಲಿ ಎಲ್ಲಿ ಮರಳು ದಂಧೆ ನಡೆಯುತ್ತಿದೆ ನೀವೇ ಉತ್ತರಿಸಿ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

ಶನಿವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ ಕಟ್ಟಿ ಕೊಳ್ಳುವ ನನ್ನ ಕ್ಷೇತ್ರದ ಬಡವರಿಗೆ ತೊಂದೆ ಕೊಟ್ಟರೆ ನಾನು ಅಕ್ಷರ ಸಹ ಸಹಿಸುವುದಿಲ್ಲ, ಜನಸಾಮಾನ್ಯರಿಗೆ ತೊಂದೆರೆ ಕೊಡಿ ಎಂದು ಯಾವ ಕಾನೂನು ಹೇಳಿದೆ. ಕ್ಷೇತ್ರದ ಯಾವ ಗ್ರಾಮಗಳಲ್ಲಿ ಏನೇನೂ ನಡೆಯತ್ತಿದೆ ಎಂಬ ಮಾಹಿತಿ ನನಗಿದೆ. ಯಾವುದೇ ಕಾರಣಕ್ಕೂ ಜನತೆಗೆ ತೊಂದರೆ ಕೊಡಬೇಡಿ ಎಂದು ಪೋಲಿಸರಿಗೆ ಸಲಹೆ ನೀಡಿದರು.

ಮಧುಗಿರಿ-ಪಾವಗಡ ಕೆಶಿಪ್‌ ರಸ್ತೆಯನ್ನು 4 ಪಥದ ರಸ್ತೆಯನ್ನಾಗಿಸುವ ಚಿಂತನೆ ನಡೆದಿದೆ. ಪಾವಗಡ-ತುಮಕೂರು ಮುಖ್ಯ ರಸ್ತೆ ಪಕ್ಕದಲೇ ಎತ್ತಿನಹೊಳೆ ಪೈಪ್‌ ಲೈನ್‌ ಹಾದು ಹೋಗಿದ್ದು ಮುಂದೆ ಚತುಷ್ಪಥ ರಸ್ತೆಯಾದಾಗ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ದೊಡ್ಡೇರಿ ಹೋಬಳಿಯ 8 ಕೆರೆಗಳು ಸೇರಿ ತಾಲೂಕಿನ ಬಹುತೇಕ ಎಲ್ಲ ಕೆರೆಗಳಿಗೂ ನೀರು ಹರಿಸಲು ಕ್ರಮ ಕೈಗೊಳ್ಳಿ ಎಂದು ಸಹಾಯಕ ನಿರ್ದೇಶಕ ಮುರಳಿಗೆ ಸೂಚಿಸಿದರು.

ತಾಲೂಕಿನ ಎಲ್ಲ ಶಾಲಾ ಮಕ್ಕಳಿಗೆ ವಿದ್ಯೆಗೆ ಬೇಕಾದ ಎಲ್ಲ ಸವಲತ್ತುಗಳನ್ನು ಅಧಿಕಾರಿಗಳು ಒದಗಿಸಿಕೊಡಬೇಕು. 187 ಶಾಲಾ ಕಟ್ಟಡಗಳು ಶಿಥಿಲವಾಗಿವೆ. ಇವುಗಳ ದುರಸ್ತಿ ಮಾಡಲು ಆಗುವುದಿಲ್ಲ, ಈಚೆಗೆ ನಿರ್ಮಿಸಿರುವ 23 ಶಾಲಾ ಕಟ್ಟಡಗಳು ಫೆಬ್ರವರಿ ಅಂತ್ಯದೊಳೆಗೆ ಉದ್ಘಾಟನೆಯಾಗಲಿವೆ. ಈ ಹಿಂದೆ ಸರ್ಕಾರಿ ಶಾಲೆಯಲ್ಲಿ ಓದಿದ ಅಧಿಕಾರಿಗಳು ಖಾಸಗಿ ಕಂಪನಿಗಳ ಮಾಲೀಕರ ಹೆಸರು ಪಟ್ಟಿ ಮಾಡಿ ಅವರನ್ನು ಶಾಲಾ ಅಭಿವೃದ್ಧಿಗೆ ಬಳಸಿಕೊಳ್ಳಲು ಗಮನ ಹರಿಸಿ,ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅವರ ಪೋಷಕರು ಮತ್ತು ಮಕ್ಕಳಿಗೆ ಮನವೂಲಿಸಿ ಶಾಲೆಗೆ ಕಳಿಸುವಂತೆ ಸಲಹೆ ನೀಡಹಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ವಿದ್ಯಾರ್ಥಿ ವೇತನ ತಾಲೂಕಿನಲ್ಲಿ ಶೇ.100ರಷ್ಟು ವಿತರಿಸಲು ಮುಂದಾಗಬೇಕು. ಹಾಸ್ಟೆಲ್‌ಗಳಲ್ಲಿ ಮಕ್ಕಳ ಶಿಕ್ಷಣ ಕಲಿಕೆಗೆ ಕುಂದುಂಟಾಗ ಬಾರದು. ರಜೆ ವೇಳೆ ಮಕ್ಕಳ ಗಮನ ಬೇರೆ ಕಡೆ ಹೋಗದಂತೆ ನೋಡಿಕೊಳ್ಳಿ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಿ ಎಂದು ಬಿಸಿಎಂ ಅಧಿಕಾರಿ ಜಯರಾಂಗೆ ಸೂಚಿಸಿದರು.

ಜನವರಿ 10 ರಂದು ಜನಸಂಪರ್ಕ ಸಭೆ: ಬಡವನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜನವರಿ 10 ರಂದು ಜನಸಂಪರ್ಕ ಸಭೆ ನಡೆಸಲಾಗುವುದು. ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿಕೊಡಬೇಕೆಂದು ಸಚಿವ ಕೆ.ಎನ್‌.ರಾಜಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.ಗೃಹ ಲಕ್ಷ್ಮೀ ಯೋಜನೆಯಿಂದ ಹೊರಗುಳಿದಿರುವ ಮಹಿಳೆಯಿರಿಗೆ ಹಾಗೂ ಮನೆಯ ಯಜಮಾನಿ ಗುರುತಿಸಿ ಗೃಹಲಕ್ಷ್ಮೀ ಹಣ ದೊರಕುವಂತೆ ಕ್ರಮ ಕೈಗೊಳ್ಳಿ ಎಂದು ಸಿಡಿಪಿಓ ಅನಿತಾರವರಿಗೆ ಸೂಚಿಸಿದರು.

ಸ್ಥಳೀಯ ಗತ್ತಿಗೆದಾರರಿಗೆ ಮಾತ್ರ ಕಾಮಗಾರಿ ನೀಡಿ, ಹೊರಗಿನವರಿಗೆ ನೀಡಬೇಡಿ ಎಂದು ಸಚಿವ ರಾಜಣ್ಣ ಅಧಿಕಾರಿಗಳಿಗೆ ಖಡಕ್ಕಾಗಿ ಹೇಳಿದರು.

ಸಭೆಯಲ್ಲಿ ಎಂಎಲ್‌ಸಿ ಆರ್‌.ರಾಜೇಂದ್ರ ಎಸಿ ರಿಷಿಆನಂದ್‌, ತಹಸೀಲ್ದಾರ್‌ ಸಿಗ್ಬತವುಲ್ಲಾ, ಆಡಳಿತಾಧಿಕಾರಿ ರಂಗಪ್ಪ, ತಾಪಂ ಇಓ ಲಕ್ಷ್ಮಣ್‌ , .ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ಬಾಬು, ಟಿಎಪಿಸಿಎಂಎಸ್‌ ಅಧ್ಯಕ್ಷ ಮಲ್ಲಿಕಾರ್ಜುನಯ್ಯ,ಮುಖಂಡ ತುಂಗೋಟಿ ರಾಮಣ್ಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios