ಬೆಂಗಳೂರು(ಅ. 15)  ಮಹಾ ಮಳೆಗೆ ಸಿಲುಕಿರೋ ಜನರ ಸೇವೆಗೆ  ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ  ಮುಂದಾಗಿದೆ.  ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಳೆಗೆ ಸಿಲುಕಿ ಜೀವನ ನೆಡೆಸಲು ಕಷ್ಟ ಪಡುತ್ತಿರುವವರಿಗಾಗಿ ಸಹಾಯವಾಣಿ ಆರಂಭ  ಮಾಡಿದೆ.

6360334455 ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದ್ದು ಮುಖ್ಯವಾಗಿ ರಾಯಚೂರು, ಹುಬ್ಬಳ್ಳಿ, ಯಾದಗಿರಿ, ಕಲ್ಬುರ್ಗಿ ಜನರಿಗಾಗಿ ಸಹಾಯವಾಣಿ ತೆರೆಯಲಾಗಿದೆ. 
ಬದುಕು ನಡೆಸಲು ಕಷ್ಟ ಪಡುತ್ತಿರುವವರ ನೆರವಿಗೆ ಧಾವಿಸಿದ ಕಿಚ್ಚನ ಟ್ರಸ್ಟ್  ಈಗಾಗಲೇ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನ ಮಾಡಿದೆ.

ಹೃದಯ ಚಕ್ರವರ್ತಿ; ಆಟೋ ಚಾಲಕನ ತಂಗಿಗೆ ಅಣ್ಣನಾದ ಸುದೀಪ್

ಶುಲ್ಕ ಕಟ್ಟಲಾಗದ ವಿದ್ಯಾರ್ಥಿನಿಗೂ ನೆರವು ನೀಡಿತ್ತು. ಮದುವೆಗೆ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಕ್ಕೂ ಟ್ರಸ್ಟ್ ಹಣಕಾಸಿನ ನೆರವು ನೀಡಿತ್ತು.