ಮೈಸೂರು(ಆ.17): ಇತ್ತೀಚೆಗೆ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಪ್ರವಾಹದಿಂದ ಅಲ್ಲಿನ ಜನತೆ ತತ್ತರಿಸಿರುವ ಪರಿಸ್ಥಿತಿ ಉಂಟಾಗಿದ್ದು, ನೆರೆ ಸಂತ್ರಸ್ತರಿಗೆ ಕೆಜಿಎಫ್‌ ಗ್ರಾಮೀಣ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಗುಡ್‌ಲೈಫ್‌ ಹಾಲಿನ ಬಾಕ್ಸ್‌ಗಳನ್ನು ಪೂರೈಸಿದರು.

73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆಜಿಎಫ್‌ ತಾಲೂಕಿನ ಘಟ್ಟಮಾದಮಂಗಲ ಗ್ರಾಪಂ ವ್ಯಾಪ್ತಿಯ ಕೆಂಪಾಪುರ, ಕಲುವಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಂದ ನೆರೆ ಸಂತ್ರಸ್ತರಿಗೆ ಸುಮಾರು 40 ಸಾವಿರ ಮೌಲ್ಯದ 135 ಕೆಎಂಎಫ್‌ ಡೈರಿಯ ಗುಡ್‌ಲೈಫ್‌ ಹಾಲಿನ ಬಾಕ್ಸ್‌ಗಳನ್ನು ಪೂರೈಸಲಾಯಿತು.

ಕೋಲಾರ: ಕಾಲೇಜಿನಿಂದ ಹೊರಗೆಳೆದು ಉಪನ್ಯಾಸಕಗೆ ಥಳಿತ

ಈ ಸಂದರ್ಭದಲ್ಲಿ ಕೆಂಪಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಾದ ಶಿವಕುಮಾರ್‌, ಜಯರಾಮರೆಡ್ಡಿ, ಸುಬ್ರಮಣಿ, ಮುರಳಿ, ರಘು, ಸುನೀಲ್‌, ದೇವರಾಜ್‌, ಶಿವಶಂಕರ್‌, ಮಹೇಶ್‌ ಮುಂತಾದವರು ಹಾಜರಿದ್ದರು.