ಕರ್ನಾಟಕದ ಸರಕು ವಾಹನಗಳಿಗೆ ಕೇರಳ ಪ್ರವೇಶ ತಡೆ
ಕರ್ನಾಟಕದ ಸರಕು ವಾಹನಗಳಿಗೆ ಕಾಸರಗೋಡು ಜಿಲ್ಲೆಗೆ ಪ್ರವೇಶ ನಿಬಂಧಿಸಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. ಕರ್ನಾಟಕದಿಂದ ವಾಹನಗಳಲ್ಲಿ ಬರುವ ಸರಕನ್ನು ಗಡಿಯಲ್ಲಿ ಕಾಸರಗೋಡಿನ ವಾಹನಗಳಿಗೆ ತುಂಬಿಸಬೇಕು.
ಮಂಗಳೂರು(ಜು.23): ಕರ್ನಾಟಕದ ಸರಕು ವಾಹನಗಳಿಗೆ ಕಾಸರಗೋಡು ಜಿಲ್ಲೆಗೆ ಪ್ರವೇಶ ನಿಬಂಧಿಸಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. ಕರ್ನಾಟಕದಿಂದ ವಾಹನಗಳಲ್ಲಿ ಬರುವ ಸರಕನ್ನು ಗಡಿಯಲ್ಲಿ ಕಾಸರಗೋಡಿನ ವಾಹನಗಳಿಗೆ ತುಂಬಿಸಬೇಕು.
ಸರಕು ತರುವ ಕಾಸರಗೋಡಿನ ವಾಹನ ಚಾಲಕ, ಸಿಬ್ಬಂದಿ ವಾರಕ್ಕೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೊಳಗಾಗಿ ಕೋವಿಡ್ ಲಕ್ಷಣ ಹೊಂದಿಲ್ಲ ಎಂದು ಸರ್ಟಿಫಿಕೇಟ್ ಪಡೆಯಬೇಕು ಎಂದು ಸೂಚಿಸಿದ್ದಾರೆ.
ತಹಸೀಲ್ದಾರ್ ನೇತೃತ್ವದಲ್ಲಿ ನಿಧಿ ಶೋಧ..!
ತರಕಾರಿ, ಹಣ್ಣು ಹಂಪಲು ಮತ್ತು ಮೀನು ಹೇರಿಕೊಂಡು ಬರುವ ವಾಹನಗಳಲ್ಲಿನ ಸರಕುಗಳನ್ನು ಗಡಿ ಪ್ರದೇಶಗಳಲ್ಲಿ ಕೇರಳದ ವಾಹನಗಳಿಗೆ ಹಸ್ತಾಂತರಿಸಬೇಕು. ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ, ನಿಬಂಧನೆ ಪಾಲಿಸಿ ಸರಕನ್ನು ಹಸ್ತಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.