ಬೆಂಗಳೂರು(ಫೆ.22): ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಚರ್ಚ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಅಲೆಕ್ಸ್‌ (28), ದೀಪು ರಾಜ್‌ (29) ಮತ್ತು ಮೊಹಮ್ಮದ್‌ ಮುಕ್ತಾರ್‌ (27) ಬಂಧಿತರು. ಆರೋಪಿಗಳಿಂದ 6.1 ಕೆ.ಜಿ. ಗಾಂಜಾ, 100 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿಗಳು ಹೊರಗಿನಿಂದ ಗಾಂಜಾ ತರಿಸಿಕೊಂಡು ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಅಲ್ಲದೆ, ಈ ಹಿಂದೆ ಮಂಗಳೂರಿನ ಅಲೋಶಿಯಸ್‌ ಕಾಲೇಜಿನ ಬಳಿಯ ಚಚ್‌ರ್‍ ಮತ್ತು ಕೆಂಗೇರಿ ಉಪನಗರದ ಬೆಥೇಸ್ತಾ ಚಚ್‌ರ್‍ನ ಬಾಗಿಲು ಮುರಿದು ಕಳವು ಮಾಡಿದ್ದರು. ನಗರದ ಕೆಎಲ್‌ಇ ಡೆಂಟಲ್‌ ಕಾಲೇಜಿನ ಹಿಂಭಾಗದಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡಲು ಯತ್ನಿಸುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"