*   ಧರ್ಮ ಒಡೆಯಬಾರದೆಂಬ ನಂಬಿಕೆ ನನ್ನದು: ಡಿಕೆಶಿ*  ವೀರಶೈವ ಧರ್ಮದಿಂದ ಜಗಕ್ಕೆ ಶಾಂತಿ ಎಂಬ ಉದ್ದೇಶದಿಂದ ಪಂಚಪೀಠ ಸ್ಥಾಪನೆ*  ಯಾವ ಧರ್ಮವನ್ನೂ ಒಡೆಯಬಾರದು 

ಬೆಂಗ​ಳೂ​ರು(ಏ.17):  ಉತ್ತರಾಖಂಡದ ಕೇದಾರನಾಥ ಪೀಠದ ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ(Bhimashankar Linga Shivacharya Swamiji) ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಅವರ ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್‌ ದಂಪತಿ ಸ್ವಾಮೀಜಿ ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು.

ತಮ್ಮ ಶಿಷ್ಯರೊಂದಿಗೆ ಆಗಮಿಸಿದ ಸ್ವಾಮೀಜಿ ಅವರನ್ನು ಬರಮಾಡಿಕೊಂಡ ದಂಪತಿ ಭಕ್ತಿಯಿಂದ ಪಾದಪೂಜೆ ನೆರವೇರಿಸಿದರು. ಬಳಿಕ ದಂಪತಿಗೆ ಹಾರ ಹಾಕಿ ಪ್ರಸಾದ ನೀಡಿ ಸ್ವಾಮೀಜಿ ಆಶೀರ್ವದಿಸಿದರು. ಈ ವೇಳೆ ಸಂಸದ ಡಿ.ಕೆ.ಸುರೇಶ್‌(DK Suresh) ಕೂಡ ಹಾಜರಿದ್ದು, ಶ್ರೀಗಳ ಪಾದಗಳಿಗೆ ಎರಗಿ ಆಶೀರ್ವಾದ ಪಡೆದರು.

'ಸಂತೋಷ ಸಾವಿಗೂ ಡಿಕೆಶಿ, ಹೆಬ್ಬಾಳ್ಕರ್‌ಗೂ ಏನು ಸಂಬಂಧ?'

ಶ್ರೀಗಳ ಭೇಟಿ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಮಾನವ ಧರ್ಮಕ್ಕೆ ಜಯವಾಗಲಿ, ವೀರಶೈವ ಧರ್ಮದಿಂದ ಜಗಕ್ಕೆ ಶಾಂತಿ ಎಂಬ ಉದ್ದೇಶದಿಂದ ಪಂಚಪೀಠ ಸ್ಥಾಪನೆಯಾಗಿದೆ. ನಾನು ವೀರಶೈವ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಿದ್ದೆ. ಅದಕ್ಕೆ ಮೆಚ್ಚಿ ಶ್ರೀಗಳು ನನ್ನ ಮನೆಗೆ ಬಂದಿದ್ದರು. ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದಿದ್ದೇನೆ. ನಾನು ಯಾವತ್ತೂ ನಮ್ಮ ಪರಂಪರೆ, ಸಂಸ್ಕೃತಿ ಇತಿಹಾಸದ ಬಗ್ಗೆ ಗೌರವವನ್ನು ಇಟ್ಟುಕೊಂಡಿದ್ದೇನೆ. ಯಾವ ಧರ್ಮವನ್ನೂ ಒಡೆಯಬಾರದು ಎಂಬುದು ನನ್ನ ನಂಬಿಕೆ ಎಂದರು.

ಈ ವರ್ಷ ಕೇದಾರನಾಥ ದೇವಾಲಯ(Kedarnanth Temple) ಆರಂಭವಾಗುವಾಗ ನಾನು ಕೂಡ ಭಾಗಿಯಾಗಬೇಕು ಎಂದು ಸ್ವಾಮೀಜಿಗಳು ಆಹ್ವಾನ ಕೊಟ್ಟಿದ್ದಾರೆ. ಉಳಿದಂತೆ ಇತರೆ ವಿಚಾರಗಳನ್ನು ಮಾತನಾಡಿದ್ದು, ಅವುಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದರು.

ಹಲಾಲ್‌ ಎಂಬ ಬಿಜೆಪಿಗರು ಈಗ ಚುನಾವಣೆಗೆ ಬರಲಿ, ಡಿಕೆಶಿ ಸವಾಲ್!

ಡಿಕೆಶಿ ಬಗ್ಗೆ ಬೇಗ ಎಚ್ಚೆತ್ತುಕೊಳ್ಳಿ, ನಿಮಗೂ ಖೆಡ್ಡಾ ತೋಡ್ಬಹುದು: ಸಿದ್ದುಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

ದಾವಣಗೆರೆ: ಎದುರಾಳಿಗಳ ವಿರುದ್ಧ ರಣರಂಗದಲ್ಲಿ ಹೋರಾಡುವ ಬದಲು "ವ್ಯವಸ್ಥಿತ ಜಾಲ" ರೂಪಿಸಿಕೊಂಡು ಖೆಡ್ಡಾಕ್ಕೆ ಬೀಳಿಸಲು ನುರಿತ ತಂಡವನ್ನು ಕಟ್ಟಿಕೊಂಡಿದ್ದಾರೆ. ಹಗಲು ಕಂಡು ಇರುಳಿನಲ್ಲಿ ಬಾವಿಗೆ ಬೀಳಬೇಡಿ ಸಿದ್ದರಾಮಯ್ಯನವರೇ. ಕುರ್ಚಿಗಾಗಿ ಏನು ಬೇಕಾದರೂ ಮಾಡುವ ಜಾಯಮಾನ ನಮ್ಮದು ಎಂಬುದನ್ನು "ಬಂಡೆಯ " ಇತಿಹಾಸವೇ ಹೇಳುತ್ತದೆ. ಮುಂದಿನ ದಿನಗಳಲ್ಲಿ ಇದು ನಿಮ್ಮ ಕೊರಳಿಗೆ ಉರುಳಾದರೂ ಅಚ್ಚರಿಯಿಲ್ಲ. ಬೇಗ ಎಚ್ಚೆತ್ತುಕೊಳ್ಳಿ ಅಂತ ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ(MP Renukacharya) ಎಚ್ಚರಿಕೆಯ ಗಂಟೆ ರವಾನಿಸಿದ್ದಾರೆ. 

ಶುಕ್ರವಾರ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಡಿಕೆಶಿ(DK Shivakumar) ಬಗ್ಗೆ ಹುಷಾರಾಗಿರಿ ಸಿದ್ದರಾಮಯ್ಯನವರಿಗೆ(Siddaramaiah) ಅಂತ ಎಚ್ಚರಿಕೆ ನೀಡಿದ್ದಾರೆ.