ಮೂಲ್ಕಿ(ಮೇ 22): ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ಮಂಡಳಿಯ ಎಲ್ಲಾ ಆರು ಮೇಳಗಳ 2019-20ರ ಸಾಲಿನ ತಿರುಗಾಟದ ಕೊನೆಯ ಪ್ರದರ್ಶನವು ಪತ್ತನಾಜೆಯ ಮಾರನೇ ದಿನ ನಡೆಯುತ್ತಿತ್ತು.

ಈ ಬಾರಿ ಕೊರೋನಾದಿಂದಾಗಿ ಮಾ. 18ರಿಂದ ಯಕ್ಷಗಾನ ಬಯಲಾಟ ತಿರುಗಾಟ ನಿಂತಿದ್ದು, ಮಾ. 19ರಿಂದ ಕೆಲವು ದಿನಗಳ ಕಾಳ ಕಟೀಲು ರಥ ಬೀದಿಯಲ್ಲಿ ಆ ಬಳಿಕ ಚೌಕಿಯಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಭಕ್ತರ ಅನುಪಸ್ತಿತಿಯಲ್ಲಿ ಸಾಂಪ್ರದಾಯಿಕವಾಗಿ ಸೇವೆ ನಡೆಯುತ್ತಿತ್ತು.

ಇಸ್ಫೋಸಿಸ್‌ನಿಂದ 1.5 ಕೋಟಿ ರು. ಸಲಕರಣೆ ವಿತರಣೆ

ಮೇ 25ರಂದು ದೇವಿಯ ಸನ್ನಿಧಿಯಲ್ಲಿ ಭಕ್ತರ ಅನುಪಸ್ಥಿತಿಯಲ್ಲಿ, ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಬೆರಳೆಣಿಕೆಯ ಕಲಾವಿದರ ಉಪಸ್ಥಿತಿಯಲ್ಲಿ ಗೆಜ್ಜೆ ಬಿಚ್ಚಿ ಮೇಳ ಒಳಗೆ ಸೇರುವ ಸಂಪ್ರದಾಯ ನಡೆಯಲಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಕಟೀಲು ದೇವಳದ ಎಲ್ಲಾ ಆರು ಮೇಳಗಳ ಕಲಾವಿದರಿಗೆ ದೇವಳದ ವತಿಯಿಂದ ಹಾಗೂ ಮೇಳದ ಸಂಚಾಲಕರ ಸಹಕಾರದೊಂದಿಗೆ ಕಲಾವಿದರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ಲಾಕ್‌ಡೌನ್‌ನ 67 ದಿನಗಳಲ್ಲಿ ಪ್ರತಿದಿನ ತಲಾ 6 ಪ್ರದರ್ಶನದಂತೆ 492 ಪ್ರದರ್ಶನಗಳು ರದ್ದಾಗಿದ್ದು, ಹೆಚ್ಚಿನ ಕಲಾವಿದರಿಗೆ ಈಗಾಗಲೇ ಮುಂಗಡ ಪಾವತಿ ಮಾಡಲಾಗಿದೆ. ಉಳಿದವರಿಗೆ ಶೀಘ್ರದಲ್ಲಿ ಪಾವತಿ ಪ್ರಕ್ರಿಯೆ ನಡೆಯಲಿದೆ.