ಕಾರವಾರ (ಫೆ.13):  ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಅಪರಿಚಿತರರಿಂದ ಬಂದಿದ್ದ ಇ-ಮೇಲ್‌ ಸಂದೇಶವನ್ನು ನಂಬಿದ್ದ ಯುವತಿಯೊಬ್ಬರು ಬರೋಬ್ಬರಿ 57.14 ಲಕ್ಷ ರು. ಕಳೆದುಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. 

ಹೊನ್ನಾವರ ತಾಲೂಕಿನ ನೇತ್ರಾವತಿ ಹಣ ಕಳೆದುಕೊಂಡವರು. ನರ್ಸಿಂಗ್‌ ಕೋರ್ಸ್‌ ಅಧ್ಯಯನ ಮಾಡಿರುವ ಇವರು, ಕೆಲವು ವರ್ಷ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗ ಮಾಡಿ, ತಮ್ಮೂರಿಗೆ ವಾಪಸ್‌ ಆಗಿದ್ದರು. ಬೇರೆ ಕೆಲಸದ ಹುಡುಕಾಟದಲ್ಲಿದ್ದರು. ಈ ಸಂದರ್ಭದಲ್ಲಿ ಉದ್ಯೋಗಕ್ಕೆ ಸಂಬಂಧಿಸಿ ಇ- ಮೇಲ್‌ ಬಂದಿದ್ದು, ಅವರು ಹೇಳಿದಂತೆ ವಾಟ್ಸಾಪ್‌ನಲ್ಲಿ ಪರೀಕ್ಷೆ ಬರೆದು ದಾಖಲೆಗಳನ್ನೂ ನೀಡಿದ್ದಾರೆ. ಬಳಿಕ ನೇತ್ರಾವತಿ ಅವರಿಂದ ವಿವಿಧ ಬ್ಯಾಂಕ್‌ ಖಾತೆಗಳಿಗೆ 2020ರ ಆ.13ರಿಂದ 2021ರ ಜ.17ರ ತನಕ ಒಟ್ಟು 57.14 ಲಕ್ಷ ರು. ಜಮೆ ಮಾಡಿಸಿಕೊಂಡಿದ್ದಾರೆ. ಇದೀಗ ತಾವು ಮೋಸ ಹೋಗಿದ್ದು ಅರಿವಿಗೆ ಬಂದಿದೆ. ಇಲ್ಲಿನ ಸೈಬರ್‌ ಕ್ರೈಮ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮನೆಗೆ ಬಾರದ ಗಂಡ : ಇತ್ತ ಕೊನೆಯಾದ ಸುರಸುಂದರಿ ಹೆಂಡತಿ ಬದುಕು

ಈಕೆಗೆ ಉತ್ತರ ಪತ್ರಿಕೆ ತಲುಪಿದ ಬಳಿಕ ಆರೋಪಿಗಳು ವೀಸಾ, ವೈದ್ಯಕೀಯ ಪ್ರಮಾಣಪತ್ರ, ನಿರಾಕ್ಷೇಪಣಾ ಪತ್ರ, ಆರೋಗ್ಯ ವಿಮೆ ಮುಂತಾದವುಗಳಿಗೆ ಶುಲ್ಕ, ತೆರಿಗೆ ಪಾವತಿಸಲು ಹೇಳಿದ್ದರು. ಉದ್ಯೋಗದ ಆಸೆಯಿಂದ ಬ್ಯಾಂಕ್‌, ಸಂಬಂಧಿಕರು, ಪರಿಚಯಸ್ಥರಲ್ಲಿ ಸಾಲಸೋಲ ಮಾಡಿದ ಈಕೆ ಆರೋಪಿಗಳು ನೀಡಿದ್ದ ವಿವಿಧ ಬ್ಯಾಂಕ್‌ ಖಾತೆಗಳಿಗೆ 2020ರ ಆ.13ರಿಂದ 2021ರ ಜ.17ರ ತನಕ ನೇತ್ರಾವತಿ ಒಟ್ಟು 57.14 ಲಕ್ಷ ಜಮೆ ಮಾಡಿದ್ದಾರೆ.

6 ತಿಂಗಳ ಅವಧಿಯಲ್ಲಿ ಹಲವು ಬಾರಿ ಹಣ ಪಾವತಿಸಿದ್ದರೂ ನೇಮಕಾತಿ ಆದೇಶ ಬಂದಿರಲಿಲ್ಲ. ಸಂಬಂಧಿತ ಸಂಖ್ಯೆಗೆ ಕರೆ ಮಾಡಿದರೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರಿಂದ ಅವರಿಗೆ ತಾವು ಮೋಸ ಹೋಗಿದ್ದು ಅರಿವಿಗೆ ಬಂದಿದೆ. ಇಲ್ಲಿನ ಸೈಬರ್‌ ಕ್ರೈಮ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.