Asianet Suvarna News Asianet Suvarna News

ಕರ್ನಾಟಕದ ಸಬ್ಸಿಡಿ ಬೀಜ ಮಹಾರಾಷ್ಟ್ರ ಪಾಲು..!

*  ರೈತರ ಹೆಸರಿನಲ್ಲಿ ಸಬ್ಸಿಡಿಯಲ್ಲಿ ಬಿತ್ತನೇ ಬೀಜ ಪಡೆದು ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ 
*  ಕಾಳಸಂತೆ ವ್ಯವಹಾರಕ್ಕೆ ಎಡೆ ಮಾಡಿಕೊಟ್ಟ ಸರ್ಕಾರದ ಅಸ್ಪಷ್ಟ ನೀತಿ
*  ಜೋಳ, ಕಡಲೆ, ಗೋದಿ ಬೀಜಗಳ ವಿತರಣೆ ಆರಂಭ 
 

Karnataka Subsidy Seed Sale to Maharashtra grg
Author
Bengaluru, First Published Oct 14, 2021, 2:26 PM IST
  • Facebook
  • Twitter
  • Whatsapp

ಸಿ.ಎ.ಇಟ್ನಾಳಮಠ 

ಅಥಣಿ(ಅ.14):  ರೈತರಿಗೆ(Farmers) ಹೊರೆಯಾಗಬಾರದು ಎಂದು ಕರ್ನಾಟಕ ಸರ್ಕಾರ(Government of Karnataka) ರೈತರಿಗೆ ಸಬ್ಸಿಡಿ(Subsidy Seed) ದರದಲ್ಲಿ ಬಿತ್ತನೆ ಬೀಜಗಳನ್ನು ನೀಡುತ್ತಿದೆ. ಹೀಗೆ ಸಬ್ಸಿಡಿಯಲ್ಲಿ ಪಡೆದುಕೊಂಡ ಬೀಜಗಳು ಇದೀಗ ನೆರೆ ಮಹಾರಾಷ್ಟ್ರಕ್ಕೆ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ.

ಕಬ್ಬು ಮತ್ತು ದ್ರಾಕ್ಷಿ ಬೆಳೆಯುವ ರೈತರು ಕೆಲವು ಬೆಳೆಗಳನ್ನು ಬೆಳೆಯುವುದಿಲ್ಲ. ಅಂತವರು ತಮ್ಮ ಹೆಸರಿನಲ್ಲಿ ಸರ್ಕಾರ ನೀಡುವ ಬೇರೆ ಬೆಳೆಗಳ ಬೀಜಗಳನ್ನು ಖರೀದಿ ಮಾಡಿ ಏಜೆಂಟರ ಮೂಲಕ ನೆರೆ ಮಹಾರಾಷ್ಟ್ರಕ್ಕೆ(Maharashtra) ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇದು ಕೇವಲ ಅಥಣಿಯಂತಹ(Athani) ಪ್ರದೇಶಗಳಲ್ಲಿ ನಡೆಯುವುದಿಲ್ಲ. ಬಹುತೇಕ ರಾಜ್ಯದ ಗಡಿಭಾಗದಲ್ಲಿ(Border) ಇದು ಕಂಡು ಬರುತ್ತಿದೆ ಎನ್ನಲಾಗಿದೆ.

ಸರ್ಕಾರಕ್ಕೆ ಮೋಸ:

ಸರ್ಕಾರದ ಅಸ್ಪಷ್ಟ ನೀತಿಯೇ ಈ ಕಾಳಸಂತೆ ವ್ಯವಹಾರಕ್ಕೆ ಎಡೆ ಮಾಡಿಕೊಟ್ಟಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಅಂದರೆ ಯಾವ ರೈತ ಬೀಜವನ್ನು(Seed) ಖರೀದಿಸುತ್ತಾನೆ ಆತ ಅವುಗಳನ್ನು ತನ್ನ ಹೊಲದಲ್ಲಿ ಬಿತ್ತನೆ ಮಾಡಿದ್ದಾನೆಯೋ, ಇಲ್ಲವೋ ಎಂಬ ದಾಖಲೆಗಳನ್ನು(Documentation) ಇಡುವ ವ್ಯವಸ್ಥೆ ಸರ್ಕಾರದಲ್ಲಿ ಇಲ್ಲ. ಇದಷ್ಟೇ ಅಲ್ಲ ರೈತರು ಸಬ್ಸಿಡಿ ದರದಲ್ಲಿ ಪಡೆದುಕೊಂಡ ಬೀಜಗಳನ್ನು ತಮ್ಮ ಹೊಲದಲ್ಲಿ(Land) ಬಿತ್ತನೇ ಮಾಡಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಮಾಡಲು ಜಿಪಿಎಸ್‌(GPS) ಅನ್ನು ಮಾಡುವುದಿಲ್ಲ. ಹೀಗಾಗಿಯೇ ರೈತರು ಸರ್ಕಾರದ ಸಬ್ಸಿಡಿ ದರದಲ್ಲಿ ಪಡೆದುಕೊಂಡ ಬೀಜಗಳನ್ನು ನೆರೆಯ ಮಹಾರಾಷ್ಟ್ರಕ್ಕೆ ಎಗ್ಗಿಲ್ಲದೇ ಮಾರಾಟ ಮಾಡುತ್ತಿದ್ದಾರೆ.

ಕಲಬುರಗಿ: ನಕಲಿ ಹೆಸರು ಬೀಜದ ದಂಧೆಗೆ ರೈತ ಪರೇಶಾನ್‌..!

ಅಧಿಕಾರಿಗಳ ನಿರ್ಲಕ್ಷ್ಯ:

ಪ್ರತಿವರ್ಷ ಗ್ರಾಮ ಲೆಕ್ಕಾಧಿಕಾರಿಗಳು ರೈತರ ಹೊಲಗಳಿಗೆ ಹೋಗಿ ಯಾವ ಯಾವ ಬೆಳೆಯನ್ನು ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದಾರೆ ಎಂಬುವುದರ ಬಗ್ಗೆ ಪ್ರತ್ಯಕ್ಷ ಭೇಟಿ ಮಾಡಿ ಆಸ್ತಿ ಪತ್ರದಲ್ಲಿ ಬೆಳೆ ಕಾಲಂದಲ್ಲಿ ದಾಖಲೆ ಮಾಡಬೇಕು. ಆದರೆ, ಅಧಿಕಾರಿಗಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ರೈತರ ಹೊಲಗಳಿಗೆ ಭೇಟಿ ನೀಡುವುದು ದೂರದ ಮಾತು, ರೈತರಿಗೆ ಕೊಟ್ಟ ಬೀಜವನ್ನು ಅವರು ಬಿತ್ತನೇ ಮಾಡಿದ್ದಾರೋ ಇಲ್ಲವೋ ಎಂಬುವುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುತ್ತಿಲ್ಲ.

ಈ ಬಾರಿ ಖರೀದಿ ಕಡಿಮೆ:

ಕಳೆದ ವರ್ಷದ ಖರೀದಿ ಗಮನಿಸಿದರೆ ಈ ವರ್ಷ ಖರೀದಿ ಕಡಿಮೆ ಆಗಿದೆ. ಏಕೆಂದರೆ ಕಳೆದ ವರ್ಷ ಯಾವುದೇ ದಾಖಲೆ ಇಲ್ಲದೇ ಕೇವಲ ಹೆಸರು ಬರೆದು ಬೀಜ ವಿತರಣೆ ಮಾಡುತ್ತಿದ್ದರು. ಈ ವರ್ಷ ಖರೀದಿಗೆ ಬರುವವರು ಆಧಾರ್‌ ಕಾರ್ಡ್‌(Aadharcard), ಆಸ್ತಿ ಉತಾರ ಕಡ್ಡಾಯವಾಗಿ ತರುವುದನ್ನು ಮಾಡಿದ್ದಾರೆ. ಇದರಿಂದ ಈ ಸಾರಿ ಸಬ್ಸಿಡಿ ದರದಲ್ಲಿ ಬೀಜ ಖರೀದಿಗೆ ಬರುವವ ಸಂಖ್ಯೆ ಕಡಿಮೆಯಾಗಿದೆ.

ಹಿಂಗಾರು ಬಿತ್ತನೆ:

ಹಿಂಗಾರು ಬಿತ್ತನೆ(Sowing of Hingaru) ಕಾರ್ಯ ಆರಂಭವಾಗಿದೆ. ಅದಕ್ಕಾಗಿ ಜೋಳ, ಕಡಲೆ, ಗೋದಿ ಬೀಜಗಳ ವಿತರಣೆ ಆರಂಭವಾಗಿದೆ. ತಾಲೂಕಿನ ಅನಂತಪೂರ, ಮದಭಾಂವಿ, ಸಂಬರಗಿ, ಸಂಕೋನಹಟ್ಟಿ, ತೆಲಸಂಗ, ಐಗಳಿ, ಕನಾಳ, ಕಕಮರಿ, ಬಡಚಿ, ನಂದಗಾಂವ, ಕಾಗವಾಡ ಉಗಾರ (ಕೆ.ಎಚ್‌.) ಐನಾಪೂರ ಮತ್ತು ಅಥಣಿ ನಗರ ಪ್ರದೇಶಗಳಲ್ಲಿ ಬೀಜವನ್ನು ಕೃಷಿ ಇಲಾಖೆ ವಿತರಿಸುತ್ತಿದ್ದಾರೆ. ಸಬ್ಸಿಡಿ ದರದಲ್ಲಿ ಬೀಜ ಪಡೆದು ನೆರೆಯ ಮಹಾರಾಷ್ಟ್ರಕ್ಕೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ವಿಷಯವನ್ನು ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಇಂತಹ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಕಠಿಣ ನಿರ್ಬಂಧಗಳನ್ನು ಜಾರಿಗೆ ತರಬೇಕಿದೆ.

ಕೆಲವೆ ದಿನಗಳ ಹಿಂದೆ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಈ ವಿಷಯವನ್ನು ಕೆಲವರು ಮೌಖಿಕವಾಗಿ ಹೇಳಿದ್ದಾರೆ. ನಾನು ಕಂದಾಯ ವಿಭಾಗ ಮಟ್ಟದ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದೇನೆ. ಇಂತಹ ಪ್ರಕರಣಗಳ ಬಗ್ಗೆ ಗಮನ ಇರಲಿ. ತಪ್ಪು ಮಾಡುವವರು ಸಿಕ್ಕಿ ಬಿದ್ದರೆ ಅವರ ವಿರುದ್ಧ ದೂರು ದಾಖಲೆ ಮಾಡಲು ಹೇಳಿದ್ದೇನೆ ಎಂದು ಕೃಷಿ ಇಲಾಖೆ(Department of Agriculture) ಉಪ ನಿರ್ದೇಶಕ ಎಂ.ಎಸ್‌.ಗುಂಜಿಗಾಂವಿ ತಿಳಿಸಿದ್ದಾರೆ.
 

Follow Us:
Download App:
  • android
  • ios