ಬೆಂಗಳೂರಲ್ಲಿ ಒಂದೇ ದಿನ ದಾಖಲೆಯ 22596 ಕೇಸ್‌| ಈವರೆಗಿನ ದಾಖಲೆ| ಏಕದಿನ 137 ಮಂದಿ ಸಾವು

ಬೆಂಗಳೂರು(ಏ.29): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌-19 ಪ್ರಕರಣಗಳ ರುದ್ರನರ್ತನ ಮುಂದುವರೆದಿದ್ದು, ಬುಧವಾರ ದಾಖಲೆಯ 22,596 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಹಾಗೆಯೇ 137 ಮಂದಿ ಕೊರೋನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಏಪ್ರಿಲ್‌ 25ರಂದು 20,733 ಮಂದಿಯಲ್ಲಿ ಕೋವಿಡ್‌ ದೃಢಪಟ್ಟು ದಾಖಲೆ ನಿರ್ಮಾಣವಾಗಿತ್ತು. ಆ ದಾಖಲೆ ಈಗ ಮುರಿದುಬಿದ್ದಿದೆ. ಬುಧವಾರ ರಾಜ್ಯದಲ್ಲಿ ಪತ್ತೆಯಾದ ಒಟ್ಟು ಸೋಂಕಿತರಲ್ಲಿ ಶೇ.57ರಷ್ಟುಬೆಂಗಳೂರು ನಗರದಲ್ಲೇ ಪತ್ತೆಯಾಗಿದ್ದು, ರಾಜ್ಯ ರಾಜಧಾನಿ ಅಕ್ಷರಶಃ ರಾಜ್ಯದ ಕೊರೋನಾ ರಾಜಧಾನಿಯ ರೂಪ ಪಡೆದಿದೆ.

"

ಸದ್ಯ 2.24 ಲಕ್ಷ ಸಕ್ರಿಯ ಪ್ರಕರಣಗಳಿದ್ದು 842 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳಲ್ಲಿ ಮೂರನೇ ಎರಡರಷ್ಟುಬೆಂಗಳೂರಿನಲ್ಲೇ ಇದೆ. ಬುಧವಾರ 4,530 ಮಂದಿ ಗುಣಮುಖರಾಗಿದ್ದಾರೆ.

ಸಾವು 2ನೇ ಗರಿಷ್ಠ:

ಇದೇ ವೇಳೆ 137 ಮಂದಿ ಮೃತರಾಗಿದ್ದು ಒಂದೇ ದಿನದಲ್ಲಿ ವರದಿಯಾದ ಎರಡನೇ ಗರಿಷ್ಠ ಸಾವಿನ ಪ್ರಕರಣ. ಏಪ್ರಿಲ್‌ 24 ರಂದು ಒಂದೇ ದಿನ 149 ಮಂದಿ ಮರಣವನ್ನಪ್ಪಿದ್ದರು. ಈವರೆಗೆ ಒಟ್ಟು 6,139 ಮಂದಿ ಕೋವಿಡ್‌ನಿಂದ ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ ಒಟ್ಟು 7.10 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 4.80 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona