ಬೆಂಗಳೂರು[ಆ.10]: ರಾಷ್ಟ್ರಗೀತೆಯನ್ನು ಯಾವುದೇ ತಪ್ಪಿಲ್ಲದಂತೆ ಸರಿಯಾಗಿ ಹಾಡುವಂತೆ  ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಗಸ್ಟ್ 15 ಸ್ವಾತಂತ್ರ ದಿನಾಚರಣೆಯಂದು ಸಮಾಜದ ಗಣ್ಯರಿಂದ ಅಭಿಯಾನ ಆರಂಭವಾಗಲಿದೆ.

ಇಂದಿರಾ ಫೌಂಡೇಷನ್ ಹಾಗೂ ರಾಷ್ಟ್ರಗೀತೆ ಜಾಗೃತಿ ಅಭಿಯಾನ ಸಮಿತಿ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದು ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ  ಪ್ರಚಾರದ ನೇತೃತ್ವ ವಹಿಸಲಿದ್ದಾರೆ.  ಕನ್ನಡದ ಖ್ಯಾತ ಸಂಗೂತ ನಿರ್ದೇಶಕ ಹಂಸಲೇಖ ಅವರು ಬಾವುಟ ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. 

ಅಭಿಯಾನಕ್ಕಾಗಿಯೇ ವಿಶೇಷ ರಥ ಸಿದ್ಧಪಡಿಸಲಾಗಿದ್ದು, ರಾಷ್ಟ್ರಗೀತೆಯನ್ನು ಸರಿಯಾಗಿ ಉಚ್ಛರಿಸುವಂತೆ ಬೆಂಗಳೂರು ಜನಗಳಲ್ಲಿ ತಿಳಿಸಲಾಗುತ್ತದೆ. ರಥವು ನಗರದಾದ್ಯಂತ 40 ಕಿ.ಮೀ ಸಂಚರಿಸಲಿದ್ದು, 72 ಪ್ರಮುಖ ಸ್ಥಳಗಳಲ್ಲಿ ಜನಗಣಮನದ  ಬಗ್ಗೆ ಮಾಹಿತಿ ನೀಡುವುದರ ಜೊತೆ ಕನ್ನಡ ಹಾಗೂ ಆಂಗ್ಲ ರೂಪಿಕೆಯ ಗೀತೆಯ ಸಂಕ್ಷಿಪ್ತ ಮಾಹಿತಿ ಪೀಠಿಕೆಯನ್ನು ನೀಡಲಾಗುತ್ತದೆ. ಮಾಜಿ ಲೋಕಾಯುಕ್ತರ ಜೊತೆ ಖ್ಯಾತ ಗಾಯಕರು, ಸಂಗೀತ ನಿರ್ದೇಶಕರು ಹಾಗೂ ಜಾನಪದ ಹಾಡುಗಾರರು ಪಾಲ್ಗೊಳ್ಳಲಿದ್ದಾರೆ.

ಬಹುತೇಕರಿಗೆ ರಾಷ್ಟ್ರಗೀತೆ ಹಾಗೂ ನಾಡಗೀತೆಯ ಬಗ್ಗೆ ಹೆಚ್ಚು ಅರಿವಿಲ್ಲ. ಸರಿಯಾಗಿ ಉಚ್ಚರಿಸಲು ಬರುವುದಿಲ್ಲ. ಕಳೆದ ವರ್ಷ ನವೆಂಬರ್ 1 ರಂದು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯ ಸ್ಥಾನದಲ್ಲಿದ್ದ ಜನಪ್ರತಿನಿಧಿಗಳು ನಾಡಗೀತೆಯ ಮೊದಲ ಸಾಲನ್ನು ಹಾಡಲು ತಡವರಿಸುತ್ತಿದ್ದರು.

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : Karnataka's former Lokayukta leads campaign to prevent incorrect singing of Jana Gana Mana