Asianet Suvarna News Asianet Suvarna News

ಶಿರಹಟ್ಟಿ: ಕಪ್ಪತ್ತಗುಡ್ಡ ವನ್ಯ ಜೀವಿಧಾಮ ಹಿಂಪಡೆದರೆ ಉಗ್ರ ಹೋರಾಟ

ಪಡೆದಿರುವ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದ್ದು, ಈ ಸ್ಥಾನಮಾನದಿಂದ ಹಿಂಪಡೆದರೆ ಉಗ್ರ ಹೋರಾಟ| ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದಿಂದ ಸರ್ಕಾರಕ್ಕೆ ಮನವಿ| ವನ್ಯಜೀವಿಧಾಮದ ಅಭಿವೃದ್ಧಿಗೆ ಅಗತ್ಯ ಯೋಜನೆ ರೂಪಿಸಬೇಕು| ಅರಣ್ಯ ಸಂರಕ್ಷಣೆಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಸಮಗ್ರ ಕಪ್ಪತ್ತಗುಡ್ಡ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಕೈಗೊಳ್ಳಬೇಕು| 

karnataka Rakshana Vedike Talks Over Kappatagudda
Author
Bengaluru, First Published Jun 4, 2020, 8:50 AM IST

ಶಿರಹಟ್ಟಿ(ಜೂ.04): ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಖ್ಯಾತಿ ಪಡೆದಿರುವ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದ್ದು, ಈ ಸ್ಥಾನಮಾನದಿಂದ ಹಿಂಪಡೆದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಈ ವೇಳೆ ಕರವೇ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ, ಅನೇಕ ಜನ ಹೋರಾಟಗಾರರಿಂದಾಗಿ ಕಪ್ಪತ್ತಗುಡ್ಡವು ವನ್ಯಜೀವಿಧಾಮ ಎಂದು ಘೋಷಣೆಯಾಗಿದ್ದು, ಬೇರೆ ಬೇರೆ ಕಾರಣಗಳ ನೆಪವೊಡ್ಡಿ ಈ ಸ್ಥಾನಮಾನ ಹಿಂಪಡೆಯಲು ಮುಂದಾಗುತ್ತಿರುವುದು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವುದು ಕಂಡುಬರುತ್ತಿದೆ. ಇದು ಪರಿಸರವಾದಿಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ದೂರಿದರು.

'ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ರಕ್ಷಣೆಗೆ ಕಾಂಗ್ರೆಸ್‌ ಸಿದ್ಧ'

ಗದಗ, ಶಿರಹಟ್ಟಿ, ಮುಂಡರಗಿ ತಾಲೂಕುಗಳು ಸೇರಿ ಒಟ್ಟು 33 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆವರಿಸಿಕೊಂಡಿರುವ ಕಪ್ಪತ್ತಗುಡ್ಡ ಇದರಲ್ಲಿ 24.415 ಹೆಕ್ಟೇರ್‌ ಪ್ರದೇಶವನ್ನು ವನ್ಯಜೀವಿಧಾಮ ಎಂದು ಘೋಷಿಸಿದ್ದು, ಇದರಲ್ಲಿ 4 ಭಾಗಗಳಾಗಿ ವಿಂಗಡಿಸಿದ್ದು, 2 ಭಾಗಗಳಲ್ಲಿ ಗಣಿಗಾರಿಕೆ ಮಾಡಲು ಕೆಲವು ಜನಪ್ರತಿನಿಧಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಮೇಲೆ ಪ್ರಭಾವ ಬೀರಿ 3, 4 ವಿಭಾಗದ ಅರಣ್ಯ ಪ್ರದೇಶವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶದಿಂದ ಮುಕ್ತಿಗೊಳಿಸಿ ಕಪ್ಪತ್ತಗುಡ್ಡದಲ್ಲಿರುವ ಅಪಾರ ಪ್ರಮಾಣದ ಖನಿಜ ಸಂಪತ್ತನ್ನು ಲೂಟಿ ಮಾಡುವ ಹುನ್ನಾರಕ್ಕೆ ಇಳಿದಿದ್ದು, ಕಪ್ಪತ್ತಗುಡ್ಡದ ಅರಣ್ಯ ಪ್ರದೇಶವನ್ನು ಅವೈಜ್ಞಾನಿಕವಾಗಿ 4 ಭಾಗಗಳಾಗಿ ವಿಂಗಡಣೆ ಮಾಡಿದ್ದನ್ನು ರದ್ದುಪಡಿಸಿಬೇಕು ಎಂದು ಒತ್ತಾಯಿಸಿದರು.

ವನ್ಯಜೀವಿಧಾಮದ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಬೇಕು. ಅರಣ್ಯ ಸಂರಕ್ಷಣೆಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಸಮಗ್ರ ಕಪ್ಪತ್ತಗುಡ್ಡ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಪ್ಪತ್ತಗುಡ್ಡದಲ್ಲಿ ಹಣದ ದುರಾಸೆಗಾಗಿ ಯಾವುದೇ ರೀತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ್ದೇ ಆದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ನಿವಾಸದೆದುರು ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಹಸೀಲ್ದಾರ್‌ ಯಲ್ಲಪ್ಪ ಗೋಣೆಣ್ಣನವರ ಮನವಿ ಸ್ವೀಕರಿಸಿದರು. ಈ ವೇಳೆ ಸಂಘಟನೆಯ ಶರಣಪ್ಪ ಕಲ್ಲಪ್ಪನವರ, ದೇವೇಂದ್ರ ಶೀಧೆ, ಅನ್ನಪೂರ್ಣ ಕಟ್ಟೇಕಾರ, ರಂಗಪ್ಪ ಗೋಪಾಳಿ, ಇಂತಿಯಾಜ ಪಟವೇಗಾರ, ನೂರಅಹ್ಮದ ಮುಳಗುಂದ, ಅನ್ವರ ಬರದ್ವಾಡ, ಮಂಜುನಾಥ ಭಜಂತ್ರಿ, ಅನೀಲ ಬಾರಕೇರ, ನಿರ್ಮಲಾ ಮತ್ತೂರ, ಎನ್‌.ಎಸ್‌. ದಳವಿ ಸೇರಿದಂತೆ ಅನೇಕರು ಇದ್ದರು.
 

Follow Us:
Download App:
  • android
  • ios